ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ‘ಕರಾವಳಿ’ ಶೀರ್ಷಿಕೆ; ಟೀಸರ್​ ನೋಡಿ ವಾವ್​ ಎಂದ ಸಿನಿಪ್ರಿಯರು

|

Updated on: Dec 10, 2023 | 2:18 PM

ಕಥೆಯ ಎಳೆಯ ಬಗ್ಗೆ ಕೌತುಕ ಮೂಡುವ ರೀತಿಯಲ್ಲಿ ‘ಕರಾವಳಿ’ ಟೀಸರ್​ ಮೂಡಿಬಂದಿದೆ. ಕೋಣದ ಮೇಲೆ ಕುಳಿತಿರುವ ಪ್ರಜ್ವಲ್​ ದೇವರಾಜ್​ ಅವರ ಫಸ್ಟ್​ ಲುಕ್​ ಗಮನ ಸೆಳೆಯುತ್ತಿದೆ. ಗುರುದತ್ತ್ ಗಾಣಿಗ ನಿರ್ದೇಶನದ ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭ ಆಗಲಿದೆ.

ಪ್ರಜ್ವಲ್​ ದೇವರಾಜ್​ ಹೊಸ ಸಿನಿಮಾಗೆ ‘ಕರಾವಳಿ’ ಶೀರ್ಷಿಕೆ; ಟೀಸರ್​ ನೋಡಿ ವಾವ್​ ಎಂದ ಸಿನಿಪ್ರಿಯರು
ಪ್ರಜ್ವಲ್​ ದೇವರಾಜ್​
Follow us on

ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಹಾಗೂ ನಿರ್ದೇಶಕ ಗುರುದತ್​ ಗಾಣಿಗ ಅವರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಗಿದೆ. ರೋಚಕವಾದ ಟೀಸರ್​ ಮೂಲಕ ಟೈಟಲ್​ ಏನು ಎಂಬುದನ್ನು ಘೋಷಿಸಲಾಗಿದೆ. ಈ ಸಿನಿಮಾಗೆ ‘ಕರಾವಳಿ’ (Karavali) ಎಂದು ಹೆಸರು ಇಡಲಾಗಿದೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿಯನ್ನು ತೋರಿಸಲಾಗುತ್ತದೆ. ಕಂಬಳದ ಕಹಾನಿ ಇದರಲ್ಲಿ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತೆ ಈ ಟೀಸರ್​ (Karavali Teaser) ಮೂಡಿಬಂದಿದೆ. ಪ್ರಜ್ವಲ್​ ದೇವರಾಜ್​ ಅವರ ಅಭಿಮಾನಿಗಳಿಂದ ಈ ಟೀಸರ್​ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಕರಾವಳಿ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಅನ್ನು ಮಂಗಳೂರಿನಲ್ಲಿ ಗ್ರ್ಯಾಂಡ್​ ಆಗಿ ಲಾಂಚ್ ಮಾಡಲಾಗಿದೆ. ಈ ಸಿನಿಮಾದಲ್ಲಿ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮತ್ತು ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಅವರ ಕಾಂಬಿನೇಷನ್​ ಇರಲಿದೆ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಗುರುದತ್ ಅವರ ನಿರ್ದೇಶನದ 2ನೇ ಸಿನಿಮಾ ಇದಾಗಿದ್ದು, ಟೀಸರ್​ ಮೂಲಕ ಅವರು ಭರವಸೆ ಮೂಡಿಸಿದ್ದಾರೆ. ಕರಾವಳಿ ಭಾಗದ ಸಂಸ್ಕೃತಿ, ಯಕ್ಷಗಾನ, ದೈವ, ಕಂಬಳ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ.

ಕಥೆಯ ಎಳೆಯ ಬಗ್ಗೆ ಕೌತುಕ ಮೂಡುವ ರೀತಿಯಲ್ಲಿ ‘ಕರಾವಳಿ’ ಟೀಸರ್​ ಮೂಡಿಬಂದಿದೆ. ಈ ಟೀಸರ್ ಗಮನಿಸಿದರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕಥೆ ಇದರಲ್ಲಿ ಇರಬಹುದೇ ಎಂಬ ಕೌತುಕ ಸೃಷ್ಟಿಯಾಗುವಂತಿದೆ. ಹಿನ್ನೆಲೆಯಲ್ಲಿ ಕೇಳಿಸುವ ಯಕ್ಷಗಾನದ ಧ್ವನಿಯಿಂದ ಟೀಸರ್‌ನ ರೋಚಕತೆ ಹೆಚ್ಚಾಗಿದೆ. ಕೋಣದ ಮೇಲೆ ಕುಳಿತು ಪ್ರಜ್ವಲ್​ ದೇವರಾಜ್​ ಎಂಟ್ರಿ ನೀಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Prajwal Devaraj: ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ಹೊರಟ ಪ್ರಜ್ವಲ್​ ದೇವರಾಜ್​; ಈ ಚಿತ್ರದ ಹೆಸರು ‘ಜಾತರೆ’

ಮಂಗಳೂರಿನಲ್ಲಿ ‘ಕರಾವಳಿ’ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ. ಶೀಘ್ರದಲ್ಲೇ ಶೂಟಿಂಗ್​ ಆರಂಭ ಆಗಲಿದೆ. ಸಚಿನ್ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ ಈವರೆಗೂ ಮಾಡಿರದಂತಹ ಪಾತ್ರ ಈ ಸಿನಿಮಾದಲ್ಲಿ ಇರಲಿದೆ. ಇದು ಅವರ 40ನೇ ಸಿನಿಮಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.