‘ಕಡಲ ನಾಡಿಗೆ ಸ್ವಾಗತ’: ‘ಕರಾವಳಿ’ ಸಿನಿಮಾ ಟೈಟಲ್ ಸಾಂಗ್ ರಿಲೀಸ್

Karavali movie: ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟ ನಟನೆಯ ‘ಕರಾವಳಿ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಭಿನ್ನ ಕತೆಯ, ಭಿನ್ನ ನಿರೂಪಣೆಯ ಈ ಸಿನಿಮಾ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಇತ್ತೀಚೆಗಷ್ಟೆ ಘೋಷಿಸಲಾಗಿದ್ದು, ಸಿನಿಮಾದ ಪ್ರಚಾರವೂ ಆರಂಭವಾಗಿದೆ. ಇದೀಗ ‘ಕರಾವಳಿ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿದೆ.

‘ಕಡಲ ನಾಡಿಗೆ ಸ್ವಾಗತ’: ‘ಕರಾವಳಿ’ ಸಿನಿಮಾ ಟೈಟಲ್ ಸಾಂಗ್ ರಿಲೀಸ್
Karavali

Updated on: Jun 26, 2026 | 1:05 PM

ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟ ನಟನೆಯ ‘ಕರಾವಳಿ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಭಿನ್ನ ಕತೆಯ, ಭಿನ್ನ ನಿರೂಪಣೆಯ ಈ ಸಿನಿಮಾ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಇತ್ತೀಚೆಗಷ್ಟೆ ಘೋಷಿಸಲಾಗಿದ್ದು, ಸಿನಿಮಾದ ಪ್ರಚಾರವೂ ಆರಂಭವಾಗಿದೆ. ಇದೀಗ ‘ಕರಾವಳಿ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿದೆ.

‘ಕರಾವಳಿ’ ಸಿನಿಮಾದ ಕತೆಯಂತೆ ಈ ಹಾಡು ಸಹ ಕರಾವಳಿಯ ಭೌಗೋಳಿಕ ಭಿನ್ನತೆ, ಸಂಸ್ಕೃತಿ, ಜನರ ಆಚರಣೆ ಇನ್ನಿತರೆಗಳನ್ನು ಪ್ರಮುಖವಾಗಿ ಒಳಗೊಂಡಿದ್ದು, ಕರಾವಳಿ ಜನ ಜೀವನವನ್ನು ಸಾಹಿತ್ಯ ಮತ್ತು ಸಂಗೀತದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದೆ. ‘ಕಡಲಿಂದ ನಾಡು, ಕಡಲಿಂದ ಕಾಡು, ಕಡಲಿಂದ ತಾನೆ ಒಡಲಾಗೂಡು’ ಎಂಬ ಹಾಡು ಕರಾವಳಿ ಜನರ ಮನ ಗೆಲ್ಲುವುದು ಖಾತ್ರಿ. ಬಿಡುಗಡೆ ಆಗಿರುವ ಹಾಡಿನಲ್ಲಿ ಕಂಬಳವೇ ಹೈಲೆಟ್ ಆಗಿದೆ. ‘ಕರಾವಳಿ’ ಸಿನಿಮಾ ಸಹ ಕಂಬಳದ ಸುತ್ತಲೇ ಸುತ್ತುತ್ತದೆ.

‘ಕರಾವಳಿ’ ಸಿನಿಮಾದ ಈ ಹಾಡಿನ ಸಂಪೂರ್ಣ ಚಿತ್ರೀಕರಣ ಕಟಪಾಡಿ ಕಂಬಳ ಟ್ರ್ಯಾಕ್ ನಲ್ಲಿ ಮಾಡಲಾಗಿದೆ. ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಂಬಳಗಳಲ್ಲಿಯೇ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವ ಕಂಬಳ ಕಟಪಾಡಿ ಕಂಬಳ. ತೀರಾ ಸಾಂಪ್ರಾದಾಯಿಕವಾಗಿ ಇಲ್ಲಿ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷ ಎಂದರೆ ಸುಮಾರು 700ವರ್ಷಗಳಿಂದನೂ ಒಂದೇ ಕುಟುಂಬ ಕಂಬಳ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್, ರಾಗಿಣಿ ಅವರ ಭಾನುವಾರ ಹೀಗಿತ್ತು

ಇಷ್ಟು ದೊಡ್ಡ ಇತಿಹಾಸ ಇರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಕರಾವಳಿ ತಂಡ ಅವಕಾಶವನ್ನು ಅಷ್ಟೆ ಅದ್ಭುತವಾಗಿ ಬಳಸಿಕೊಂಡಿದೆ ಎಂಬುದು ಹಾಡಿನಿಂದ ಗೊತ್ತಾಗುತ್ತಿದೆ. ಹಾಡಿಗೆ ಒದಗಿರುವಂತೆ ಸುಂದರವಾಗಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಈಗ ಬಿಡುಗಡೆ ಆಗಿರುವ ಹಾಡನ್ನು ಗಾಯಕ ಸಾಯಿ ವಿಗ್ನೇಶ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಈ ಹಾಡಿಗಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಕರಾವಳಿ’ ಸಿನಿಮಾವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್‌ ನಾಯಕ, ರಾಜ್ ಬಿ ಶೆಟ್ಟಿ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ನಾಕಿಯಾಗಿ ಸಂಪದಾ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಸಿನಿಮಾನಲ್ಲಿ ಪ್ರತಿಭಾವಂತ ತಂತ್ರಜ್ಞರ ತಂಡವೇ ಇದೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯನ್ನು ಮಾಡುತ್ತಿರುವುದು ವಿಶೇಷ. ಸಿನಿಮಾ ಜುಲೈ 24ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us