ಧನುಷ್ ನಟನೆಯ ಹೊಸ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಆದರೆ, ಚಿತ್ರೀಕರಣದ ವೇಳೆ ಅವರು ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ, ಅವರು ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸದ್ಯ, ಅವರು ವಿಶ್ರಾಂತಿಯಲ್ಲಿದ್ದಾರೆ. ಆದರೆ, ಇದರಿಂದ ಅವರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಟಾಲಿವುಡ್ ನಟ ಅರುಣ್ ವಿಜಯ್ 33ನೇ ಚಿತ್ರಕ್ಕಾಗಿ ನಿರ್ದೇಶಕ ಹರಿ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ಆರಂಭಗೊಂಡಿದೆ. ಈ ಚಿತ್ರದಲ್ಲಿ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಈಗ ಅವರು ಚಿತ್ರತಂಡದಿಂದ ಹೊರ ನಡೆದಿದ್ದಾರೆ. ಸದ್ಯ ಪ್ರಕಾಶ್ ರೈಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿಯಾಗುವ ತನಕ ಒಂದಷ್ಟು ಸಮಯ ಹಿಡಿಯಲಿದೆ. ಅಲ್ಲದೆ, ಈಗ ಅವರು ಒಪ್ಪಿಕೊಂಡಿರುವ ಪ್ರಾಜೆಕ್ಟ್ಗಳ ಶೂಟಿಂಗ್ ವಿಳಂಬವಾಗಲಿದ್ದು, ಅದನ್ನು ಮೊದಲು ಪೂರ್ಣಗೊಳಿಸಬೇಕಿದೆ. ಹೀಗಾಗಿ, ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಈ ಕಾರಣಕ್ಕೆ ಸಿನಿಮಾದಿಂದ ಹೊರಗೆ ಬರುವ ನಿರ್ಧಾರಕ್ಕೆ ಪ್ರಕಾಶ್ ರೈ ಬಂದಿದ್ದಾರೆ.
ಪ್ರಕಾಶ್ ರೈಗೆ ಆರಂಭದಲ್ಲಿ ಕೆಲ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸುವ ಅನಿವಾರ್ಯತೆ ಇತ್ತು. ಈ ಕಾರಣಕ್ಕೆ ಅವರು ಅರುಣ್ ವಿಜಯ್ ಸಿನಿಮಾ ಸೆಟ್ ಸೇರೋದು ವಿಳಂಬವಾಗಿತ್ತು. ಈ ಚಿತ್ರಕ್ಕಾಗಿ ಪ್ರಕಾಶ್ ಅಡ್ವಾನ್ಸ್ ಹಣ ಕೂಡ ಪಡೆದಿದ್ದರು. ಆದರೆ, ಈಗ ಅವರು ಗಾಯಗೊಂಡಿರುವುದರಿಂದ ಸಿನಿಮಾದಿಂದ ಹೊರಗೆ ಉಳಿಯುವುದು ಅನಿವಾರ್ಯ ಆಗಿದೆ. ಹೀಗಾಗಿ, ಈ ಅಡ್ವಾನ್ಸ್ ಹಣವನ್ನು ಪ್ರಕಾಶ್ ರೈ ಹಿಂದಿರುಗಿಸಬೇಕಿದೆ. ಈ ಕಾರಣದಿಂದ ಹಲವು ಸಿನಿಮಾ ಪ್ರಾಜೆಕ್ಟ್ಗಳು ಅವರ ಕೈತಪ್ಪುವ ಸಾಧ್ಯತೆ ಇದೆ.
ಇತ್ತೀಚೆಗೆ ಟಾಲಿವುಡ್ನ ಮೂವೀ ಆರ್ಟಿಸ್ಟ್ ಅಸೋಶಿಯೇಷನ್ (MAA) ಚುನಾವಣೆ ಕಾರಣಕ್ಕಾಗಿ ಪ್ರಕಾಶ್ ರೈ ಸುದ್ದಿ ಆಗಿದ್ದರು. MAA ಚುನಾವಣೆಯಲ್ಲಿ ಅವರು ಪ್ರೆಸಿಡೆಂಟ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಆದರೆ ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ಪ್ರಕಾಶ್ ರೈ ಅವರು ಮೂಲತಃ ತೆಲುಗು ಕಲಾವಿದ ಅಲ್ಲ. ಹಾಗಾಗಿ ಅವರು ಮಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತಕರಾರು ತೆಗೆಯಲಾಗಿದೆ. ಅದಕ್ಕೆ ಪ್ರಕಾಶ್ ರೈ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಸರ್ಜರಿ ಬಳಿಕ ಚಿರಂಜೀವಿ ಜೊತೆ ಪ್ರಕಾಶ್ ರೈ ಫೋಟೋ ವೈರಲ್; ಇನ್ನಷ್ಟು ಹೆಚ್ಚಿತು ಅನುಮಾನ
Prakash Raj: ಮಕ್ಕಳ ಎದುರಲ್ಲೇ ಪ್ರಕಾಶ್ ರೈ ಮತ್ತೊಮ್ಮೆ ಮದುವೆ; ಇಲ್ಲಿವೆ ಖುಷಿಯ ಕ್ಷಣದ ಫೋಟೋಗಳು