ಪ್ರಣಂ ದೇವರಾಜ್ ಹೊಸ ಸಿನಿಮಾ, ಸೆಟ್ಟೇರಿತು ‘S/O ಮುತ್ತಣ್ಣ’

|

Updated on: Jan 10, 2024 | 2:45 PM

Pranam Devraj: ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗಕ್ಕೆ ಸಹ ಕಾಲಿಟ್ಟಿದ್ದಾರೆ. ಇದೀಗ ಅವರು ‘s/o ಮುತ್ತಣ್ಣ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದು ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದೆ.

ಪ್ರಣಂ ದೇವರಾಜ್ ಹೊಸ ಸಿನಿಮಾ, ಸೆಟ್ಟೇರಿತು ‘S/O ಮುತ್ತಣ್ಣ’
ಪ್ರಣಂ ದೇವರಾಜ್ ಹೊಸ ಸಿನಿಮಾ
Follow us on

ಡೈನಮಿಕ್ ಸ್ಟಾರ್ ದೇವರಾಜ್ (Devaraj) ಅವರ ಎರಡನೇ ಪುತ್ರ ಪ್ರಣಂ ದೇವರಾಜ್ (Pranam Devaraj) ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಅಣ್ಣ ಪ್ರಜ್ವಲ್ ದೇವರಾಜ್​ರಂತೆ ಮೊದಲ ಸಿನಿಮಾದಲ್ಲಿಯೇ ‘ಸಿಕ್ಸರ್’ ಹೊಡೆಯಲು ಪ್ರಣಂಗೆ ಸಾಧ್ಯವಾಗಿಲ್ಲವಾದರೂ ಪ್ರಯತ್ನ ನಿಲ್ಲಿಸಿಲ್ಲ. ಇದೀಗ ಅವರ ನಟನೆಯ ಹೊಸ ಸಿನಿಮಾ ಒಂದು ಸೆಟ್ಟೇರಿದ್ದು, ಸಿನಿಮಾದ ಹೆಸರು ಡಾ ರಾಜ್​ಕುಮಾರ್ ಅವರ ಹಳೆಯ ಕ್ಲಾಸಿಕ್ ಸಿನಿಮಾ ನೆನಪಿಸುವಂತಿದೆ.

ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರರಂಗಕ್ಕೆ ಸಹ ಕಾಲಿಟ್ಟಿದ್ದಾರೆ. ಅವರು ನಟಿಸಿದ್ದ ಮೊದಲ ಸಿನಿಮಾ ‘ಕುಮಾರಿ 21 ಎಫ್’ ಗಮನ ಸೆಳೆಯಿತಾದರೂ ದೊಡ್ಡ ಮಟ್ಟದ ಯಶಸ್ಸು ಕಾಣುವಲ್ಲಿ ವಿಫಲವಾಯ್ತು. ದೀಗ ಪ್ರಣಂ, ‘S/O ಮುತ್ತಣ್ಣ’ನಾಗಲು ಸಜ್ಜಾಗಿದ್ದಾರೆ.

ಯಂಗ್ ಡೈನಾಮಿಕ್ ಪ್ರಣಂ ದೇವರಾಜ್ ನಟಿಸುತ್ತಿರುವ ‘S/O ಮುತ್ತಣ್ಣ’ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ‘S/O ಮುತ್ತಣ್ಣ’ ಸಿನಿಮಾದ ಮುಹೂರ್ತ ನೆರವೇರಿತು. ಮಗನ ಹೊಸ ಸಿನಿಮಾಕ್ಕೆ ಹಾರೈಸಲೆಂದು ದೇವರಾಜ್ ದಂಪತಿ ಆಗಮಿಸಿ ಚಿತ್ರತಂಡಕ್ಕೆ ತಮ್ಮ ಮಗನಿಗೆ ಶುಭಾಶಯ ಕೋರಿದರು. ‘S/O ಮುತ್ತಣ್ಣ’ ಸಿನಿಮಾವನ್ನು ಶ್ರೀಕಾಂತ್ ಹುಣ್ಸೂರ್ ನಿರ್ದೇಶನ ಮಾಡುತ್ತಿದ್ದಾರೆ. ಆರ್ ಚಂದ್ರು ಹಾಗೂ ಪ್ರೇಮ್ಸ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶ್ರೀಕಾಂತ್, ಈ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಇದನ್ನೂ ಓದಿ:‘ಮಾಫಿಯಾ’ ಚಿತ್ರದ ಹೊಸ ಹಾಡು ರಿಲೀಸ್​; ಪ್ರಜ್ವಲ್ ದೇವರಾಜ್​ ಜತೆ ಅದಿತಿ ಪ್ರಭುದೇವ ರೊಮ್ಯಾಂಟಿಕ್ ಗೀತೆ

ಪ್ರಣಂ ದೇವರಾಜ್ ನಾಯಕನಾಗಿ ನಟಿಸುತ್ತಿರುವ ‘S/O ಮುತ್ತಣ್ಣ’ ಸಿನಿಮಾದಲ್ಲಿ ಹಲವು ಹಿರಿಯ ನಟರು ನಟಿಸುತ್ತಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಸಿನಿಮಾದ ಕೆಲವು ಪ್ರಮುಖ ಪಾತ್ರಗಳಗೆ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಹೇಳುತ್ತಿರುವಂತೆ ಈ ಸಿನಿಮಾ ಅಪ್ಪ-ಮಗನ ಬಾಂಧವ್ಯದ ಕಥೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ. ‘S/O ಮುತ್ತಣ್ಣ’ ಸಿನಿಮಾಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಮಾಡುತ್ತಿದ್ದಾರೆ. ಹರೀಶ್ ಕೊಮ್ಮೆ ಸಂಕಲನ ಮಾಡಿದ್ದಾರೆ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸದ್ಯ ಚಿತ್ರತಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದೆ. ಆದಷ್ಟು ಶೀಘ್ರವಾಗಿ ಸಿನಿಮಾವನ್ನು ತೆರೆಗೆ ತರುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ