Pranitha Marriage: ನಟಿ ಪ್ರಣಿತಾ ಮದುವೆ ಫೋಟೋ ವೈರಲ್​; ಲಾಕ್​ಡೌನ್​ನಲ್ಲಿ ಗುಟ್ಟಾಗಿ ಹಸೆಮಣೆ ಏರಿದ ‘ಪೊರ್ಕಿ’ ಬೆಡಗಿ

| Updated By: Digi Tech Desk

Updated on: May 31, 2021 | 1:38 PM

Pranitha Wedding Photos: ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಪ್ರಣಿತಾ ಮದುವೆ ನಡೆದಿದೆ. ನಿತಿನ್​ ರಾಜ್​ ಎಂಬ ಉದ್ಯಮಿ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Pranitha Marriage: ನಟಿ ಪ್ರಣಿತಾ ಮದುವೆ ಫೋಟೋ ವೈರಲ್​; ಲಾಕ್​ಡೌನ್​ನಲ್ಲಿ ಗುಟ್ಟಾಗಿ ಹಸೆಮಣೆ ಏರಿದ ‘ಪೊರ್ಕಿ’ ಬೆಡಗಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್​
Follow us on

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರಣಿತಾ ಸುಭಾಷ್​ ಅವರು ಹಸೆಮಣೆ ಏರಿದ್ದಾರೆ. ಲಾಕ್​ಡೌನ್​ನಲ್ಲಿ ಅವರು ಸದ್ದಿಲ್ಲದೆ ಮದುವೆ ಆಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದಲೇ ಹರಿದಾಡುತ್ತಿತ್ತು. ಆದರೆ ಆ ಬಗ್ಗೆ ಪ್ರಣಿತಾ ಅವರು ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಪ್ರಣಿತಾ ಮದುವೆಯ ಫೋಟೋಗಳ ಬಹಿರಂಗ ಆಗಿವೆ. ಆ ಮೂಲಕ ಅವರು ಸಪ್ತಪದಿ ತುಳಿದಿರುವುದಕ್ಕೆ ಸೂಕ್ತ ಸಾಕ್ಷಿ ಸಿಕ್ಕಂತಾಗಿದೆ.

2010ರಲ್ಲಿ ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರಣಿತಾ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಅವರಿಗೆ ದರ್ಶನ್​ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ತಮಿಳು ಮತ್ತು ತೆಲುಗಿನಲ್ಲಿಯೂ ಅವರು ಗುರುತಿಸಿಕೊಂಡರು. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕೆಲಸಗಳಲ್ಲೂ ಪ್ರಣಿತಾ ತೊಡಗಿಕೊಂಡಿದ್ದಾರೆ. ಆ ಮೂಲಕ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಈಗ ಅವರು ಗುಟ್ಟಾಗಿ ಮದುವೆ ಆಗಿರುವುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

(ಉದ್ಯಮಿ ನಿತಿನ್​ ರಾಜು​ ಜೊತೆ ಹಸೆಮಣೆ ಏರಿದ ಪ್ರಣಿತಾ ಸುಭಾಷ್​)

ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಪ್ರಣಿತಾ ಮದುವೆ ನಡೆದಿದೆ. ನಿತಿನ್​ ರಾಜ್​ ಎಂಬ ಉದ್ಯಮಿ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂರು ದಿನದ ಹಿಂದೆ ಮದುವೆ ವಿಚಾರ ಹರಿದಾಡುತ್ತಿದ್ದಂತೆಯೇ ಅವರನ್ನು ಸಂಪರ್ಕಿಸಲು ಮಾಧ್ಯಮದವರು ಪ್ರಯತ್ನಿಸಿದ್ದರು. ಆದರೆ ‘ನಾನಿನ್ನೂ ಮದುವೆ ಆಗಿಲ್ಲ’ ಎನ್ನುವ ಮೂಲಕ ಸುದ್ದಿಯನ್ನು ಅವರು ತಳ್ಳಿ ಹಾಕಿದ್ದರು. ಆದರೆ ಈಗ ಫೋಟೋಗಳು ಲಭ್ಯವಾಗಿದ್ದು, ಮದುವೆ ನಡೆದಿರುವುದು ಖಚಿತ ಆಗಿದೆ.

ಪೊರ್ಕಿ, ಭೀಮ ತೀರದಲ್ಲಿ, ಬ್ರಹ್ಮ, ಮಾಸ್​ ಲೀಡರ್​ ಮುಂತಾದ ಸಿನಿಮಾಗಳಲ್ಲಿ ಪ್ರಣಿತಾ ನಟಿಸಿದ್ದಾರೆ. ಬಾಲಿವುಡ್​ಗೂ ಕಾಲಿಟ್ಟಿರುವ ಅವರು ‘ಭುಜ್’​, ‘ಹಂಗಾಮಾ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ವಿಷ್ಣುವರ್ಧನ್​ ಓದಿದ ಕನ್ನಡ ಮಾಧ್ಯಮ ಶಾಲೆ ಉಳಿಸಲು ಪಣತೊಟ್ಟ ನಟಿ ಪ್ರಣಿತಾ ಸುಭಾಷ್​

ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟ ವಧು, ಅದೇ ಮುಹೂರ್ತದಲ್ಲಿ ಅವಳ ತಂಗಿಗೆ ತಾಳಿ ಕಟ್ಟಿದ ವರ!

Published On - 1:25 pm, Mon, 31 May 21