ನಟಿ, ಸ್ಟಾರ್ ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದಾರೆ. ಶೀಘ್ರವೇ 28 ಸೆಕೆಂಡ್ಗಳ ಆಡಿಯೋ ಬಾಂಬ್ ಬಿಡುಗಡೆ ಮಾಡಿ, ರಾಜಕೀಯ ವ್ಯಕ್ತಿಯ ಪ್ರಭಾವ ಬಗ್ಗೆ ಮಾಹಿತಿ ನೀಡುವೆ ಎಂದು ಅವರು ಹೇಳಿದ್ದಾರೆ. ‘‘ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ದಾಖಲೆ ರಿಲೀಸ್ ಮಾಡಲಾಗುವುದು. ಅನುಶ್ರೀಗೆ ಬೆಂಗಳೂರಿನ ಮನೆ, ಮಂಗಳೂರಿನ ಮನೆ ಹೇಗೆ ಬಂತು? 12 ಕೋಟಿಯ ಮನೆ ಹೇಗೆ ಬಂತು ಎಂದು ಅವರು ತಿಳಿಸಬೇಕು’’ ಎಂದು ಸಂಬರಗಿ ಆಗ್ರಹಿಸಿದ್ದಾರೆ.
ನವೆಂಬರ್ 1ರಂದು ಶುಗರ್ ಡ್ಯಾಡಿ ಪುಸ್ತಕ ಬಿಡುಗಡೆ ಆಗಲಿದೆ ಹಾಗೂ ನಾಗೇಂದ್ರ ಪ್ರಸಾದ್ ಬರೆದಿರುವ ನಶೆ ನಶೆ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಪುಸ್ತಕದಲ್ಲಿ ಶುಗರ್ಡ್ಯಾಡಿ ಯಾರು ಎಂಬುದನ್ನೂ ಬಹಿರಂಗಗೊಳಿಸುತ್ತೇನೆ ಎಂದು ಅವರು ತಿಳಿಸಿದ್ಧಾರೆ. ಕರ್ನಾಟಕ ಉಡ್ತಾ ಪಂಜಾಬ್ ಆಗೊದನ್ನು ತಡೆಯಬೇಕಾಗಿದೆ. ಈ ಡ್ರಗ್ಸ್ ಪ್ರಕರಣವನ್ನ ರೀ-ಓಪನ್ ಮಾಡಬೇಕು. ಕೊರೊನಾ ಬಂದಿರಲಿಲ್ಲ ಅಂದರೆ ಉಡ್ತಾ ಕರ್ನಾಟಕ ಆಗ್ತಿತ್ತು. ಕೊರೊನಾದಿಂದ ಡ್ರಗ್ಸ್ ಪ್ರಕರಣಗಳು ಕಡಿಮೆಯಾಗಿವೆ ಎಂದು ಇದೇ ವೇಳೆ ಸಂಬರಗಿ ಹೇಳಿದ್ದಾರೆ.
ಚಾರ್ಜ್ಶೀಟಿನ ಕುರಿತು ಮಾತನಾಡಿದ ಅವರು ‘‘ಒಬ್ಬರನ್ನ ತಪ್ಪಿಸಲು ಹೋಗಿ ಮತ್ತೊಬ್ಬ ಆರೋಪಿಯನ್ನ ಬಿಟ್ಟಿದ್ದಾರೆ. ಚಾರ್ಜ್ ಶೀಟ್ನಲ್ಲಿ ಆರೋಪಿ ತರುಣ್ ಹೆಸರು ಯಾಕೆ ಇಲ್ಲ. ಅನುಶ್ರೀ ನಾಲ್ಕು ಘಂಟೆ ಪೊಲೀಸ್ ಠಾಣೆಯಲ್ಲಿ ಇದ್ದರು. ಅವರ ಹೇಳಿಕೆ ಒಂದು ಪೇಜ್ ಆದರೂ ಇರಬೇಕಲ್ಲ. ಅನುಶ್ರೀ ಅವರ ಹೇಳಿಕೆ ಚಾರ್ಜ್ ಶೀಟ್ನಲ್ಲಿ ಇಲ್ಲ’’ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.
ಇದನ್ನೂ ಓದಿ:
ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರ; ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೃಹ ಸಚಿವ
(Prashanth Sambaragi press conference on Anchor Anushree Drug case)
Published On - 1:04 pm, Wed, 8 September 21