21 ವರ್ಷದ ಬಳಿಕ ಒಂದಾದ ದರ್ಶನ್-ಪ್ರೇಮ್, ಈ ಬಾರಿ ರೌಡಿಸಂ ಕಥೆಯಲ್ಲ?

|

Updated on: Feb 16, 2024 | 7:09 PM

Darshan-Prem: ‘ಕರಿಯ’ ಸಿನಿಮಾದ ಬಳಿಕ ದರ್ಶನ್-ಪ್ರೇಮ್ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಈಗ 21 ವರ್ಷಗಳ ಬಳಿಕ ಮತ್ತೆ ಇಬ್ಬರೂ ಒಂದಾಗಿದ್ದಾರೆ. ಹೊಸ ಸಿನಿಮಾದ ಪ್ರೋಮೋ ಬಿಡುಗಡೆ ಮಾಡಿದ್ದಾರೆ.

21 ವರ್ಷದ ಬಳಿಕ ಒಂದಾದ ದರ್ಶನ್-ಪ್ರೇಮ್, ಈ ಬಾರಿ ರೌಡಿಸಂ ಕಥೆಯಲ್ಲ?
Follow us on

ಕರಿಯ’ (Kariya) ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು ಎನ್ನಲಾಗುತ್ತದೆ. ದರ್ಶನ್ (Darshan) ಹಾಗೂ ಪ್ರೇಮ್ (Prem) ಇಬ್ಬರ ವೃತ್ತಿ ಜೀವನದಲ್ಲಿಯೂ ಈ ಸಿನಿಮಾ ಮಹತ್ತರವಾದ ಸಿನಿಮಾ. ‘ಕರಿಯ’ ಅಂಥಹಾ ಸೂಪರ್-ಡೂಪರ್ ಹಿಟ್ ಸಿನಿಮಾ ಕೊಟ್ಟ ಬಳಿಕ ಈ ನಟ-ನಿರ್ದೇಶಕ ಜೋಡಿ ಒಂದಾಗಿರಲಿಲ್ಲ. ಇದೀಗ 21 ವರ್ಷದ ಬಳಿಕ ದರ್ಶನ್ ಹಾಗೂ ಪ್ರೇಮ್ ಒಂದಾಗುತ್ತಿದ್ದಾರೆ. ಇಬ್ಬರೂ ಮತ್ತೊಮ್ಮೆ ಸಿನಿಮಾಕ್ಕಾಗಿ ಜೊತೆಯಾಗಿದ್ದು, ದರ್ಶನ್ ಹುಟ್ಟುಹಬ್ಬದ ದಿನವಾದ ಇಂದು (ಫೆಬ್ರವರಿ 16) ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ. ಇಬ್ಬರ ಕಾಂಬಿನೇಷನ್ ಮತ್ತೆ ಬರಬೇಕೆಂದು ಬಯಸಿದ್ದ ಅಭಿಮಾನಿಗಳಿಗೆ ಇಬ್ಬರೂ ಸೇರಿ ಒಳ್ಳೆಯ ಖುಷಿಯ ಸುದ್ದಿ ಕೊಟ್ಟಿದ್ದಾರೆ.

ಪ್ರೇಮ್ ನಿರ್ದೇಶನದ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾದ ಘೋಷಣೆಯನ್ನು ಪ್ರೋಮೋ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಮಾಡಿದೆ. ಪ್ರೋಮೋನಲ್ಲಿ ಸಿನಿಮಾದ ಹೆಸರು ಘೋಷಣೆ ಮಾಡಲಾಗಿಲ್ಲವಾದರೂ, ಸಿನಿಮಾದ ಜಾನರ್ ಯಾವುದಾಗಿರಲಿದೆ ಎಂಬ ಸುಳಿವನ್ನಷ್ಟೆ ನೀಡಲಾಗಿದೆ. ಪ್ರೋಮೋ ನೋಡಿದವರಿಗೆ ಈ ಸಿನಿಮಾ ಪೌರಾಣಿಕ ಕಥೆ ಆಧರಿತವಾಗಿರಲಿದೆಯಾ ಎಂಬ ಅನುಮಾನ ಮೂಡುತ್ತದೆ.

ಪ್ರೋಮೋನಲ್ಲಿ ಆಂಜನೇಯನ ಗದೆ ಕಾಣುತ್ತದೆ, ‘ನನ್ನ ಕೊನೆ ಉಸಿರಿರೋ ವರೆಗೂ ಈ ಭೂಮಿ ಮೇಲೆ, ನಿನ್ನ ಒಂದ್ ಹನಿ ರಕ್ತಾನೂ ಸೋಕೋದಕ್ಕೆ ನಾನ್ ಬಿಡಲ್ಲ’ ಎಂದು ದರ್ಶನ್​ರ ಹಿನ್ನೆಲೆ ಧ್ವನಿ ಕೇಳಿ ಬರುತ್ತದೆ. ಅದರ ಬೆನ್ನಲ್ಲೆ ಗಧೆ, ತ್ರಿಷೂಲ, ಭಗವಾ ಧ್ವಜ ಹಾರುತ್ತಿರುವ ಮಂದಿರ, ಚಿನ್ನದ ಬಣ್ಣದ ಅಲುಗಿನ ಭರ್ಜಿಗಳು ಕಾಣಿಸಿಕೊಳ್ಳುತ್ತವೆ. ಹಿನ್ನೆಲೆಯಲ್ಲಿ ‘ಜೈ ಶ್ರೀರಾಮ್’ ಘೋಷಣೆಗಳು ಕೇಳಿ ಬರುತ್ತದೆ. ಒಟ್ಟಾರೆ ಒಂದು ಪೌರಾಣಿಕ ಕಥೆಯನ್ನು ನೆನಪಿಸುವಂಥಹಾ ಪ್ರೋಮೋ ಇದಾಗಿದೆ. ದರ್ಶನ್​ ಆಂಜನೇಯನ ಅಥವಾ ಆಂಜನೇಯನ ಭಕ್ತನ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿರಬಹುದೆಂಬ ಊಹೆ ಮಾಡಬಹುದಾಗಿದೆ.

ಇದನ್ನೂ ಓದಿ:ದರ್ಶನ್​ಗೆ ಆರತಿ ಬೆಳಗಿದ ಹೆಣ್ಮಕ್ಕಳು; ಹುಟ್ಟುಹಬ್ಬದ ದಿನ ಅಭಿಮಾನದ ಹೊಳೆ

ದರ್ಶನ್ ಹಾಗೂ ಪ್ರೇಮ್​ರ ಕಾಂಬಿನೇಷನ್​ರ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್​ನಿಂದ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾದ ಇತರೆ ಪಾತ್ರವರ್ಗ, ತಂತ್ರಜ್ಞರ ಘೋಷಣೆ ಇನ್ನಷ್ಟೆ ಆಗಬೇಕಿದೆ. ಈ ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರೋಮೋನಲ್ಲಿ ಹೇಳಲಾಗಿದೆ.

ಪ್ರೇಮ್ ಪ್ರಸ್ತುತ ಧ್ರುವ ಸರ್ಜಾ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ‘ಕೆಡಿ’ ಹೆಸರಿನ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಎದುರು ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ಆ ಸಿನಿಮಾವನ್ನೂ ಸಹ ಕೆವಿಎನ್ ಅವರೇ ನಿರ್ಮಾಣ ಮಾಡಿದ್ದಾರೆ. ಇನ್ನು ದರ್ಶನ್ ಪ್ರಸ್ತುತ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ‘ಡೆವಿಲ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಿಡುಗಡೆ ಬಳಿಕ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ತರುಣ್ ಸುಧೀರ್ ಜೊತೆಗೆ ‘ಸಿಂಧೂರ ಲಕ್ಷ್ಮಣ’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ