AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಖೆ ವೇಳೆ ಪವಿತ್ರಾಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದ ಪೊಲೀಸರಿಗೆ ಈಗ ಸಂಕಷ್ಟ

ಪವಿತ್ರಾ ಗೌಡ ಮನೆಯನ್ನು ಜೂನ್ 15ರಂದು ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಕೂಡ ಅಲ್ಲಿಯೇ ಇದ್ದರು. ಪವಿತ್ರಾಗೆ ಲಿಪ್ಸ್​​ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು. ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಸದ್ಯ ಈ ಬಗ್ಗೆ ಚರ್ಚೆ ಆಗುತ್ತಿದೆ.

ತನಿಖೆ ವೇಳೆ ಪವಿತ್ರಾಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದ ಪೊಲೀಸರಿಗೆ ಈಗ ಸಂಕಷ್ಟ
ಪವಿತ್ರಾ ಗೌಡ
ರಾಜೇಶ್ ದುಗ್ಗುಮನೆ
|

Updated on: Jun 26, 2024 | 10:48 AM

Share

ನಟಿ, ದರ್ಶನ್ (Darshan) ಆಪ್ತೆ ಪವಿತ್ರಾ ಗೌಡ ಅವರು ಜೈಲಿನಲ್ಲಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಅವರಿದ್ದಾರೆ. ತಮಗೆ ಕಿರುಕುಳ ನೀಡಿದ ರೇಣುಕಾ ಸ್ವಾಮಿಯನ್ನು ದರ್ಶನ್ ಜೊತೆ ಸೇರಿ ಪವಿತ್ರಾ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಪವಿತ್ರಾಗೆ ಮೇಕಪ್ ಮಾಡಲು ಅವಕಾಶ ನೀಡಿದ ಪಿಎಸ್​ಐಗೆ ಸಂಕಷ್ಟ ಎದುರಾಗಿದೆ.

ಜೂನ್ 15ರಂದು ಪವಿತ್ರಾ ಗೌಡ ಮನೆ ಮಹಜರು ಮಾಡಲಾಗಿತ್ತು. ಈ ವೇಳೆ ಪವಿತ್ರಾ ಗೌಡ ಕೂಡ ಇದ್ದರು. ಪವಿತ್ರಾಗೆ ಲಿಪ್ಸ್​​ಟಿಕ್ ಹಚ್ಚಲು ಪಿಎಸ್ಐ ಅವಕಾಶ ಕೊಟ್ಟಿದ್ದರು. ಕರ್ತವ್ಯ ಲೋಪ ಹಿನ್ನಲೆಯಲ್ಲಿ ವಿಜಯನಗರದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಂದ ನೋಟಿಸ್ ನೀಡಲಾಗಿದೆ. ಸದ್ಯ ಈ ವಿಚಾರ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು

ಪವಿತ್ರಾ ಅವರು ಜೈಲಿನಲ್ಲಿ ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಜೈಲಿನ ಊಟ ಅವರಿಗೆ ಇಷ್ಟ ಆಗಿರಲಿಲ್ಲ. ಈ ಕಾರಣಕ್ಕೆ ಸಾಕಷ್ಟು ಬೇಸರ ಮಾಡಿಕೊಂಡಿದ್ದರು. ಕುಟುಂಬದವರು ಯಾರೂ ನೋಡಲು ಬರುತ್ತಿಲ್ಲ ಎನ್ನುವ ಟೆನ್ಷನ್ ಅವರಿಗೆ ಇತ್ತು. ಅವರ ಮಗಳು ಇತ್ತೀಚೆಗೆ ಬಂದು ಪವಿತ್ರಾನ ನೋಡಿ ಹೋಗಿದ್ದಾರೆ.

ದರ್ಶನ್ ಗನ್ ವಶಕ್ಕೆ

ನಟ ದರ್ಶನ್​​, ಪ್ರದೋಶ್ ಲೈಸೆನ್ಸ್​​ ಪಿಸ್ತೂಲ್​ ವಶಕ್ಕೆ ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆ ವೇಳೆ ಲೈಸೆನ್ಸ್ ಪಡೆದು, ಶಸ್ತ್ರಾಸ್ತ್ರ ಒಪ್ಪಿಸಬೇಕಿತ್ತು. ಆದರೆ ನಟ ದರ್ಶನ್​, ಪ್ರದೋಶ್​ ಪಿಸ್ತೂಲ್​ ವಾಪಸ್ ಮಾಡದೇ ವಿನಾಯ್ತಿ ನೀಡಲಾಗಿತ್ತು. ಈಗ ರೇಣುಕಾ ಸ್ವಾಮಿ ಕೊಲೆ ಕೇಸ್ ವಿಚಾರಣೆ ಹಿನ್ನೆಲೆಯಲ್ಲಿ ಇವರ ಗನ್ ವಶಕ್ಕೆ ಸೂಚನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.