ಬೆಂಗಳೂರು: ಕನ್ನಡ ಚಿತ್ರರಂಗದ, ಅಭಿಮಾನಿಗಳ ಪ್ರೀತಿಯ ಅಪ್ಪು, ಪುನೀತ್ ರಾಜ್ಕುಮಾರ್ ಅಂತಿಮಯಾತ್ರೆಯು ಭಾನುವಾರ (ಅಕ್ಟೋಬರ್ 31) ಮುಂಜಾನೆಯೇ ನಡೆಯಲಿದೆ. ನಾಳೆ ಮುಂಜಾನೆ ನಟ ಪುನೀತ್ ಅಂತಿಮಯಾತ್ರೆ ಆರಂಭ ಆಗಲಿದೆ ಎಂದು ತಿಳಿಸಲಾಗಿದೆ. ಮುಂಜಾನೆ 4 ರಿಂದ ನಗರದಾದ್ಯಂತ ಪೊಲೀಸರ ಭದ್ರತೆ ಇರಲಿದೆ. ಆದಷ್ಟು ಬೇಗ ಕಂಠೀರವ ಸ್ಟುಡಿಯೋ ತಲುಪಲು ನಿರ್ಧಾರ ಮಾಡಲಾಗಿದೆ. ಅಂತಿಮಯಾತ್ರೆ ಸಾಗಲಿರುವ ಪ್ರತಿ ಜಂಕ್ಷನ್ನಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಅಂತಿಮಯಾತ್ರೆ ವೇಳೆ ಕಮಿಷನರ್ ಖುದ್ದು ಹಾಜರಿರಲಿದ್ದಾರೆ.
ಮೆರವಣಿಗೆ ಸಾಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ನಗರ ಪೊಲೀಸರು ವಾಹನಗಳ ಸಂಚಾರ ನಿರ್ಬಂಧಿಸಿದ್ದಾರೆ. ಪರ್ಯಾಯವಾಗಿ ಅಕ್ಕಪಕ್ಕದ ರಸ್ತೆಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಭದ್ರತೆಗಾಗಿ ನಗರದ ಎಲ್ಲ ವಿಭಾಗಗಳ ಡಿಸಿಪಿಗಳ ನಿಯೋಜನೆ ಮಾಡಲಾಗಿದೆ. ರಸ್ತೆ, ಜಂಕ್ಷನ್ಗಳಲ್ಲಿ 15-20 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಂತಿಮಯಾತ್ರೆ ವಾಹನದೊಂದಿಗೆ ಆರ್ಎಎಫ್ ಕೂಡ ಸಾಗಲಿದೆ. ಕಂಠೀರವ ಸ್ಟುಡಿಯೋ ಸುತ್ತಮುತ್ತ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಪವರ್‌ಸ್ಟಾರ್ ಪುನೀತ್ ಅಂತಿಮ ಯಾತ್ರೆ ಸಾಗುವ ಮಾರ್ಗ ಹೀಗಿದೆ:
ಕಂಠೀರವ ಕ್ರೀಡಾಂಗಣದಿಂದ ಅಂತಿಮ ಯಾತ್ರೆ ಆರಂಭ ಆಗಲಿದ್ದು ಬಳಿಕ RRMR ರಸ್ತೆ, ಹಡ್ಸನ್ ಸರ್ಕಲ್, ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್ ಎಡತಿರುವು ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಅಪ್ ಱಂಪ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಹೆಚ್‌ಇಎಲ್ ಸರ್ವೀಸ್ ರಸ್ತೆ, ಬಿಹೆಚ್‌ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೋ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ್ ಥಿಯೇಟರ್ ಜಂಕ್ಷನ್, RMC ಯಾರ್ಡ್ ಪೊಲೀಸ್ ಠಾಣೆ, MEI ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‌ಟಿಐ ವೃತ್ತ ಕಂಠೀರವ ಸ್ಟುಡಿಯೋವರೆಗೆ ಪುನೀತ್ ಅಂತಿಮ ಮೆರವಣಿಗೆ ನಡೆಯಲಿದೆ.
ಇದನ್ನೂ ಓದಿ: Puneeth Rajkumar: ಮನೆಯಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ ಹೆಚ್ಡಿ ದೇವೇಗೌಡ
ಇದನ್ನೂ ಓದಿ: Puneeth Rajkumar: ಪುನೀತ್ ಸಾವಿಗೆ ಕಂಬನಿ ಮಿಡಿದ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು