Puneeth Rajkumar: ಮನೆಯಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ ಹೆಚ್​ಡಿ ದೇವೇಗೌಡ

HD Deve Gowda: ಪುನೀತ್ ಇತ್ತೀಚೆಗೆ ಬೆಟ್ಟದ ಹೂವು ಚಿತ್ರೀಕರಣವಾದ ಸ್ಥಳಕ್ಕೆ ಹೋಗಿ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಒಂದು ತಲೆಮಾರಿನ ಜನರಿಗೆ ಪುನೀತ್ ಎಂದರೆ ಅದು ಬೆಟ್ಟದ ಹೂವು.

Puneeth Rajkumar: ಮನೆಯಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ ಹೆಚ್​ಡಿ ದೇವೇಗೌಡ
ಮನೆಯಲ್ಲಿ ಬೆಟ್ಟದ ಹೂವು ಚಿತ್ರ ನೋಡಿದ ಹೆಚ್​ಡಿ ದೇವೇಗೌಡ
Follow us
TV9 Web
| Updated By: ganapathi bhat

Updated on:Oct 30, 2021 | 4:47 PM

ಬೆಂಗಳೂರು: ಕನ್ನಡದ ಕಣ್ಮಣಿ, ಚಲನಚಿತ್ರ ರಂಗದ, ಅಭಿಮಾನಿಗಳ ಪ್ರೀತಿಯ ಅಪ್ಪು, ಪುನೀತ್ ರಾಜ್​ಕುಮಾರ್ ನಿನ್ನೆ (ಅಕ್ಟೋಬರ್ 29) ನಿಧನರಾಗಿದ್ದಾರೆ. ಪುನೀತ್ ನಿಧನ ಹೊಂದಿ ದಿನ ಕಳೆದರೂ ಅವರ ದರ್ಶನಕ್ಕೆ ಕಾದು ನಿಂತಿರುವ ಅಭಿಮಾನಿಗಳ ಸಾಲು ಮುಗಿಯುತ್ತಲೇ ಇಲ್ಲ. 80, 90, ಹಾಗೂ 2000ನೇ ದಶಕದ ಎಲ್ಲರ ಮೆಚ್ಚಿನ ನಟನಾಗಿದ್ದ ಪುನೀತ್ ರಾಜ್​ಕುಮಾರ್ ಜನತೆಯ ಜೊತೆಗೆ ಹೊಂದಿದ್ದ ಭಾವನಾತ್ಮಕ ನಂಟು ಇದಕ್ಕೆ ಕಾರಣ ಎಂದರೆ ತಪ್ಪಿಲ್ಲ. ಬಾಲನಟನಾಗಿಯೂ, ಗಾಯಕನಾಗಿಯೂ, ತಂದೆಯ ಜೊತೆಗೆ ಅಭಿನಯಿಸಿಯೂ, ಬಳಿಕ ಪವರ್ ಸ್ಟಾರ್ ಎಂದು ಲಕ್ಷಾಂತರ ಮಂದಿಯ ಅಭಿಮಾನಕ್ಕೆ ಪಾತ್ರವಾಗಿದ್ದು ಪುನೀತ್ ಹೆಗ್ಗಳಿಕೆ.

ಪುನೀತ್ ಬಾಲನಟನಾಗಿಯೂ ಪ್ರಸಿದ್ಧಿ ಪಡೆದವರು. ಅವರು ಬೆಟ್ಟದ ಹೂವು ಸಿನಿಮಾದ ನಟನೆಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದವರು. ಎನ್. ಲಕ್ಷ್ಮೀನಾರಾಯಾಣ ನಿರ್ದೇಶನದ ಈ ಸಿನಿಮಾ ಅಪಾರ ಪ್ರೀತಿ, ಜನಪ್ರಿಯತೆ ಗಳಿಸಿತ್ತು. ಬಾಲನಟನಾಗಿಯೇ ಮಿಂಚಿದ್ದ ಪುನೀತ್​ಗೆ ರಾಷ್ಟ್ರಪ್ರಶಸ್ತಿಯ ಗರಿಮೆಯನ್ನೂ ನೀಡಿತ್ತು. ಪುನೀತ್ ಬಗ್ಗೆ ಮಾತನಾಡುವಾಗ ಈ ಸಿನಿಮಾವನ್ನು ಹೇಳಲು ಬಿಟ್ಟರೆ ಅದು ಅಪೂರ್ಣ. ಪುನೀತ್ ಇತ್ತೀಚೆಗೆ ಬೆಟ್ಟದ ಹೂವು ಚಿತ್ರೀಕರಣವಾದ ಸ್ಥಳಕ್ಕೆ ಹೋಗಿ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಒಂದು ತಲೆಮಾರಿನ ಜನರಿಗೆ ಪುನೀತ್ ಎಂದರೆ ಅದು ಬೆಟ್ಟದ ಹೂವು.

ಈ ಬಗ್ಗೆ ಇಷ್ಟು ಹೇಳುವುದಕ್ಕೆ ಕಾರಣವಿದೆ. ಪುನೀತ್ ರಾಜ್​ಕುಮಾರ್ ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂವು ಸಿನಿಮಾವನ್ನು ಜೆಡಿಎಸ್ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮನೆಯಲ್ಲಿ ಕೂತು ವೀಕ್ಷಿಸಿದ್ದಾರೆ. ಪುನೀತ್ ನಿಧನದ ಹಿನ್ನೆಲೆಯಲ್ಲಿ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಬೆಟ್ಟದ ಹೂವು ಚಿತ್ರ ವೀಕ್ಷಿಸಿದ್ದಾರೆ. ಆ ಮೂಲಕ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Puneeth-Rajkumar

ಪ್ರೇಮದ ಕಾಣಿಕೆ ಮತ್ತು ಬೆಟ್ಟದ ಹೂವು ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್

ಇದನ್ನೂ ಓದಿ: Puneeth Rajkumar: ಪುನೀತ್ ಸಾವಿಗೆ ಕಂಬನಿ ಮಿಡಿದ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು

ಇದನ್ನೂ ಓದಿ: ‘ನನಗೆ ಪುನೀತ್ ಮಾಮ ನೆನಪಾಗುತ್ತಿದ್ದಾರೆ’; ಅಪ್ಪುಗಾಗಿ ಕಣ್ಣೀರು ಹಾಕಿದ ಪುಟ್ಟ ಅಭಿಮಾನಿ, ವಿಡಿಯೋ ವೈರಲ್​

Published On - 4:42 pm, Sat, 30 October 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್