ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಇಂದು ನಮ್ಮೊಂದಿಗೆ ಇಲ್ಲ. ಈ ನೋವು ಸದಾ ಕಾಡುವಂಥದ್ದು. ಅವರನ್ನು ನಾನಾ ರೀತಿಯಲ್ಲಿ ನೆನಪು ಮಾಡಿಕೊಳ್ಳಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಹೆಚ್ಚು ನೆನಪಾಗುತ್ತಾರೆ. ‘ಗಂಧದ ಗುಡಿ’ ಸಾಕ್ಷ್ಯಚಿತ್ರದಲ್ಲಿ ಅವರು ಕನ್ನಡ ನಾಡಿನ ಬಗ್ಗೆ ಹೇಳಿದ್ದರು. ಕರ್ನಾಟಕ ಎಷ್ಟು ಸಮೃದ್ಧವಾಗಿದೆ ಎಂಬುದನ್ನು ವಿವರಿಸಿದ್ದರು. ಈ ಸಾಕ್ಷ್ಯಚಿತ್ರ ರಿಲೀಸ್ ಆಗುವ ಮೊದಲೇ ಅವರು ಕೊನೆಯುಸಿರು ಎಳೆದರು. ಈ ಚಿತ್ರದ ಕೆಲವು ದೃಶ್ಯಗಳು ಗಣರಾಜ್ಯೋತ್ಸವದ ದಿನ ವೈರಲ್ ಆಗಿವೆ.
‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಪುನೀತ್ ನಿರ್ಮಿಸಿದ್ದಾರೆ. ಅವರೂ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅಮೋಘವರ್ಷ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಕರ್ನಾಟಕದ ಬಗ್ಗೆ ಹಲವು ವಿಚಾರಗಳನ್ನು ಹೇಳಲಾಗಿದೆ. ಕನ್ನಡ ನಾಡಿನ ಅರಣ್ಯ ಸಂಪತ್ತು ಎಷ್ಟು ಸಮೃದ್ಧವಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಕೆಲವು ಪ್ರದೇಶಗಳು ಈಗಲೂ ಹಿಂದುಳಿದಿವೆ. ಅಂಥ ಭಾಗಕ್ಕೂ ಪುನೀತ್ ಭೇಟಿ ನೀಡಿದ್ದರು. ದಾಂಡೇಲಿ ಸಮೀಪದ ಗ್ರಾಮ ಒಂದಕ್ಕೆ ಪುನೀತ್ ಭೇಟಿ ಕೊಟ್ಟಿದ್ದರು. ಅಲ್ಲಿನ ಮಕ್ಕಳಿಗೆ ಪುನೀತ್ ಅಂದರೆ ಯಾರು ಎಂಬುದೇ ತಿಳಿದಿಲ್ಲ. ಅವರು ಒಂದಷ್ಟು ಸಮಯ ಅಲ್ಲಿನ ಮಕ್ಕಳ ಜೊತೆ ಕಳೆದು ಬಂದಿದ್ದರು.
ಪುನೀತ್ ಅವರು ದಾಂಡೇಲಿ ಸಮೀಪದ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಾಥಮಿಕ ಶಾಲೆಗೆ ತೆರಳಿ ಮಕ್ಕಳ ಜೊತೆ ಮಾತನಾಡಿದ್ದರು. ಆಗ ಅವರು ‘ಎಲ್ಲಾದರು ಇರು, ಎಂತಾದರು ಇರು..’ ಹಾಡನ್ನು ಹೇಳಿಕೊಟ್ಟಿದ್ದರು. ಮಕ್ಕಳೆಲ್ಲರೂ ಶ್ರದ್ಧೆಯಿಂದ ಈ ಹಾಡನ್ನು ಹಾಡಿದ್ದರು. ಕನ್ನಡ ರಾಜ್ಯೋತ್ಸವದ ದಿನದಂದು ಅಭಿಮಾನಿಗಳು ಈ ವಿಡಿಯೋನ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಉದಯಿಸಲು ಕಾರಣ ಯಾರು? ಹಂಸಲೇಖ ಹೇಳಿದ್ದು ಹೀಗೆ
ಪುನೀತ್ ರಾಜ್ಕುಮಾರ್ ಅವರು ಹಲವು ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದರು. ಈ ವಿಡಿಯೋಗಳನ್ನು ಕೂಡ ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:00 am, Wed, 1 November 23