ಪುನೀತ್ ರಾಜ್ಕುಮಾರ್ ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ನಿತ್ಯ ಅವರು ಜಿಮ್ನಲ್ಲಿ ಬೆವರು ಹರಿಸುತ್ತಿದ್ದರು. ಸದಾ ಫಿಟ್ ಆಗಿರೋಕೆ ಅವರದ್ದು ಮೊದಲ ಆದ್ಯತೆ. ಇಷ್ಟಾದರೂ ಪುನೀತ್ ರಾಜ್ಕುಮಾರ್ ಬದುಕುಳಿಯಲಿಲ್ಲ. ಹೃದಯಾಘಾತಕ್ಕೆ ಒಳಗಾದ ಸ್ವಲ್ಪ ಹೊತ್ತಿನ್ನಲ್ಲೇ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಆದರೂ ಅನೇಕರ ಬಳಿ ಈ ವಿಚಾರವನ್ನು ನಂಬೋಕೆ ಆಗುತ್ತಿಲ್ಲ. ಪುನೀತ್ ಫಿಟ್ನೆಸ್ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಿದ್ದರೋ ಅಷ್ಟೇ ಪ್ರಾಮುಖ್ಯತೆಯನ್ನು ಆಹಾರಕ್ಕೂ ಕೊಡುತ್ತಿದ್ದರು. ಅವರಿಗೆ ನಾನ್ವೆಜ್ ಎಂದರೆ ಪಂಚಪ್ರಾಣ ಈ ಬಗ್ಗೆ ಶೋನಲ್ಲಿ ಅವರು ಹೇಳಿಕೊಂಡಿದ್ದಾರೆ.
‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಅವರ ನಿರೂಪಣೆ ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಬಂದ ಸ್ಪರ್ಧಿಗಳ ಜತೆ ಆಹಾರದ ಬಗ್ಗೆ ಮಾತನಾಡಿದ್ದರು. ಇದನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮಕ್ಕೆ ರಾಜ್ಯದ ನಾನಾ ಕಡೆಗಳಿಂದ ಸ್ಪರ್ಧಿಗಳು ಆಗಮಿಸುತ್ತಿದ್ದರು. ಪ್ರತಿ ಜಿಲ್ಲೆ, ತಾಲೂಕಿನಲ್ಲೂ ಅಲ್ಲಿಯದ್ದೇ ಆದ ಆಹಾರ ಸಂಸ್ಕೃತಿ ಇರುತ್ತದೆ. ಮಂಗಳೂರು ಕಡೆ ತೆರಳಿದರೆ ಕಡಲ ಜೀವಿಗಳಿಂದ ಮಾಡಿದ ಆಹಾರ ಅದ್ಭುತವಾಗಿ ಸಿಗುತ್ತದೆ. ಈ ಎಲ್ಲಾ ವಿಚಾರಗಳನ್ನು ಪುನೀತ್ ಈ ಶೋನಲ್ಲಿ ಮಾತನಾಡಿದ್ದರು. ಅಲ್ಲದೆ, ಗೊತ್ತಿಲ್ಲದ ವಿಚಾರಗಳನ್ನು ಅವರು ಕೇಳಿ ತಿಳಿದುಕೊಳ್ಳುತ್ತಿದ್ದರು.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಿದ್ದ ‘ಯುವರತ್ನ’ ಸಿನಿಮಾ ಕೊವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವುದಕ್ಕೂ ಮೊದಲು ರಿಲೀಸ್ ಆಗಿತ್ತು. ಈ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರ ನೀಡಲಾಗಿತ್ತು. ಇಡೀ ಚಿತ್ರತಂಡ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡಿತ್ತು. ಇದರ ಜತೆಗೆ ಪುನೀತ್ ಸಾಕಷ್ಟು ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಅದೂ ಸರ್ಪ್ರೈಸ್ ಆಗುವ ರೀತಿಯಲ್ಲಿ.
ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್ ಮಾರ್ಚ್ 21ರಂದು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪುನೀತ್ ಎಂದರೆ ಯಾಕೆ ಇಷ್ಟ ಮತ್ತು ಎಷ್ಟು ಇಷ್ಟ ಎಂಬುದನ್ನು ಅಭಿಮಾನಿಗಳು ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ, ಅವರನ್ನು ನೋಡಬೇಕು ಎಂದು ಎಷ್ಟು ವರ್ಷ ಕಾದಿದ್ದೆ ಎಂಬುದನ್ನೂ ವಿವರಿಸುತ್ತಿರುವಾಗಲೆ ಪುನೀತ್ ಬರುತ್ತಾರೆ. ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾರೆ. ಪುನೀತ್ ಅವರನ್ನು ನೋಡಿ ಅನೇಕರು ಅಚ್ಚರಿಗೆ ಒಳಗಾಗುತ್ತಾರೆ. ಈ ವೇಳೆ ಪುನೀತ್ ಅವರೇ ಸಮಾಧಾನ ಮಾಡುವ ಕೆಲಸವನ್ನೂ ಮಾಡುತ್ತಾರೆ. ಅಪ್ಪು ಮರಣಾನಂತರ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ