ಪುನೀತ್​ ಸರಳತೆಗೆ ಸಾಕ್ಷಿ ಈ ಫೋಟೋಗಳು; ಕುರಿಗಾಹಿಗಳ ಜತೆ ಮಜ್ಜಿಗೆ ಅನ್ನ ಊಟ ಮಾಡಿದ್ದ ಅಪ್ಪು

ಪುನೀತ್​ ಸರಳತೆಗೆ ಸಾಕ್ಷಿ ಈ ಫೋಟೋಗಳು; ಕುರಿಗಾಹಿಗಳ ಜತೆ ಮಜ್ಜಿಗೆ ಅನ್ನ ಊಟ ಮಾಡಿದ್ದ ಅಪ್ಪು
ಪುನೀತ್

​ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್​ಕುಮಾರ್ ಸೆಪ್ಟೆಂಬರ್​ ತಿಂಗಳಲ್ಲಿ​ ಭೇಟಿ ನೀಡಿದ್ದರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದರು.

TV9kannada Web Team

| Edited By: Rajesh Duggumane

Nov 01, 2021 | 4:47 PM

ಪುನೀತ್​ ರಾಜ್​ಕುಮಾರ್​ ತುಂಬಾನೇ ಸರಳ ವ್ಯಕ್ತಿಯಾಗಿದ್ದರು ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಅವರು ನಡೆದುಕೊಳ್ಳುತ್ತಿದ್ದ ರೀತಿ ಇದಕ್ಕೆ ಸಾಕ್ಷಿ ಒದಗಿಸುತ್ತಿತ್ತು. ಪುನೀತ್​ ಯಾವಾಗಲೂ ಸಿಂಪಲ್​ ಆಗಿ ಬಟ್ಟೆ ಹಾಕುತ್ತಿದ್ದರು. ಬಟ್ಟೆ ವಿಚಾರದಲ್ಲಿ ಅವರು ಎಂದಿಗೂ ಆಡಂಬರ ಮಾಡಲಿಲ್ಲ. ಐಷಾರಾಮಿ ಕಾರುಗಳಿದ್ದರೂ ಅವರು ದರ್ಪ ತೋರಲಿಲ್ಲ. ಉಳಿದುಕೊಳ್ಳೋಕೆ ಅದ್ಭುತ ಮನೆ ಇದ್ದರೂ ದಿಕ್ಕು ಇಲ್ಲದವರಿಗೆ ಸೂರು ಕೊಡಿಸುವ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಲಿಲ್ಲ. ಇದರ ಜತೆಗೆ ಪುನೀತ್​ ಸಾಮಾನ್ಯರ ಜತೆ ಸಾಕಷ್ಟು ಬೆರೆಯುತ್ತಿದ್ದರು. ಇದಕ್ಕೆ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳೇ ಸಾಕ್ಷಿ.

​ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್​ಕುಮಾರ್ ಸೆಪ್ಟೆಂಬರ್​ ತಿಂಗಳಲ್ಲಿ​ ಭೇಟಿ ನೀಡಿದ್ದರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದರು. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹರ್ಲಾಪೂರ, ನಾರಾಯಣ ಪೇಟೆಗಳಿಗೆ ಪುನೀತ್​ ಭೇಟಿ ನೀಡಿದ್ದರು.

ಗಂಗಾವತಿಯಲ್ಲಿ ಸುತ್ತಾಟ ನಡೆಸಿ ಅವರು ವಿಜಯಪೂರಕ್ಕೆ ಹೋಗುವ ವೇಳೆಯಲ್ಲಿ ದಾರಿ ಪಕ್ಕದ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್​ ಕಣ್ಣಿಗೆ ಬಿದ್ದಿತ್ತು. ಅವರು ಅಲ್ಲಿಗೆ ಭೇಟಿ ನೀಡಿದ್ದರು. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್​ ಮಾತುಕತೆ ನಡೆಸಿದ್ದರು. ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡುವ ರಾಗಿ ಮುದ್ದೆ, ಹಾಲು, ಮಜ್ಜಿಗೆ ಅನ್ನ ಊಟ ಮಾಡಿದ್ದರು. ಇದು ಅವರ ಸರಳತೆಗೆ ಉದಾಹರಣೆ.

ಇದರ ಜತೆಗೆ ಪುನೀತ್​ ಎಲ್ಲರ ಜತೆ ನೆಲದ ಮೇಲೆ ಊಟಕ್ಕೆ ಕುಳಿತ ಫೋಟೋ ಕೂಡ ಸಾಕಷ್ಟು ವೈರಲ್​ ಆಗುತ್ತಿದೆ. ಪುನೀತ್​ ರಾಜ್​​ಕುಮಾರ್​ ಈ ವಿಚಾರಕ್ಕೆ ಅಭಿಮಾನಿಗಳಿಗೆ ತುಂಬಾನೇ ಹತ್ತಿರವಾಗುತ್ತಾರೆ. ಆದರೆ, ಪುನೀತ್​ ಇಲ್ಲ ಎನ್ನುವ ವಿಚಾರ ಕೂಡ ಅಷ್ಟೇ ನೋವನ್ನು ತರುತ್ತದೆ.

ಇದನ್ನೂ ಓದಿ: ಪತ್ನಿ ಅಶ್ವಿನಿಗೆ ಪ್ರೀತಿಯಿಂದ 4 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದ ಪುನೀತ್​ ರಾಜ್​ಕುಮಾರ್​

Follow us on

Related Stories

Most Read Stories

Click on your DTH Provider to Add TV9 Kannada