AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು.

‘ಯುವರತ್ನ’ದಲ್ಲಿ ಅಪ್ಪು ಜೆರ್ಸಿ ಸಂಖ್ಯೆ 29, ಮೃತಪಟ್ಟಿದ್ದೂ ಅಕ್ಟೋಬರ್ 29ರಂದು; ಇದರ ಹಿಂದಿದೆ ಸಾಕಷ್ಟು ಲೆಕ್ಕಾಚಾರ
ಪುನೀತ್​ ರಾಜಕುಮಾರ್
TV9 Web
| Edited By: |

Updated on: Nov 01, 2021 | 6:09 PM

Share

ಪುನೀತ್​ ರಾಜ್​ಕುಮಾರ್​ ಅವರು 46ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಓರ್ವ ಸ್ಟಾರ್​ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್​ ನಿಧನದ ನಂತರ ಸಾಕಷ್ಟು ವಿಚಾರಗಳು ವೈರಲ್​ ಆಗುತ್ತಿವೆ. ಅವರು ಮಂತ್ರಾಲಯಕ್ಕೆ ತೆರಳಿದಾಗ ವೀಣೆ ಅಲುಗಾಡಿದ್ದು ಅಪಶಕುನದ ಸೂಚಕವಾಗಿತ್ತು ಎಂದು ಬಣ್ಣಿಸಲಾಗುತ್ತಿದೆ. ಈಗ ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾದ ಜೆರ್ಸಿ ಫೋಟೋ ವೈರಲ್​ ಆಗುತ್ತಿದೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.

ಪುನೀತ್​ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು. ‘ಯುವರತ್ನ’ ಅಪ್ಪು ಹೀರೋ ಆಗಿ ನಟಿಸಿದ 29ನೇ ಸಿನಿಮಾ. ಈ ಕಾರಣಕ್ಕೆ ಜೆರ್ಸಿಗೆ ಈ ಸಂಖ್ಯೆ ನೀಡಲಾಗಿತ್ತು. ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು (ಅಕ್ಟೋಬರ್​ 29) ಪುನೀತ್​ ಮೃತಪಟ್ಟಿದ್ದಾರೆ.

46 ವರ್ಷಕ್ಕೆ ಅಪ್ಪು ನಿಧನ ಹೊಂದಿದ್ದಾರೆ. ಅವರು ಮೃತಪಟ್ಟ ದಿನಾಂಕ ಹಾಗೂ ಅವರು ಹುಟ್ಟಿದ ದಿನಾಂಕ ಸೇರಿಸಿದರೆ ಬರುವ ಸಂಖ್ಯೆ ಕೂಡ 46! ಪುನೀತ್​ ಹುಟ್ಟಿದ್ದು ಮಾರ್ಚ್​ 17ರಂದು. ಮೃತಪಟ್ಟಿದ್ದು ಅಕ್ಟೋಬರ್ 29. 29+17= 46. ಅಪ್ಪು ಹುಟ್ಟಿದಾಗ ಅಣ್ಣಾವ್ರ ವಯಸ್ಸು ಕೂಡ 46 ಆಗಿತ್ತು.

ಇನ್ನು, 17ನೇ ತಾರೀಕಿನಂದು ಹುಟ್ಟುವುದು ಅದೃಷ್ಟವಲ್ಲ ಎಂಬ ಥಿಯರಿಯೂ ಹರಿದಾಡುತ್ತಿದೆ. ಪುನೀತ್​ ರಾಜ್​ಕುಮಾರ್​ ಜನಿಸಿದ್ದು ಮಾರ್ಚ್​ 17ರಂದು. ಅವರ ರೀತಿಯೇ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್​ 17ರಂದು. ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್​ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಟ ರಘುವೀರ್​ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೇ ಮೃತಪಟ್ಟಿದ್ದು ಎಂಬುದು ಕಾಕತಾಳೀಯ.

ಇದನ್ನೂ ಓದಿ: Puneeth Rajkumar: ಒಂದೇ ದಿನಾಂಕದಲ್ಲಿ ಜನಿಸಿದ ವಿಜಯ್​, ಅಪ್ಪು, ಚಿರುಗೆ ಇದೆಂಥ ದುರ್ವಿಧಿ; ಕಂಟಕವಾಯ್ತಾ ಸಂಖ್ಯೆ 17?

Follow Us
TV9 Web
TV9 Web

TV9 Kannada

Read More
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ