ಹಲವು ಕಂಪನಿ, ಯೋಜನೆಗಳ ರಾಯಭಾರಿಯಾಗಿದ್ದರು ಪುನೀತ್: ಇಲ್ಲಿದೆ ಅವುಗಳ ಸಂಪೂರ್ಣ ಮಾಹಿತಿ
ಕೊವಿಡ್ ಲಸಿಕೆ ಪಡೆಯುವಂತೆ ಅವರು ಸರ್ಕಾರದ ಪರವಾಗಿ ಕೇಳಿಕೊಂಡಿದ್ದಿದೆ. ಹಾಗಾದರೆ ಪುನೀತ್ ಯಾವೆಲ್ಲ ಯೋಜನೆ ಹಾಗೂ ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪುನೀತ್ ರಾಜಕುಮಾರ್
Follow us on
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರಿಲ್ಲ ಎನ್ನುವ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಂದಿ ಪುನೀತ್ ಹೆಸರನ್ನು ರಸ್ತೆ, ಪಾರ್ಕ್ಗೆ ಇಡಬೇಕು ಎನ್ನುವ ಮನವಿ ಸಲ್ಲಿಕೆ ಮಾಡುತ್ತಿದ್ದಾರೆ. ಪುನೀತ್ ನಟನೆ ಮಾತ್ರವಲ್ಲದೆ, ಹಲವು ಸರ್ಕಾರಿ ಯೋಜನೆ ಹಾಗೂ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಅವರು ಮಾಡಿದ್ದರು. ಕೊವಿಡ್ ಲಸಿಕೆ ಪಡೆಯುವಂತೆ ಅವರು ಸರ್ಕಾರದ ಪರವಾಗಿ ಕೇಳಿಕೊಂಡಿದ್ದಿದೆ. ಹಾಗಾದರೆ ಪುನೀತ್ ಯಾವೆಲ್ಲ ಯೋಜನೆ ಹಾಗೂ ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಎಲ್‌ಇಡಿ ಬಲ್ಬ್ ಬಳಕೆಯಿಂದ ವಿದ್ಯುತ್ ಶಕ್ತಿ ಕಡಿಮೆ ವ್ಯಯವಾಗುತ್ತದೆ. ಎಲ್‌ಇಡಿ ಬಲ್ಬ್ಗಳ ಬಳಕೆಗೆ ಉತ್ತೇಜನ ನೀಡಿದ್ದರು ಪುನೀತ್.
‘ಚೆಲುವ ಚಾಮರಾಜನಗರ’ ಯೋಜನೆಗೂ ಪುನೀತ್ ರಾಯಭಾರಿ ಆಗಿದ್ದರು.
ಕೊವಿಡ್ ಲಸಿಕೆ ಪಡೆಯುವಂತೆ ಸರ್ಕಾರ ಆಂದೋಲನ ಆರಂಭಿಸಿದೆ. ಇದಕ್ಕೆ ಪುನೀತ್ ರಾಯಭಾರಿ ಆಗಿದ್ದರು.
ನಂದಿನಿ ಹಾಲಿನ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಇದರ ಪ್ರಚಾರ ರಾಯಭಾರಿಯಾಗಿ ಪುನೀತ್ ಕಾರ್ಯ ನಿರ್ವಹಿಸುತ್ತಿದ್ದರು.
ಬಿಎಂಟಿಸಿ ಬಸ್ ಆದ್ಯತಾ ಪಥದ ಬಗ್ಗೆಯೂ ಜನರಲ್ಲಿ ಪುನೀತ್ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು.
ಕರ್ನಾಟಕ ಪ್ರವಾಸೋದ್ಯಮದ ಪ್ರಚಾರಕ್ಕೆ ಪುನೀತ್ ರಾಯಭಾರಿ ಆಗಿದ್ದರು.
SSLC ಶಿಕ್ಷಣದ ಬಳಿಕ ಜಿಟಿಟಿಸಿ ಸೇರಿ ‘ಕೌಶಲ ಕರ್ನಾಟಕ’ಕ್ಕೆ ನೆರವಾಗಲು ಪುನೀತ್ ಜಾಗೃತಿ ಮೂಡಿಸುತ್ತಿದ್ದರು.
ಸಿಡಾಕ್, ಉದ್ಯಮಶೀಲತಾ ತರಬೇತಿಯ ಪ್ರಯೋಜನದ ಮನವರಿಕೆ ಮಾಡುವ ಕೆಲಸವನ್ನು ಪುನೀತ್ ಮಾಡುತ್ತಿದ್ದರು.
ಗ್ರಾಮೀಣ ಯುವಜನರಿಗೆ ಸರ್ಕಾರಿ ಐಟಿಐ ಸೇರಲು ಪ್ರೋತ್ಸಾಹ ನೀಡುವ ಕೆಲಸ ಪುನೀತ್ ಅವರಿಂದ ಆಗುತ್ತಿತ್ತು.
ಮತದಾನ ಜಾಗೃತಿ ಅಭಿಯಾನಕ್ಕೆ ಪುನೀತ್ ಕೈ ಜೋಡಿಸಿದ್ದರು.
ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ತಯಾರಿಸಿದ ‘ದೀಪ ಸಂಜೀವಿನಿ’ ಮಣ್ಣಿನ ಹಣತೆ ಖರೀದಿಸಿ ದೀಪಾವಳಿ ಆಚರಿಸುವ ಮೂಲಕ ಸ್ವಸಹಾಯ ಗುಂಪುಗಳನ್ನು ಬಲಪಡಿಸಲು ಮನವಿ ಮಾಡಿಕೊಂಡಿದ್ದರು ಪುನೀತ್
ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ನೆರವಾಗುವ ‘ಸಂಜೀವಿನಿ’ ಯೋಜನೆ ಮಹತ್ವ ಸಾರುವ ಮೂಲಕ ಪ್ರೇರಣೆ ನೀಡುತ್ತಿದ್ದರು.