ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಸ್ತ ನಾಡಿನ ಜನತೆಗೆ ಹಾಡಿನ ಮೂಲಕ ದೀಪಾವಳಿಯ ಶುಭಾಷಯ ತಿಳಿಸಿದ್ದಾರೆ. ಅಪ್ಪಾಜಿ ಡಾ. ರಾಜ್ ಕುಮಾರ್ ಹಾಡಿರುವ ದೀಪಾವಳಿ ..ದೀಪಾವಳಿ ಹಾಡುವ ಮೂಲಕ ಪುನೀತ್ ರಾಜ್ ಕುಮಾರ್ ಶುಭಾಷಯ ತಿಳಿಸಿದ್ದಾರೆ.
ಪುನೀತ್ ತಮ್ಮ ತಂದೆ ಹಾಡಿರುವ ‘ಮುದ್ದಿನ ಮಾವ’ ಸಿನಿಮಾದ ದೀಪಾವಳಿ.. ದೀಪಾವಳಿ ಹಾಡನ್ನು ಹಾಡಿ ಈ ಬಾರಿಯ ದೀಪಾವಳಿಗೆ ಪಟಾಕಿಯನ್ನು ಹೊಡೆಯಬೇಡಿ.. ಕ್ಯಾಲರೀಸ್ ಬರ್ನ್ ಮಾಡಿ ಎಂದು ಪಟಾಕಿ ಬೇಡ ಅನ್ನೋ ಸಂದೇಶದೊಂದಿಗೆ ಜನರಿಗೆ ವಿಶ್ ಮಾಡಿದ್ದಾರೆ. ಹಾಗೂ ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ, ತೊಂದರೆಯಲ್ಲಿರುವವರಿಗೆ ಆದಷ್ಟು ಸಹಾಯವನ್ನು ಮಾಡಿ. ಎಲ್ಲರೂ ಸಂತೋಷದಿಂದ ದೀಪಾವಳಿ ಆಚರಿಸಿ. ಸ್ಟೇ ಸೇಫ್ ಸ್ಟೇ ಹೋಮ್ ಎಂದು ಶುಭ ಹಾರೈಸಿದ್ದಾರೆ.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ✨ #HappyDeepavali pic.twitter.com/VpEvNyyg6S
— Puneeth Rajkumar (@PuneethRajkumar) November 15, 2020