AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಮೂಕನ ಮಕ್ಕಳು’ ಬೆಳ್ಳಿತೆರೆ ಮೇಲೆ.. ಅತಿ ಶೀಘ್ರದಲ್ಲಿ!

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್​ರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಮೂಕನ ಮಕ್ಕಳು ಸಹ ಒಂದು. ಈ ಕೃತಿಯನ್ನು ಅನೇಕರು ಓದಿರುತ್ತಾರೆ. ಈಗ, ಮಾಸ್ತಿಯವರ ಕೃತಿ ಸಿನಿಮಾ ರೂಪದಲ್ಲಿ ಸಿದ್ಧಗೊಂಡಿದ್ದು ಅತಿ ಶೀಘ್ರದಲ್ಲಿ ತೆರೆಮೇಲೆ ಬರಲಿದೆ. ಕರಿಗಿರಿ ಪ್ರೊಡಕ್ಷನ್ಸ್ ಬ್ಯಾನರ್​ ಅಡಿಯಲ್ಲಿ ಸಜ್ಜಾಗುತ್ತಿರುವ ಚಿತ್ರಕ್ಕೆ ಪವಿತ್ರಾ ಕ್ರಿಷ್ ಗೌರಿಬಿದನೂರು ನಿರ್ಮಾಪಕಿ. ರಂಗಭೂಮಿ ಕಲಾವಿದರಾದ ಹಾಗೂ ಈ ಹಿಂದೆ ಶಂಭೋ ಮಹಾದೇವ ಸಿನಿಮಾ ನಿರ್ದೇಶಿಸಿದ್ದ ಮೈಸೂರು ಮಂಜು ಸದ್ಯ ಸಿನಿಮಾಗೆ ಌಕ್ಷನ್​ಕಟ್​ ಹೇಳಿದ್ದಾರೆ. […]

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಮೂಕನ ಮಕ್ಕಳು’ ಬೆಳ್ಳಿತೆರೆ ಮೇಲೆ.. ಅತಿ ಶೀಘ್ರದಲ್ಲಿ!
KUSHAL V
| Edited By: ಆಯೇಷಾ ಬಾನು|

Updated on:Nov 24, 2020 | 6:39 AM

Share

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್​ರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಮೂಕನ ಮಕ್ಕಳು ಸಹ ಒಂದು. ಈ ಕೃತಿಯನ್ನು ಅನೇಕರು ಓದಿರುತ್ತಾರೆ. ಈಗ, ಮಾಸ್ತಿಯವರ ಕೃತಿ ಸಿನಿಮಾ ರೂಪದಲ್ಲಿ ಸಿದ್ಧಗೊಂಡಿದ್ದು ಅತಿ ಶೀಘ್ರದಲ್ಲಿ ತೆರೆಮೇಲೆ ಬರಲಿದೆ.

ಕರಿಗಿರಿ ಪ್ರೊಡಕ್ಷನ್ಸ್ ಬ್ಯಾನರ್​ ಅಡಿಯಲ್ಲಿ ಸಜ್ಜಾಗುತ್ತಿರುವ ಚಿತ್ರಕ್ಕೆ ಪವಿತ್ರಾ ಕ್ರಿಷ್ ಗೌರಿಬಿದನೂರು ನಿರ್ಮಾಪಕಿ. ರಂಗಭೂಮಿ ಕಲಾವಿದರಾದ ಹಾಗೂ ಈ ಹಿಂದೆ ಶಂಭೋ ಮಹಾದೇವ ಸಿನಿಮಾ ನಿರ್ದೇಶಿಸಿದ್ದ ಮೈಸೂರು ಮಂಜು ಸದ್ಯ ಸಿನಿಮಾಗೆ ಌಕ್ಷನ್​ಕಟ್​ ಹೇಳಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹ ನಿರ್ದೇಶನವನ್ನು ಮಂಜು ಕ್ರಿಷ್ ಗೌರಿಬಿದನೂರು ಮಾಡಿದ್ದಾರೆ. ಪರಿಸರದಲ್ಲಿ ನಡೆಯುವ ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ, ಮೊದಲ ಬಾರಿಗೆ ವಿಶೇಷ ಚೇತನನ ಪಾತ್ರದಲ್ಲಿ ಮಂಜು ಕ್ರಿಷ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಗರಾಜ ಶೆಟ್ಟಿ ಮಳಗಿ ಛಾಯಾಗ್ರಹಣವಿದ್ದು ಗಣೇಶ್ ಭಟ್ ಸಂಗೀತ ಸಂಯೋಜನೆಯಿದೆ. ಜೊತೆಗೆ, ಸಿನಿಮಾದ ಸಂಕಲನವನ್ನು ಸಂಜೀವ ರೆಡ್ಡಿ ಮಾಡಿದ್ದಾರೆ.

ಈಗಾಗಲೇ, ಮೂಕನ ಮಕ್ಕಳು ಕೊಲ್ಕತ್ತ ಇಂಟರ್​ನ್ಯಾಷನಲ್ ಫಿಲಂ ಫೆಸ್ಟಿವಲ್​ನಲ್ಲಿ ಪ್ರದರ್ಶನಗೊಂಡು ಉತ್ತಮ ಚಿತ್ರವೆಂಬ ಖ್ಯಾತಿ ಪಡೆದಿದೆ. ಇದಲ್ಲದೆ, ಅಮೆರಿಕದ ಎರಡು ಇಂಟರ್​ ನ್ಯಾಷನಲ್ ಫೆಸ್ಟಿವಲ್​ಗೆ ಈ ಚಿತ್ರ ಆಯ್ಕೆಯಾಗಿದೆ. ಜೊತೆಗೆ, ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ.

ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ ಪಡೆದಿರುವ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮಾಸ್ತಿ ಅವರ ಮೂಕನ ಮಕ್ಕಳು ಕೃತಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಅದೇ ರೀತಿ ಸಿನಿಮಾ ಕೂಡ ಪ್ರಸಿದ್ಧತೆಯನ್ನು ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.

Published On - 7:56 pm, Sun, 15 November 20

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ