ಮಲ್ಟಿಪ್ಲೆಕ್ಸ್​ನಲ್ಲಿ ಮತ್ತೆ 99 ರೂ.ಆಫರ್; ಯಾವಾಗಿನಿಂದ, ಯಾವ ಸಿನಿಮಾಗಳಿಗೆ? ಇಲ್ಲಿದೆ ವಿವರ

|

Updated on: May 18, 2023 | 7:03 AM

ಕಳೆದ ವರ್ಷ ಪಿವಿಆರ್​ ಹಾಗೂ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಯಿತು. ಈ ವೇಳೆ ಬಹುತೇಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಂಡವು. ಈ ತಂತ್ರವನ್ನು ಮಲ್ಟಿಪ್ಲೆಕ್ಸ್​ಗಳು ಮುಂದುವರಿಸಿಕೊಂಡು ಹೋಗುತ್ತಿವೆ.

ಮಲ್ಟಿಪ್ಲೆಕ್ಸ್​ನಲ್ಲಿ ಮತ್ತೆ 99 ರೂ.ಆಫರ್; ಯಾವಾಗಿನಿಂದ, ಯಾವ ಸಿನಿಮಾಗಳಿಗೆ? ಇಲ್ಲಿದೆ ವಿವರ
ಪಿವಿಆರ್​-ಐನಾಕ್ಸ್
Follow us on

ಸಿಂಗಲ್​ ಸ್ಕ್ರೀನ್ ಥಿಯೇಟರ್​ಗಳಿಗೆ ಹೋಲಿಕೆ ಮಾಡಿದರೆ ಮಲ್ಟಿಪ್ಲೆಕ್ಸ್​​ನಲ್ಲಿ (Multiplex) ಸಿನಿಮಾ ಟಿಕೆಟ್ ದರ ಹೆಚ್ಚಿರುತ್ತದೆ. ಈ ದೂರು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಈಗ ಪಿವಿಆರ್ (PVR)  ಹಾಗೂ ಐನಾಕ್ಸ್ ಕಡೆಯಿಂದ ಬಂಪರ್ ಆಫರ್ ಸಿಗುತ್ತಿದೆ. ಕೆಲ ಕನ್ನಡದ ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೇ 19ರಿಂದ 25ರವರೆಗೆ ಈ ಆಫರ್ ಲಭ್ಯವಿದೆ. ಆದರೆ, ಕೆಲವು ಷರತ್ತುಗಳನ್ನು ಹಾಕಲಾಗಿದೆ.

ಕಳೆದ ವರ್ಷ ಪಿವಿಆರ್​ ಹಾಗೂ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ 100 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಯಿತು. ಈ ವೇಳೆ ಬಹುತೇಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಂಡವು. ಈ ತಂತ್ರವನ್ನು ಮಲ್ಟಿಪ್ಲೆಕ್ಸ್​ಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಈಗ ಕೇವಲ 99 ರೂಪಾಯಿಗೆ ಕನ್ನಡ ಸಿನಿಮಾಗಳನ್ನು ನೋಡುವ ಅವಕಾಶ ನೀಡಿದೆ. ಆದರೆ, ಎಲ್ಲಾ ಕನ್ನಡ ಸಿನಿಮಾಗಳನ್ನೂ ನೋಡಲು ಇಲ್ಲಿ ಅವಕಾಶ ಇಲ್ಲ.

ಮಲ್ಟಿಪ್ಲೆಕ್ಸ್​​ನಲ್ಲಿ ರೀ-ರಿಲೀಸ್ ಆಗುತ್ತಿರುವ ಪುನೀತ್​ ರಾಜ್​ಕುಮಾರ್ ನಟನೆಯ ‘ರಾಜಕುಮಾರ’, ಯಶ್​ ನಟನೆಯ ‘ಕೆಜಿಎಫ್-1’, ‘ಮಫ್ತಿ’, ‘ಮಾಸ್ಟರ್ ಪೀಸ್’, ‘ಗಂಧದಗುಡಿ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳನ್ನು 99 ರೂಪಾಯಿಗೆ ನೋಡುವ ಅವಕಾಶ ಇದೆ.

ಫ್ಯಾಮಿಲಿ ಎಂಟರ್​​ಟೇನರ್ ಎನಿಸಿಕೊಂಡಿರುವ ‘ರಾಜಕುಮಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಪುನೀತ್ ನಮ್ಮೊಂದಿಗಿಲ್ಲ. ಹೀಗಾಗಿ, ಈ ಸಿನಿಮಾನ ಥಿಯೇಟರ್​ನಲ್ಲಿ ನೋಡಿದರೆ ಪ್ರೇಕ್ಷಕರು ಭಾವುಕರಾಗೋದು ಪಕ್ಕಾ. ಇನ್ನು ಮಾಸ್ ಪ್ರಿಯರಿಗೋಸ್ಕರ ‘ಕೆಜಿಎಫ್ 1’, ‘ಮಾಸ್ಟರ್ ಪೀಸ್​’ ಸಿನಿಮಾ ಬರ್ತಿದೆ. ಶಿವಣ್ಣ ಹಾಗೂ ಶ್ರೀಮುರಳಿ ಕಾಂಬಿನೇಷನ್​ ‘ಮಫ್ತಿ’ ಕೂಡ ರಿಲೀಸ್​ ಆಗುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಗರುಡ ಗಮನ ವೃಷಭ ವಾಹನ ಬಿಡುಗಡೆಯಾಗಲಿವೆ. ಈ ಮೂಲಕ ಒಂದು ವಾರಗಳ ಕಾಲ ಪಿವಿಆರ್ ಹಾಗೂ ಐನಾಕ್ಸ್ ಕನ್ನಡದ ಬ್ಲಾಕ್ ಬಸ್ಟರ್ಸ್ ಚಿತ್ರಗಳನ್ನು ಪ್ರೇಕ್ಷಕರಿಗೆ ಸಂಭ್ರಮಿಸುವ ಅವಕಾಶ ಸಿಕ್ಕಿದೆ.

ಈಗಾಗಲೇ ‘ಬುಕ್ ಮೈ ಶೋ’ ಆ್ಯಪ್​​ನಲ್ಲಿ ಬುಕಿಂಗ್​ಗೆ ಅವಕಾಶ ನೀಡಲಾಗಿದೆ. ಜಿಎಸ್​ಟಿ ಸೇರಿ ಟಿಕೆಟ್ ದರ 112 ರೂಪಾಯಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: