ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಈಗೇನು ಮಾಡುತ್ತಿದ್ದಾರೆ ಗೊತ್ತಾ?

ಶಮಿಕಾ ನನ್ನ ಜಗತ್ತು ಎಂದು ರಾಧಿಕಾ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ, ರಾಧಿಕಾ ಮಗಳು ಶಮಿಕಾಳನ್ನು ಬಿಟ್ಟು ಎಂದು ದೂರ ಉಳಿದವರಲ್ಲ.

ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಈಗೇನು ಮಾಡುತ್ತಿದ್ದಾರೆ ಗೊತ್ತಾ?
ಮಗಳು ಶಮಿಕಾ ಜೊತೆಗೆ ರಾಧಿಕಾ ಕುಮಾರಸ್ವಾಮಿ
Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 04, 2021 | 7:09 PM

ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ 2002ರಲ್ಲಿ ನಿನಗಾಗಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಈ ಸಿನಿಮಾ ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದರು ರಾಧಿಕಾ. ಸದ್ಯ, ನಿರ್ಮಾಣದಲ್ಲಿ ಬ್ಯುಸಿ ಇರುವ ಅವರು, ಮಗಳು ಶಮಿಕಾ ಜತೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಹಾಗಾದರೆ, ಶಮಿಕಾ ಈಗ ಏನು ಮಾಡುತ್ತಿದ್ದಾರೆ? ಅವರಿಗೆ ಯಾವೆಲ್ಲ ಕಲೆಗಳು ಒಲಿದಿವೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಶಮಿಕಾ ನನ್ನ ಜಗತ್ತು ಎಂದು ರಾಧಿಕಾ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ, ರಾಧಿಕಾ ಮಗಳು ಶಮಿಕಾಳನ್ನು ಬಿಟ್ಟು ಎಂದು ದೂರ ಉಳಿದವರಲ್ಲ. ಮಗಳು ಹುಟ್ಟಿದ ನಂತರ ರಾಧಿಕಾ ಸಿನಿಮಾದಿಂದ ಬ್ರೇಕ್​ ತೆಗೆದುಕೊಂಡಿದ್ದರು. ಈ ಮೂಲಕ ಮಗಳ ಆರೈಕೆಗೆ ವಿಶೇಷ ಒತ್ತು ನೀಡಿದ್ದರು.

ರಾಧಿಕಾ ಅವರಂತೆ ಶಮಿಕಾ ಕೂಡ ಉತ್ತಮ ಡ್ಯಾನ್ಸರ್​. ಶಮಿಕಾ ಈಗಾಗಲೇ ಡಾನ್ಸ್​ ಕ್ಲಾಸ್​ಗೆ ಕೂಡ ತೆರಳುತ್ತಿದ್ದಾರೆ. ಶಮಿಕಾ ಸದ್ಯ ಪ್ರೌಢಶಿಕ್ಷಣ ಪಡೆಯುತ್ತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಸಂಪೂರ್ಣ ಸಮಯವನ್ನು ರಾಧಿಕಾ ಮಗಳ ಜತೆಯಲ್ಲೇ ಕಳೆದಿದ್ದಾರೆ. ಇನ್ನು, ರಾಧಿಕಾ ಮಗಳ ಜತೆ ಲಾಂಗ್​ ರೈಡ್​ ಹೋದ ಉದಾಹರಣೆ ಕೂಡ ಇದೆ.

ಶಮಿಕಾ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಇತ್ತೀಚೆಗೆ ಹರಿದಾಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಾಧಿಕಾ, ಶಮಿಕಾಳನ್ನು ಈಗಲೇ ಸಿನಿಮಾ ಲೋಕಕ್ಕೆ ಕರೆತರುವುದಿಲ್ಲ. ಅವಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ಎಂದಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಧಿಕಾ ಕುಮಾರಸ್ವಾಮಿ 2019ರಲ್ಲಿ ತೆರೆಕಂಡಿದ್ದ ದಮಯಂತಿ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಸಿನಿಮಾ. ಇದಲ್ಲದೆ, ಕೆಲ ಸಿನಿಮಾಗಳು ಅವರ ಕೈನಲ್ಲಿವೆ. ಕೆಲ ಚಿತ್ರಗಳನ್ನು ಅವರು ನಿರ್ಮಾಣ ಕೂಡ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಯಾರು ಅಂತಾ ಗೊತ್ತಿಲ್ಲ: HD ಕುಮಾರಸ್ವಾಮಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada