Radhika Pandit: ಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಜೀವನದ ಬಗ್ಗೆ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್

|

Updated on: Jul 29, 2023 | 3:05 PM

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಾಧಿಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆದಿದೆ.

Radhika Pandit: ಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಜೀವನದ ಬಗ್ಗೆ ಪಾಠ ಹೇಳಿದ ನಟಿ ರಾಧಿಕಾ ಪಂಡಿತ್
ರಾಧೊಕಾ ಪಂಡಿತ್
Follow us on

ನಟಿ ರಾಧಿಕಾ ಪಂಡಿತ್ (Radhika Pandit) ಅವರು ನಟನೆಯಿಂದ ದೂರ ಇದ್ದಾರೆ. ಹಾಗಂತ ಅವರು ಅಭಿಮಾನಿಗಳ ಜೊತೆಗಿನ ನಂಟನ್ನು ಕಡಿದುಕೊಂಡಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಇಂದು (ಜುಲೈ 29) ರಾಧಿಕಾ ಪಂಡಿತ್ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಅವರು ಬರೆದುಕೊಂಡಿರುವ ಸಾಲುಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ.

ರಾಧಿಕಾ ಪಂಡಿತ್ ಅವರು ಯಶ್ ಅವರ ಜೊತೆ 2016ರಲ್ಲಿ ಮದುವೆ ಆದರು. ಮದುವೆ ಬಳಿಕ ಅವರು ಒಪ್ಪಿ ನಟಿಸಿದ ಸಿನಿಮಾ ಎಂದರೆ ಅದು ‘ಆದಿ ಲಕ್ಷ್ಮಿ ಪುರಾಣ’ ಮಾತ್ರ. ಅವರು ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಕೋರಿಕೆ. ಆದರೆ, ಆ ಆಸೆ ಸದ್ಯಕ್ಕಂತೂ ಈಡೇರುವುದು ಅನುಮಾನವೇ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಾಧಿಕಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಪೋಸ್ಟ್ ಗಮನ ಸೆಳೆದಿದೆ.

ಸೂರ್ಯಾಸ್ತದ ಸಮಯದಲ್ಲಿ ರಾಧಿಕಾ ಪಂಡಿತ್ ಅವರು ಸಮುದ್ರದಂಚಿನಲ್ಲಿ ನಿಂತಿದ್ದಾರೆ. ಇದಕ್ಕೆ ಅವರು,  ‘ಒಳ್ಳೆಯ ದಿನಗಳು ಸಂತೋಷವನ್ನು ನೀಡುತ್ತವೆ. ಕೆಟ್ಟ ದಿನಗಳು ಅನುಭವವನ್ನು ನೀಡುತ್ತವೆ. ಅತೀ ಕೆಟ್ಟ ದಿನಗಳು ಪಾಠ ಕಲಿಸುತ್ತದೆ. ಉತ್ತಮ ದಿನಗಳು ನೆನಪುಗಳನ್ನು ನೀಡುತ್ತವೆ’ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಈ ಸಾಲುಗಳು ಅನೇಕರಿಗೆ ಇಷ್ಟವಾಗಿದೆ.

ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 30 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅವರು ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಫೋಟೋ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಾರೆ.

ಇದನ್ನೂ ಓದಿ: ಮಳೆ ಬಗ್ಗೆ ಅನಿಸಿಕೆ ಹಂಚಿಕೊಂಡ ರಾಧಿಕಾ ಪಂಡಿತ್​; ಆದರೆ ಅಭಿಮಾನಿಗಳು ಕೇಳಿದ್ದೇ ಬೇರೆ

‘ಯಶ್ 19’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ರಾಧಿಕಾ ಪಂಡಿತ್ ಯಾವುದೇ ಪೋಸ್ಟ್ ಹಂಚಿಕೊಂಡರೂ ಯಶ್ ಮುಂದಿನ ಸಿನಿಮಾ ಕುರಿತು ಫ್ಯಾನ್ಸ್​ ಪ್ರಶ್ನೆ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ