AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಜನರಿಂದ ದೂರ ಹೋಗಿಲ್ಲ, ಮತ್ತಷ್ಟು ಹತ್ತಿರವಾಗಿದ್ದೇನೆ’; ಕಂಬ್ಯಾಕ್ ಬಗ್ಗೆ ಅನಿರುದ್ಧ ಜತ್ಕರ್ ಮಾತು

Aniruddha Jatkar: ನಟ ಅನಿರುದ್ಧ ಜತ್ಕರ್ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ನಾನು ಜನರಿಂದ ದೂರ ಹೋಗಿಲ್ಲ, ಮತ್ತಷ್ಟು ಹತ್ತಿರವಾಗಿದ್ದೇನೆ’; ಕಂಬ್ಯಾಕ್ ಬಗ್ಗೆ ಅನಿರುದ್ಧ ಜತ್ಕರ್ ಮಾತು
ಅನಿರುದ್ಧ ಜತ್ಕರ್
Follow us
ರಾಜೇಶ್ ದುಗ್ಗುಮನೆ
|

Updated on:Jul 29, 2023 | 2:41 PM

ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಇತ್ತೀಚಿನ ವರ್ಷಗಳಲ್ಲಿ ಕಿರುತೆರೆಯಲ್ಲಿ ಹೆಚ್ಚು ಬ್ಯುಸಿ ಇದ್ದರು. ಈಗ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿದೆ. ರೇಚಲ್​ ಡೇವಿಡ್ (Rachel David), ನಿಧಿ ಸುಬ್ಬಯ್ಯ ಚಿತ್ರದ ನಾಯಕಿಯರು. ಈ ಚಿತ್ರವನ್ನು ಆನಂದ್ ರಾಜ್ ನಿರ್ದೇಶನ ಮಾಡುತ್ತಿದ್ದು, ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಖುಷಿಯನ್ನು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಅನಿರುದ್ಧ ಹಂಚಿಕೊಂಡಿದ್ದಾರೆ.

ಕಂಬ್ಯಾಕ್ ಸಿನಿಮಾದ ಬಗ್ಗೆ ಎಷ್ಟು ಖುಷಿ ಇದೆ?

ನಿಜಕ್ಕೂ ಸಾಕಷ್ಟು ಖುಷಿ ಆಗುತ್ತಿದೆ. ನಾನು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸದೇ ಐದು ವರ್ಷ ಆಗಿದೆ. ಈಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆದರೆ, ಈ ಐದು ವರ್ಷಗಳಲ್ಲಿ ಜನರಿಂದ ದೂರ ಹೋಗಿಲ್ಲ. ಜನರಿಗೆ ಮತ್ತಷ್ಟು ಹತ್ತಿರ ಆದೆ. ಧಾರಾವಾಹಿಗಳ ಮೂಲಕ ಜನರಿಗೆ ಹೆಚ್ಚು ತಲುಪಿಸಿದೆ.

ಸಿನಿಮಾಗೆ ಏನಾದರೂ ಸಿದ್ಧತೆ ಮಾಡಿಕೊಂಡ್ರಾ?

ಖಂಡಿತವಾಗಿಯೂ. ಸಿನಿಮಾ ಇರಲಿ ಧಾರಾವಾಹಿ ಇರಲಿ ಸಿದ್ಧತೆಯಂತೂ ಮಾಡಿಕೊಂಡೇ ಇರುತ್ತೇನೆ. ಧಾರಾವಾಹಿಗಳಲ್ಲಿ ಒಂದು ದಿನದಲ್ಲಿ ಎಷ್ಟು ದೃಶ್ಯ ಮುಗಿಸುತ್ತೇವೆ ಅನ್ನೋದು ನಿರ್ಮಾಪಕರಿಗೆ ಮುಖ್ಯವಾಗುತ್ತದೆ. ಜನರ ಪ್ರತಿಕ್ರಿಯೆಗೆ ತಕ್ಕಂತೆ ಅಲ್ಲಿ ಬದಲಾವಣೆಗಳು ಆಗುತ್ತವೆ. ಆದರೆ, ಸಿನಿಮಾಗಳಲ್ಲಿ ಆ ರೀತಿ ಆಗುವುದಿಲ್ಲ. ಸಂಪೂರ್ಣ ಸಿದ್ಧತೆಯೊಂದಿಗೆ ತಂಡ ಸೆಟ್​​ಗೆ ಬರುತ್ತದೆ. ಸಾಕಷ್ಟು ಸಮಯ ತೆಗೆದುಕೊಂಡು ತಾಳ್ಮೆಯಿಂದ, ಪ್ರೀತಿಯಿಂದ ದೃಶ್ಯವನ್ನು ಶೂಟ್ ಮಾಡಬಹುದು.

‘ಮಾಲ್ಗುಡಿ ದಿನಗಳು’ಗೆ ಕಂಠ ದಾನ ಮಾಡಿದ ಬಗ್ಗೆ..

ಆರ್​ಕೆ ನಾರಾಯಣ್ ಅವರು ಬರೆದ ‘ಮಾಲ್ಗುಡಿ ಡೇಸ್’ ಪುಸ್ತಕವನ್ನು ‘ಮಾಲ್ಗುಡಿ ದಿನಗಳು’ ಎಂದು ಕನ್ನಡಕ್ಕೆ ಡಾ. ಎಚ್​ ರಾಮಚಂದ್ರಸ್ವಾಮಿ ಅನುವಾದ ಮಾಡಿದ್ದಾರೆ. ಇದರಲ್ಲಿ 32 ಕಥೆಗಳಿವೆ. ಇದರ ಆಡಿಯೋ ಬುಕ್ ರೆಡಿ ಮಾಡಲಾಗಿದೆ. ಈ ಕಥೆಗಳನ್ನು ನಾನು ಓದಿದ್ದೇನೆ. ಆಗಸ್ಟ್ ಮೂರನೇವಾರಕ್ಕೆ ಇದು ಅಪ್​ಲೋಡ್ ಆಗಬಹುದು. ನಾನು ‘ಮಾಲ್ಗುಡಿ ಡೇಸ್​’ ನೋಡಿ ಬೆಳೆದವನು. ನಾನು ಬೆಂಗಳೂರಿಗೆ ಬರುವುದಕ್ಕಿಂತ ಮೊದಲೇ ಶಂಕರ್ ನಾಗ್ ತೀರಿಕೊಂಡಿದ್ದರು. ಮೊದಲೇ ಬೆಂಗಳೂರಿಗೆ ಬಂದು ಅವರನ್ನು ಭೇಟಿ ಮಾಡಿದ್ದರೆ ನನಗೆ ಇದರಲ್ಲಿ ನಟಿಸಲು ನನಗೂ ಅವಕಾಶ ಸಿಗುತ್ತಿತ್ತೋನೋ. ಈಗ ಈ ಕಥೆಗಳನ್ನು ಓದಿದ ಖುಷಿ ಇದೆ.

ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ

ಮತ್ತೆ ಧಾರಾವಾಹಿಗಳಲ್ಲಿ ನಟಿಸುದು ಯಾವಾಗ?

ನನಗೆ ಹಿರಿತೆರೆ-ಕಿರುತೆರೆ ಎಂಬ ಭೇದಭಾವ ಇಲ್ಲ. ಎಲ್ಲಾ ಕ್ಷೇತ್ರಗಳು ತುಂಬಾನೇ ನೀಡಿವೆ. ಕಿರುತೆರೆಯಿಂದ ನಾನು ಸಾಕಷ್ಟು ಜನರಿಗೆ ಹತ್ತಿರವಾಗಿದ್ದೇನೆ. ಆ ಖುಷಿ ಇದೆ. ಮತ್ತೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಧಾರಾವಾಹಿಗಳಲ್ಲಿ ನಟಿಸುತ್ತೇನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:55 pm, Sat, 29 July 23

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ