ಕೋರ್ಟ್ ಆದೇಶ ಕೇಳಿ ನಟಿಮಣಿಯರು ಕೆಂಡಾಮಂಡಲ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು CCB ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು. ಈ ವೇಳೆ ಕೋರ್ಟ್ ಆದೇಶ ಕೇಳಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕೆಂಡಾಮಂಡಲವಾದರು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಲ್ಯಾಪ್ಟಾಪ್ ಮುಂದೆ ಕೂತಿದ್ದ ನಟಿಮಣಿಯರು ಮತ್ತೆ 3 ದಿನಗಳ ಕಾಲ CCB ವಶಕ್ಕೆ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಮತ್ತು ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು CCB ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಈ ವೇಳೆ ಕೋರ್ಟ್ ಆದೇಶ ಕೇಳಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕೆಂಡಾಮಂಡಲವಾದರು ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಲ್ಯಾಪ್ಟಾಪ್ ಮುಂದೆ ಕೂತಿದ್ದ ನಟಿಮಣಿಯರು ಮತ್ತೆ 3 ದಿನಗಳ ಕಾಲ CCB ವಶಕ್ಕೆ ನೀಡಿದ್ದನ್ನು ಕೇಳಿ ಆಕ್ರೋಶಗೊಂಡರು. ತಮ್ಮ ಕೊಠಡಿಯಲ್ಲೇ ಎದ್ದು ನಿಂತು ಆಕ್ರೋಶದಿಂದ ಕೂಗಾಡಿದ್ದಾರಂತೆ.
‘ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’ ಇನ್ನು ನಟಿಯರ ಕಸ್ಟಡಿ ಪಡೆದಿರುವ CCB ಅಧಿಕಾರಿಗಳು ರಾಗಿಣಿ ಹಾಗೂ ಸಂಜನಾ ವಿರುದ್ಧ ನಮ್ಮ ಬಳಿ ಪಕ್ಕಾ ಸಾಕ್ಷ್ಯಾಧಾರವಿದೆ. ಡ್ರಗ್ಸ್ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಹಾಗಾಗಿ, ಮತ್ತೆ 3 ದಿನಗಳ ಕಾಲ ನಟಿಯರ ವಿಚಾರಣೆ ನಡೆಸುತ್ತೇವೆ ಎಂದು ಟಿವಿ 9ಗೆ CCB ಉನ್ನತ ಮೂಲಗಳು ತಿಳಿಸಿದೆ.
Published On - 6:26 pm, Fri, 11 September 20