
‘ಸು ಫ್ರಮ್ ಸೋ’ ಮೂಲಕ ರಾಜ್ ಬಿ. ಶೆಟ್ಟಿ (Raj B Shetty) ಅವರು ಪರಭಾಷೆಯವರಿಗೂ ಪರಿಚಯ ಆದರು. ಕನ್ನಡದಲ್ಲಿ ಈ ರೀತಿಯ ಭಿನ್ನ ಸಿನಿಮಾಗಳನ್ನು ಕೂಡ ನೀಡಲಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು. ರಾಜ್ ಬಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಅಪರೂಪದಲ್ಲೇ ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಿ ಭರ್ಜರಿ ಲೈಕ್ಸ್ ಸಿಕ್ಕಿದೆ.
ಈ ಫೋಟೋದಲ್ಲಿ ಇರೋದು ರಾಜ್ ಬಿ ಶೆಟ್ಟಿ ತಾಯಿ, ಮತ್ತೊಂದು ರಾಜ್ ಶೆಟ್ಟಿ ಅವರ ಪ್ರೀತಿಯ ಶ್ವಾನ ಲಕ್ಷ್ಮಿ. ಅವರಿಗೆ ಕುಟುಂಬ ಹಾಗೂ ಶ್ವಾನಗಳ ಮೇಲೆ ವಿಶೇಷ ಪ್ರೀತಿ. ಇಬ್ಬರೂ ಒಂದೇ ಕಡೆ ಇರುವುದರಿಂದ ಈ ಫೋಟೋ ಸ್ಪೆಷಲ್ ಎನಿಸಿಕೊಂಡಿದೆ. ಹೀಗಾಗಿ, ಅವರು ಈ ಫೋಟೋಗೆ ಅದೇ ರೀತಿಯ ಕ್ಯಾಪ್ಶನ್ ನೀಡಿದ್ದಾರೆ.
‘ಅಮ್ಮ, ಲಕ್ಷ್ಮಿಯಮ್ಮ (ಶ್ವಾನ) ಹಾಗೂ ನಾನು. ಇದು ನನ್ನ ಫೇವರಿಟ್ ಫೋಟೋ’ ಎಂದು ರಾಜ್ ಬಿ ಶೆಟ್ಟಿ ಬರೆದುಕೊಂಡಿದ್ದಾರೆ. ರಾಜ್ ಅವರು ಹಲವು ದೇಶಿಯ ತಳಿಯ ನಾಯಿಯನ್ನು ಸಾಕಿದ್ದಾರೆ. ಈ ಶ್ವಾನಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ಲಕ್ಷ್ಮಿ ಶ್ವಾನ ಅವರ ಫೇವರಿಟ್ ಶ್ವಾನಗಳಲ್ಲಿ ಒಂದು. ಅದರ ಜೊತೆ ಇದ್ದಾಗ ಅವರಿಗೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲವಂತೆ. ಈ ಕಾರಣದಿಂದಲೇ ಫೋಟೋದಲ್ಲಿ ಅವರು ಅಷ್ಟೊಂದು ನಗುತ್ತಿದ್ದಾರೆ.
ಇದನ್ನೂ ಓದಿ: ಅನುಶ್ರೀ ಮದುವೆಗೆ ಬಂದ ‘ಬಾವ’; ಇಲ್ಲಿದೆ ವಿವಾಹದ ಸುಂದರ ಫೋಟೋಸ್
ರಾಜ್ ಅವರು ಭದ್ರಾವತಿಯವರು. ಆದರೆ, ಅವರು ನಂತರ ಮಂಗಳೂರಿಗೆ ಶಿಫ್ಟ್ ಆಗಬೇಕಾಯಿತು. ಈಗ ಮಂಗಳೂರೇ ಅವರ ಊರಾಗಿದೆ. ಸಿನಿಮಾ ಕೆಲಸದ ಸಂದರ್ಭಗಳಲ್ಲಿ ಬೆಂಗಳೂರಲ್ಲಿ ಅವರು ನೆಲೆಸುತ್ತಾರೆ. ವಿವಿಧ ರೀತಿಯ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಪರಭಾಷೆಯ ಚಿತ್ರಗಳನ್ನು ಅವರು ಇಲ್ಲಿ ಹಂಚಿಕೆ ಕೂಡ ಮಾಡಿದ್ದಾರೆ. ‘ಲೋಕಃ’ ಸಿನಿಮಾ ಆಗಸ್ಟ್ 28ರಂದು ಬಿಡುಗಡೆ ಕಂಡಿದೆ. ಮಲಯಾಳಂನಲ್ಲಿ ಇದನ್ನು ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಕರ್ನಾಟಕದಲ್ಲಿ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ಸ್ ಹಂಚಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.