Kichcha Sudeepa: ಕಿಚ್ಚನಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ

| Updated By: guruganesh bhat

Updated on: Sep 02, 2021 | 10:53 PM

ರಾಜಸ್ಥಾನ ರಾಯಲ್ಸ್ ತಂಡ ಕಿಚ್ಚ ಸುದೀಪ್​ಗೆ ವಿಶೇಷ ಪೋಸ್ಟ್ ಮುಖಾಂತರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಆ ಕುರಿತ ಕುತೂಹಲಕರ ವರದಿ ಇಲ್ಲಿದೆ.

Kichcha Sudeepa: ಕಿಚ್ಚನಿಗೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ ರಾಜಸ್ಥಾನ್ ರಾಯಲ್ಸ್; ವಿಡಿಯೊ ನೋಡಿ
ರಾಜಸ್ಥಾನ ರಾಯಲ್ಸ್ ಕಳುಹಿಸಿದ ಜೆರ್ಸಿಯೊಂದಿಗೆ ಕಿಚ್ಚ ಸುದೀಪ್ (ಚಿತ್ರ ಕೃಪೆ: ಕೆಸಿ ಕಾರ್ಯಪ್ಪ/ ಟ್ವಿಟರ್)
Follow us on

ಭಾರತೀಯ ಕ್ರಿಕೆಟ್​ಗೆ ಹೊಸ ಆಯಾಮವನ್ನು ನೀಡಿದ ಐಪಿಎಲ್​ ಪಂದ್ಯಾವಳಿಯ ಮೊದಲ ಸೀಸನ್ ವಿನ್ನರ್ ರಾಜಸ್ಥಾನ ರಾಯಲ್ಸ್, ಕಿಚ್ಚ ಸುದೀಪ್​ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಜತೆಗೆ ಅದು ಕಳುಹಿಸಿದ್ದ ವಿಶೇಷ ಉಡುಗೊರೆಯೊಂದರ ಫೊಟೊ, ವಿಡಿಯೊವನ್ನು ಮತ್ತೆ ಹಂಚಿಕೊಂಡಿದೆ. ಅದನ್ನು ಓಪನ್ ಮಾಡಿದ್ದ ಕಿಚ್ಚನಿಗೆ ಸಖತ್ ಸಂತಸವಾಗಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ 7ನೇ ನಂಬರ್ ಜೆರ್ಸಿಯನ್ನು ಸುದೀಪ್​ಗೆ ಕಳುಹಿಸಿಕೊಡಲಾಗಿತ್ತು. ಇದನ್ನು ಕಿಚ್ಚ ಸುದೀಪ್​ಗೆ ತಲುಪಿಸುವ ಕೆಲಸ ಮಾಡಿದ್ದು, ರಾಜಸ್ಥಾನ ತಂಡದ ಪರ ಆಡುವ ಕರ್ನಾಟಕದ ಮಿಸ್ಟರಿ ಸ್ಪಿನ್ನರ್ ಕೆ.ಸಿ.ಕಾರ್ಯಪ್ಪ.

ಜೆರ್ಸಿಯೊಂದಿಗೆ ಶುಭವನ್ನು ಕೋರುವ ಒಂದು ಹಾರೈಕೆಯ ಪತ್ರವನ್ನೂ ಕೂಡ ರಾಯಲ್ಸ್ ಕಳುಹಿಸಿಕೊಟ್ಟಿದೆ. ಅದರಲ್ಲಿ, ‘ಸತ್ಯ ಮತ್ತು ಶಿವನಿಂದ ತಳಪತಿ ಜಲತರಂಗನ್​ವರೆಗೆ- ಜನ್ಮದಿನದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಲಭಿಸಲಿ’ ಎಂದು ಬರೆಯಲಾಗಿದೆ. ಜೊತೆಗೆ ‘ನೀವು ಸ್ಟಂಪ್​ಗಳ ಹಿಂದೆ ನಿಲ್ಲುವುದನ್ನು ನೋಡುವುದು ಕೂಡ ನಮಗೆ ಇಷ್ಟ’ ಎಂದು ರಾಜಸ್ಥಾನ್ ರಾಯಲ್ಸ್ ತಿಳಿಸಿದೆ.

ರಾಜಸ್ಥಾನ್ ರಾಯಲ್ಸ್ ತಂಡ ಕಳುಹಿಸಿದ ಉಡುಗೊರೆಯನ್ನು ಸುದೀಪ್ ತೆರೆಯುತ್ತಿರುವುದು:

ಇಂದು 49ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಸುದೀಪ್​ಗೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆ. ಒಲಂಪಿಕ್ಸ್​ನಲ್ಲಿ ಜಾವೆಲಿನ್ ಎಸೆತದ ಮೂಲಕ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ನೀರಜ್ ಚೋಪ್ರಾ, ಸುದೀಪ್​ಗೆ ಶುಭಾಶಯ ತಿಳಿಸಿ, ವಿಕ್ರಾಂತ್ ರೋಣ ಚಿತ್ರಕ್ಕೆ ಹಾರೈಸಿದ್ದರು. ಖ್ಯಾತ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ಸುದೀಪ್ ಅವರ ಸಿಡಿಪಿಯನ್ನು ಕೆಲ ದಿನಗಳ ಹಿಂದೆಯೇ ಬಿಡುಗಡೆಗೊಳಿಸಿ ಶುಭಾಶಯ ಕೋರಿದ್ದರು.

ಸಿಸಿಎಲ್ ಮುಖಾಂತರ ಕ್ರಿಕೆಟ್​ನಲ್ಲೂ ಸುದೀಪ್ ಸಕ್ರಿಯರಾಗಿರುವುದರಿಂದ ಅವರಿಗೆ ಖ್ಯಾತ ಕ್ರಿಕೆಟಿಗರೊಂದಿಗೆ ಆಪ್ತ ಒಟನಾಟವಿದೆ. ದೇಶದ ವಿವಿಧ ಚಿತ್ರರಂಗಗಳಲ್ಲಿ ಕೆಲಸ ಮಾಡಿರುವುದರಿಂದ ಚಿತ್ರರಂಗದ ದಿಗ್ಗಜರೂ ಆಪ್ತರಾಗಿದ್ದಾರೆ. ಆದ್ದರಿಂದಲೇ ಸುದೀಪ್ ಅವರಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಹುಟ್ಟುಹಬ್ಬ; ‘ಅಭಿನಯ ಚಕ್ರವರ್ತಿ’ ಜೀವನದ 10 ಇಂಟರೆಸ್ಟಿಂಗ್​ ವಿಷಯಗಳು ಇಲ್ಲಿವೆ

Sudeep Birthday: ಪರಭಾಷೆಗಳಲ್ಲಿ ಕಿಚ್ಚನ ಮಿಂಚು; ಈ ಚಿತ್ರಗಳಲ್ಲಿ ಸುದೀಪ್ ನಟನೆ ಕಂಡು ಮಾರುಹೋಗದವರುಂಟೇ?

Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ

(Rajasthan Royals wishes Kichcha Sudeepa on his birthday)

Published On - 3:14 pm, Thu, 2 September 21