ಪರಭಾಷೆಯ ಸೆಲೆಬ್ರಿಟಿಗಳಿಗೆ ರಾಜ್ಕುಮಾರ್ ಬಗ್ಗೆ ಇತ್ತು ವಿಶೇಷ ಪ್ರೀತಿ
ಕಮಲ್ ಹಾಸನ್ಗೂ ರಾಜ್ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್ಮೆನ್ ಎಂದರೆ ರಾಜ್ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.
ಪರಭಾಷೆಯ ಅನೇಕ ಸೆಲೆಬ್ರಿಟಿಗಳಿಗೆ ಕನ್ನಡದ ಮೇಲೆ, ಕನ್ನಡದ ನಟರ ಮೇಲೆ ವಿಶೇಷ ಪ್ರೀತಿ ಇದೆ. ಅದರಲ್ಲೂ ರಾಜ್ಕುಮಾರ್ ಅವರ ಮೇಲೆ ವಿಶೇಷ ಪ್ರೀತಿ ಇತ್ತು. ರಾಜ್ಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜ್ಕುಮಾರ್ ಎನ್ನುವ ಭಾವನೆ ಅನೇಕರಿಗೆ ಇದೆ. ಅವರು ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ ನೀಡಿದ ಕೊಡುಕೆ ತುಂಬಾನೇ ದೊಡ್ಡದು.
ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರಿಗೆ ರಾಜ್ಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಇತ್ತು. ರಜನಿಕಾಂತ್ ಅವರು ಕರ್ನಾಟಕಕ್ಕೆ ಬಂದಾಗ ರಾಜ್ಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದರು. ಅನೇಕ ಬಾರಿ ಈ ಭೇಟಿ ನಡೆದಿತ್ತು. ರಾಜ್ಕುಮಾರ್ ಮನೆಯಲ್ಲಿ ಅನೇಕ ಬಾರಿ ರಜನಿಕಾಂತ್ ಊಟ ಮಾಡಿದ್ದರು. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ರಾಜ್ಕುಮಾರ್ ಬಗ್ಗೆ ಮಾತನಾಡಿದ್ದರು. ‘ಶಿವಾಜಿ ಗಣೇಶನ್, ಎಂಜಿಆರ್ ಸೇರಿದರೆ ರಾಜ್ಕುಮಾರ್’ ಎಂದಿದ್ದರು ರಜನಿಕಾಂತ್.
ಕಮಲ್ ಹಾಸನ್ಗೂ ರಾಜ್ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್ಮೆನ್ ಎಂದರೆ ರಾಜ್ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.
ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗಲೂ ಅನೇಕರಿಗೆ ಸ್ಫೂರ್ತಿ. ರಾಜ್ಕುಮಾರ್ ಅವರು ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಹಾಡನ್ನು ಕನ್ನಡ ರಾಜ್ಯೋತ್ಸವದ ದಿನ ಹಾಕಲಾಗುತ್ತದೆ.
ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವ. ಈ ವಿಶೇಷ ದಿನದ ಪ್ರಯುಕ್ತ ಅನೇಕರು ಈ ಹಾಡನ್ನು ಪ್ಲೇ ಮಾಡುತ್ತಾರೆ. ರಾಜ್ಕುಮಾರ್ಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇತ್ತು. ಕನ್ನಡ ಬೆಳೆಯಲು ಅವರ ಸಿನಿಮಾಗಳು ಸಹಾಯ ಮಾಡಿವೆ. ಅವರಿಗೆ ಕನ್ನಡದ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದು ಆಗಾಗ ಸಾಬೀತು ಆಗುತ್ತಲೇ ಇದೆ.
View this post on Instagram
ಕಮಲ್ ಹಾಸನ್ಗೂ ರಾಜ್ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್ಮೆನ್ ಎಂದರೆ ರಾಜ್ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.
ಇದನ್ನೂ ಓದಿ: ‘ಬಘೀರ’ ಯಶಸ್ಸು: ಪುನೀತ್ ರಾಜ್ಕುಮಾರ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
ಕನ್ನಡದ ರಾಜ್ಯೋತ್ಸವಕ್ಕೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂದು ಎಲ್ಲೆಡೆ ಕನ್ನಡದ ಕಲರವ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.