ಪರಭಾಷೆಯ ಸೆಲೆಬ್ರಿಟಿಗಳಿಗೆ ರಾಜ್​ಕುಮಾರ್ ಬಗ್ಗೆ ಇತ್ತು ವಿಶೇಷ ಪ್ರೀತಿ

ಕಮಲ್ ಹಾಸನ್​ಗೂ ರಾಜ್​ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್​ಮೆನ್ ಎಂದರೆ ರಾಜ್​ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್​ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.

ಪರಭಾಷೆಯ ಸೆಲೆಬ್ರಿಟಿಗಳಿಗೆ ರಾಜ್​ಕುಮಾರ್ ಬಗ್ಗೆ ಇತ್ತು ವಿಶೇಷ ಪ್ರೀತಿ
Rajkumar
Edited By:

Updated on: Nov 01, 2024 | 10:55 AM

ಪರಭಾಷೆಯ ಅನೇಕ ಸೆಲೆಬ್ರಿಟಿಗಳಿಗೆ ಕನ್ನಡದ ಮೇಲೆ, ಕನ್ನಡದ ನಟರ ಮೇಲೆ ವಿಶೇಷ ಪ್ರೀತಿ ಇದೆ. ಅದರಲ್ಲೂ ರಾಜ್​ಕುಮಾರ್ ಅವರ ಮೇಲೆ ವಿಶೇಷ ಪ್ರೀತಿ ಇತ್ತು. ರಾಜ್​ಕುಮಾರ್ ಎಂದರೆ ಕನ್ನಡ, ಕನ್ನಡ ಎಂದರೆ ರಾಜ್​ಕುಮಾರ್ ಎನ್ನುವ ಭಾವನೆ ಅನೇಕರಿಗೆ ಇದೆ. ಅವರು ಕನ್ನಡ ಚಿತ್ರರಂಗಕ್ಕೆ, ಕನ್ನಡಕ್ಕೆ ನೀಡಿದ ಕೊಡುಕೆ ತುಂಬಾನೇ ದೊಡ್ಡದು.

ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರಿಗೆ ರಾಜ್​ಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಇತ್ತು. ರಜನಿಕಾಂತ್ ಅವರು ಕರ್ನಾಟಕಕ್ಕೆ ಬಂದಾಗ ರಾಜ್​ಕುಮಾರ್ ಅವರನ್ನು ಭೇಟಿ ಮಾಡುತ್ತಿದ್ದರು. ಅನೇಕ ಬಾರಿ ಈ ಭೇಟಿ ನಡೆದಿತ್ತು. ರಾಜ್​ಕುಮಾರ್ ಮನೆಯಲ್ಲಿ ಅನೇಕ ಬಾರಿ ರಜನಿಕಾಂತ್ ಊಟ ಮಾಡಿದ್ದರು. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಇಬ್ಬರೂ ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದರು. ‘ಶಿವಾಜಿ ಗಣೇಶನ್​, ಎಂಜಿಆರ್​ ಸೇರಿದರೆ ರಾಜ್​ಕುಮಾರ್’ ಎಂದಿದ್ದರು ರಜನಿಕಾಂತ್.

ಕಮಲ್ ಹಾಸನ್​ಗೂ ರಾಜ್​ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್​ಮೆನ್ ಎಂದರೆ ರಾಜ್​ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್​ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.

ರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗಲೂ ಅನೇಕರಿಗೆ ಸ್ಫೂರ್ತಿ. ರಾಜ್​ಕುಮಾರ್ ಅವರು ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಹಾಡನ್ನು ಕನ್ನಡ ರಾಜ್ಯೋತ್ಸವದ ದಿನ ಹಾಕಲಾಗುತ್ತದೆ.

ಇಂದು (ನವೆಂಬರ್ 1) ಕನ್ನಡ ರಾಜ್ಯೋತ್ಸವ. ಈ ವಿಶೇಷ ದಿನದ ಪ್ರಯುಕ್ತ ಅನೇಕರು ಈ ಹಾಡನ್ನು ಪ್ಲೇ ಮಾಡುತ್ತಾರೆ. ರಾಜ್​ಕುಮಾರ್​ಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇತ್ತು. ಕನ್ನಡ ಬೆಳೆಯಲು ಅವರ ಸಿನಿಮಾಗಳು ಸಹಾಯ ಮಾಡಿವೆ. ಅವರಿಗೆ ಕನ್ನಡದ ಮೇಲೆ ಎಷ್ಟು ಪ್ರೀತಿ ಇತ್ತು ಎಂಬುದು ಆಗಾಗ ಸಾಬೀತು ಆಗುತ್ತಲೇ ಇದೆ.

ಕಮಲ್ ಹಾಸನ್​ಗೂ ರಾಜ್​ಕುಮಾರ್ ಬಗ್ಗೆ ವಿಶೇಷ ಗೌರವ ಇತ್ತು. ‘ಜೆಂಟಲ್​ಮೆನ್ ಎಂದರೆ ರಾಜ್​ಕುಮಾರ್’ ಎಂದು ಕಮಲ್ ಹಾಸನ್ ಹೇಳಿದ್ದರು. ‘ನಾನು ದೇವರ ರೀತಿ ಪೂಜಿಸಿದ್ದು ಕನ್ನಡದ ಕಂಠೀರವ ರಾಜ್​ಕುಮಾರ್’ ಎಂದು ಚಿರಂಜೀವಿ ಹೇಳಿದ್ದರು.

ಇದನ್ನೂ ಓದಿ: ‘ಬಘೀರ’ ಯಶಸ್ಸು: ಪುನೀತ್ ರಾಜ್​ಕುಮಾರ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ

ಕನ್ನಡದ ರಾಜ್ಯೋತ್ಸವಕ್ಕೆ ಅನೇಕ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂದು ಎಲ್ಲೆಡೆ ಕನ್ನಡದ ಕಲರವ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us