AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​

ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್​ ನಟರ ಅಭಿಮಾನಿಗಳು ಒಂದಾಗಿದ್ದಾರೆ.

‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​
‘ರಾಜ್​-ವಿಷ್ಣು ಅಭಿಮಾನಿಗಳು ಒಂದಾಗಿದ್ದಾರೆ ಎಂದರೆ ನಡುಕ ಶುರುವಾಗಿದೆ ಎಂದರ್ಥ’; ಬಿಬಿಎಂಪಿಗೆ ಎಚ್ಚರಿಸಿದ ಫ್ಯಾನ್ಸ್​
TV9 Web
| Edited By: |

Updated on: Sep 05, 2021 | 4:22 PM

Share

ಅನುಮತಿ ಪಡೆಯದೇ ಬೆಂಗಳೂರಿನಲ್ಲಿ ಅಭಿಮಾನಿಗಳು ನಿರ್ಮಿಸಿದ ರಾಜ್​ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಬಿಎಂಪಿಗೆ ರಾಜ್​ಕುಮಾರ್​ ಹಾಗೂ ವಿಷ್ಣು ಅಭಿಮಾನಿಗಳು ಒಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.

ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​ ಅಭಿಮಾನಿಗಳ ನಡುವೆ ಕೆಲವೊಮ್ಮೆ ಘರ್ಷಣೆ ನಡೆದ ಉದಾಹರಣೆ ಕೂಡ ಇದೆ. ಆದರೆ ಅದನ್ನೆಲ್ಲ ಬದಿಗಿಟ್ಟು ಈಗ ಈ ಸ್ಟಾರ್​ ನಟರ ಅಭಿಮಾನಿಗಳು ಒಂದಾಗಿದ್ದಾರೆ. ತಮ್ಮ ನೆಚ್ಚಿನ ಹೀರೋಗಳ ಪುತ್ಥಳಿಗಳನ್ನು ಉಳಿಸಿಕೊಳ್ಳಲು ಜೊತೆಯಾಗಿ ಕೈ ಜೋಡಿಸಿದ್ದಾರೆ. ಈ ಬಗ್ಗೆ ಭಾನುವಾರ (ಸೆಪ್ಟೆಂಬರ್ 5) ಸುದ್ದಿಗೋಷ್ಠಿ ನಡೆಸಿದ್ದಾರೆ.

‘40 ವರ್ಷಗಳಲ್ಲಿ ರಾಜ್​​ಕುಮಾರ್​ ಮತ್ತು ವಿಷ್ಣುವರ್ಧನ್ ಅವರನ್ನು ಸೇರಿಸೋಕೆ ಯಾರಿಂದಲೂ ಸಾಧ್ಯವಾಗಿರಲಿಲ್ಲ. ಅದನ್ನು ನಾನು ಹಾಗೂ ಕ್ರಾಂತಿರಾಜ್ ಮಾಡಿದ್ದೇವೆ. ಒಂದೇ ಒಂದು ಪ್ರತಿಮೆಗೆ ಕೈ ಇಟ್ರೆ ಬಿಬಿಎಂಪಿಗೆ ಮುತ್ತಿಗೆ ಹಾಕಿ, ಬೀಗ ಹಾಕುತ್ತೇವೆ. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಸೇರಿ ಎಲ್ಲರ ಪ್ರತಿಮೆ ತೆಗೆಯಿರಿ. ಆಗ ನಾವು ಈ ಪ್ರತಿಮೆ ತೆಗೆಯಲು ಅವಕಾಶ ನೀಡುತ್ತೇವೆ. ಪ್ರತಿಮೆ ನಮ್ಮಹಕ್ಕು’ ಎಂದು ರಾಜ್ ಸಂಘಟನೆ‌ ಮುಖಂಡ ತ್ಯಾಗರಾಜ್ ಹೇಳಿದ್ದಾರೆ.

‘ಬಿಬಿಎಂಪಿ ಕಮಿಷನರ್​ ಗೌರವ್ ಗುಪ್ತಾಗೆ ನಮ್ಮ ಬಗ್ಗೆ ಗೊತ್ತಿಲ್ಲ ಅನಿಸುತ್ತದೆ. ಡಾ.ರಾಜ್, ಡಾ.ವಿಷ್ಣುವರ್ಧನ್ ವಿಚಾರಕ್ಕೆ ಬಂದ್ರೆ ನಿಮಗೆ ಕಂಟಕ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ಡಾ. ರಾಜ್​ಕುಮಾರ್ ಮತ್ತು ವಿಷ್ಣು ಅಭಿಮಾನಿಗಳು ಜೊತೆಗೂಡಿದ್ದಾರೆ ಎಂದರೆ ಅಲ್ಲಿ ನಡುಕ ಶುರುವಾಗಿದೆ ಅಂತ ಅರ್ಥ’ ಎಂದು ಎಚ್ಚರಿಸಿದ್ದಾರೆ ವಿಷ್ಣುವರ್ಧನ್ ಸಂಘಟನೆ ಮುಖಂಡ ಕ್ರಾಂತಿರಾಜು.

‘ಮಹಾನಗರ ಪಾಲಿಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಪ್ರತಿಮೆ ತೆರವುಗೊಳಿಸಬಾರದು. ಪ್ರತಿಮೆ ತೆರವು ಗೊಳಿಸಿದ್ರೆ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದರು ಅಭಿಮಾನಿಗಳ ಸಂಘದ ಮುಖಂಡ ಪಾಲನೇತ್ರ.

ಇದನ್ನೂ ಓದಿ: ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​

ಸಂಘರ್ಷ ಮರೆತು ಒಂದಾದ ರಾಜ್​-ವಿಷ್ಣು ಫ್ಯಾನ್ಸ್​; ಪುತ್ಥಳಿ ತೆರವು ಕಾರ್ಯಕ್ಕೆ ಮುಂದಾದ ಬಿಬಿಎಂಪಿ ವಿರುದ್ಧ ಆಕ್ರೋಶ

ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಆರ್​ಸಿಬಿ ವಿರುದ್ಧ ಐತಿಹಾಸಿಕ ಶತಕ ಬಾರಿಸಿದ ನ್ಯಾಟ್ ಸಿವರ್-ಬ್ರಂಟ್
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಗಣರಾಜ್ಯೋತ್ಸವ ಪರೇಡ್​​ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್‌ ವಿಜಯೋತ್ಸವ
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಅಟ್ಟಾರಿ-ವಾಘಾ ಗಡಿಯಲ್ಲಿ 'ಬೀಟಿಂಗ್ ರಿಟ್ರೀಟ್'
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಟ್ರಾಫಿಕ್ ಜಾಮ್, ಹಿಮಪಾತದಿಂದ 24 ಗಂಟೆ ಕಾರಲ್ಲೇ ಕುಳಿತ ಮನಾಲಿ ಪ್ರವಾಸಿಗರು!
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ?: ಯುವತಿ ಕುಟುಂಬಸ್ಥರಿಂದ ಆರೋಪ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದ ರೈಲು
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಕರ್ನಾಟಕ ಗಡಿಯಲ್ಲಿ 400 ಕೋಟಿ ರೂ. ದರೋಡೆ: ಇಷ್ಟೊಂದು ಹಣ ಸೇರಿದ್ಯಾರಿಗೆ?
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!
ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್!