ಹೇಗಿದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ ‘ರಕ್ಕಿ’ ಚಿತ್ರದ ಟ್ರೇಲರ್?

‘ರಕ್ಕಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ರಕ್ಕಿ ಸುರೇಶ್ ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟ್ರೇಲರ್​ನಲ್ಲಿ ಕಥೆ ಹೆಚ್ಚು ರಿವೀಲ್ ಆಗಿಲ್ಲ. ಆದರೆ ಚಿತ್ರದ ಬಗ್ಗೆ ಕೌತುಕ ಮೂಡಿಸಿದೆ.

ಹೇಗಿದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ ‘ರಕ್ಕಿ’ ಚಿತ್ರದ ಟ್ರೇಲರ್?
Rakky Suresh
Image Credit source: Tv9 Kannada

Updated on: Jun 30, 2026 | 6:53 PM

ಮುಖ್ಯಾಂಶಗಳು

  • ‘ರಕ್ಕಿ’ ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿ.
  • ಟ್ರೇಲರ್​ನಲ್ಲಿ ಕಾಣಿಸಿದೆ ರಕ್ಕಿ ಸುರೇಶ್ ಅವರ ಡ್ಯಾನ್ಸ್, ಆ್ಯಕ್ಷನ್, ನಟನೆ ಹಾಗೂ ಆತ್ಮವಿಶ್ವಾಸ.
  • ಯುವಜನತೆ ಮತ್ತು ಕೌಟುಂಬಿಕ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆದುಕೊಳ್ಳಲಿದೆ ಎಂಬ ಭರವಸೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ‘ಕೆಂಪಿರ್ವೆ’ ಖ್ಯಾತಿಯ ವೆಂಕಟ್ ಭಾರದ್ವಾಜ್ ಅವರು ‘ರಕ್ಕಿ’ (Rakky) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುರೇಶ್ ಸಾಲಿಗ್ರಾಮ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಿನಿಮಾದಲ್ಲಿ ರಕ್ಕಿ ಸುರೇಶ್ (Rakky Suresh) ಅವರು ಹೀರೋ ಆಗಿ ನಟಿಸಿದ್ದಾರೆ. ಬಿ. ಸುರೇಶ, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಬಾಲರಾಜ್ ವಾಡಿ, ರೇಖಾ ವಸಂತ್, ಹರಿಣಿ, ಹರ್ಷಾರ್ಜುನ್ ಮುಂತಾದವರು ನಟಿಸಿದ್ದಾರೆ.

ಗ್ಯಾಂಗ್‌ಸ್ಟರ್ ಕ್ರೈಮ್ ಕಥಾಹಂದರ, ಕಮರ್ಷಿಯಲ್ ಅಂಶಗಳು, ಭಾವನಾತ್ಮಕ ಕ್ಷಣಗಳು ಹಾಗೂ ಉತ್ತಮ ತಾಂತ್ರಿಕ ನಿರ್ವಹಣೆಯೊಂದಿಗೆ ‘ರಕ್ಕಿ’ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರಿಗೆ ಕೌತುಕ ಮೂಡಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿದ್ದರಿಂದ ಚಿತ್ರತಂಡದ ಬಲ ಹೆಚ್ಚಿದೆ.

ಇದೊಂದು ಗ್ಯಾಂಗ್‌ಸ್ಟರ್ ಕ್ರೈಂ ಡ್ರಾಮಾ ಇರುವ ಸಿನಿಮಾ ಎಂಬುದನ್ನು ‘ರಕ್ಕಿ’ ಚಿತ್ರತಂಡ ಮೊದಲಿನಿಂದಲೂ ಸೂಚಿಸುತ್ತಲೇ ಇದೆ. ಟ್ರೇಲರ್​ನಲ್ಲಿ ಅದು ಖಚಿತವಾಗಿದೆ. ಒಬ್ಬ ಎಂಎಲ್‌ಎ ಅಭ್ಯರ್ಥಿಯನ್ನು ಕೊಲ್ಲುವ ಆದೇಶದಿಂದ ಆರಂಭವಾಗುವ ಟ್ರೇಲರ್​ನಲ್ಲಿ ಸಾಕಷ್ಟು ಎಲಿಮೆಂಟ್ಸ್ ಕಾಣಿಸಿದೆ. ಪ್ರೇಕ್ಷಕರನ್ನು ಅಪರಾಧ ಮತ್ತು ಸಂಘರ್ಷದ ಲೋಕಕ್ಕೆ ಕರೆದೊಯ್ಯುತ್ತದೆ.

‘ರಕ್ಕಿ’ ಸಿನಿಮಾದ ಟ್ರೇಲರ್:

Rakky Official 4K Trailer🔥| July 10 | Rakky Suresh | Venkat Bharadwaj | Suresh Saligrama| PRKAudio

‘ರಕ್ಕಿ’ ಸಿನಿಮಾ ತಾಂತ್ರಿಕವಾಗಿ ಉತ್ತಮವಾಗಿ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ ಸಾಕ್ಷಿಯಾಗಿದೆ. ಐಸಾಕ್ ಪ್ರಭಾಕರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಲೋಕಿ ತಾವಸ್ಯ ಅವರು ಸಂಗೀತ ನೀಡಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಹ-ನಿರ್ದೇಶಕರಾಗಿ ಲಾರೆನ್ಸ್ ಪ್ರೀತಂ ಅವರು ಕೆಲಸ ಮಾಡಿದ್ದಾರೆ. ಈ ಟ್ರೇಲರ್ ಮೂಲಕ ಹಲವು ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ.

ಇದನ್ನೂ ಓದಿ: ‘ರಗಡೋ ರಕ್ಕಿ’ ಹಾಡಿನಲ್ಲಿ ಹೀರೋ ಮಾಸ್ ಎಂಟ್ರಿ; ‘ಪಿಆರ್​ಕೆ ಆಡಿಯೋ’ ಮೂಲಕ ರಿಲೀಸ್

ಹೀರೋ ರಕ್ಕಿ ಸುರೇಶ್ ಅವರು ಡ್ಯಾನ್ಸ್, ಆ್ಯಕ್ಷನ್, ನಟನೆ ಹಾಗೂ ಆತ್ಮವಿಶ್ವಾಸದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರ ತಯಾರಿ ಮತ್ತು ಶ್ರಮದ ಫಲ ಟ್ರೇಲರ್​ನಲ್ಲಿ ಕಾಣಿಸುತ್ತಿದೆ. ಯುವಜನತೆ ಮತ್ತು ಕೌಟುಂಬಿಕ ಪ್ರೇಕ್ಷಕರನ್ನೂ ಕೂಡ ಈ ಸಿನಿಮಾ ಸೆಳೆದುಕೊಳ್ಳಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಸಿನಿಮಾದ ಕಥೆಯ ಸುಳಿವನ್ನು ಈ ಟ್ರೇಲರ್ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:53 pm, Tue, 30 June 26

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us