ರಕ್ಷಿತ್ ಶೆಟ್ಟಿ ಮುಂದಿದೆ ಹಲವು ಇಂಟರೆಸ್ಟಿಂಗ್ ಪ್ರಾಜೆಕ್ಟ್​ಗಳು; ಶಾರ್ಟ್​​ಫಾರ್ಮ್​​ನಲ್ಲಿ ಮಾಹಿತಿ ನೀಡಿದ ಹೀರೋ

Rakshit Shetty: ರಕ್ಷಿತ್ ಶೆಟ್ಟಿ ಅವರ ಈ ಘೋಷಣೆಯಿಂದ ಫ್ಯಾನ್ಸ್ ಖುಷಿಯಾಗಿದ್ದಾರೆ. ‘ಪುಣ್ಯಕೋಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರು ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ.

ರಕ್ಷಿತ್ ಶೆಟ್ಟಿ ಮುಂದಿದೆ ಹಲವು ಇಂಟರೆಸ್ಟಿಂಗ್ ಪ್ರಾಜೆಕ್ಟ್​ಗಳು; ಶಾರ್ಟ್​​ಫಾರ್ಮ್​​ನಲ್ಲಿ ಮಾಹಿತಿ ನೀಡಿದ ಹೀರೋ
ರಕ್ಷಿತ್ ಶೆಟ್ಟಿ

Updated on: Jan 30, 2023 | 11:49 AM

ರಕ್ಷಿತ್ ಶೆಟ್ಟಿ (Rakshit Shetty)  ಅವರು ಕನ್ನಡ ಚಿತ್ರರಂಗದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರು ನಟನೆ ಜತೆಗೆ ನಿರ್ದೇಶನದ ಮೂಲಕವೂ ಗುರುತಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಸದ್ಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಈ ವರ್ಷ ಸಿನಿಮಾ ತೆರೆಗೆ ಬರಲಿದೆ. ಅದಾದ ಬಳಿಕ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ 2’ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮೊದಲು ಮಾಡುವ ಪ್ರಾಜೆಕ್ಟ್​ಗಳ ಹೆಸರನ್ನು ಅವರು ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ನಿರ್ದೇಶನ, ನಿರ್ಮಾಣ ಹಾಗೂ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ಈ ಚಿತ್ರದ ಪೋಸ್ಟರ್​ಗಳು ಗಮನ ಸೆಳೆದಿವೆ. ಈ ಚಿತ್ರ ತೆರೆಕಂಡ ಬಳಿಕ ‘ರಿಚರ್ಡ್​ ಆಂಟನಿ’ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಇದನ್ನೂ ಓದಿ
ಮದುವೆ ಅಲ್ಲ, ಸಿನಿಮಾ ಪ್ರಮೋಷನ್ ಗಿಮಿಕ್​? ಪವಿತ್ರಾ​-ನರೇಶ್ ಕಿಸ್ಸಿಂಗ್ ವಿಡಿಯೋ ಬಗ್ಗೆ ಅನುಮಾನ
Ramya: ರಮ್ಯಾ ಬೇಕು ಅಂತ ಪ್ರತಿಭಟನೆ, ಗುಡಿ ಕಟ್ಟಿಸಿ ಪೂಜೆ; ‘ಹಾಸ್ಟೆಲ್​ ಹುಡುಗರು’ ಮಾಡಿದ್ದು ಒಂದೆರಡಲ್ಲ
ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ; ‘ಮಿಥ್ಯ’ ಚಿತ್ರಕ್ಕಿದೆ ಭಿನ್ನ ಕಥೆ

ಎಲ್ಲ ನಿರ್ದೇಶಕರಿಗೂ ಒಂದು ಡ್ರೀಮ್ ಪ್ರಾಜೆಕ್ಟ್ ಅನ್ನೋದು ಇರುತ್ತದೆ. ರಕ್ಷಿತ್ ಶೆಟ್ಟಿಗೂ ಒಂದು ಕನಸಿನ ಪ್ರಾಜೆಕ್ಟ್ ಇದೆ. ಅದುವೇ ‘ಪುಣ್ಯಕೋಟಿ’. ‘ರಿಚರ್ಡ್ ಆಂಟನಿ’ ಬಳಿಕ ರಕ್ಷಿತ್ ಶೆಟ್ಟಿ ಅವರು ‘ಪುಣ್ಯಕೋಟಿ’ ಮಾಡಲಿದ್ದಾರೆ. ಈ ಸಿನಿಮಾ ಎರಡು ಪಾರ್ಟ್​​ಗಳಲ್ಲಿ ಬರಲಿದೆ. ಇದಾದ ಬಳಿಕ ‘ಮಿಡ್​ನೈಟ್ ಟು ಮೋಕ್ಷ’ ಸಿನಿಮಾ ಮಾಡಲಿದ್ದಾರೆ. ‘ಕಿರಿಕ್ ಪಾರ್ಟಿ 2’ ಮಾಡುವ ಆಲೋಚನೆಯಲ್ಲಿ ರಕ್ಷಿತ್ ಶೆಟ್ಟಿ ಇಲ್ಲ. ಆದರೆ, ಇದಕ್ಕೆ ಅವರು ಬೇರೆಯದೇ ಪ್ಲ್ಯಾನ್ ಹೊಂದಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ರಕ್ಷಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬೆಂಬಲ; ‘ಪರಂವಃ’ ಮೂಲಕ ರಿಲೀಸ್

ರಕ್ಷಿತ್ ಶೆಟ್ಟಿ ಅವರ ಈ ಘೋಷಣೆಯಿಂದ ಫ್ಯಾನ್ಸ್ ಖುಷಿಯಾಗಿದ್ದಾರೆ. ‘ಪುಣ್ಯಕೋಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರು ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ. ‘777 ಚಾರ್ಲಿ’ ಯಶಸ್ಸಿನಿಂದ ಬಂದ ಹಣವನ್ನು ರಕ್ಷಿತ್ ಅವರು ‘ಪುಣ್ಯಕೋಟಿ’ಗೆ ಬಳಕೆ ಮಾಡಿಕೊಳ್ಳುವುದಾಗಿ ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us