ಮಧ್ಯರಾತ್ರಿ 12 ಗಂಟೆಗೆ ಹೊಸ ನ್ಯೂಸ್​ ಕೊಡ್ತಾರೆ ರಕ್ಷಿತ್​ ಶೆಟ್ಟಿ! ಅಭಿಮಾನಿಗಳ ನಿರೀಕ್ಷೆ ಏನು?

ನಟನೆ ಮಾತ್ರವಲ್ಲದೆ, ನಿರ್ದೇಶನ ಮತ್ತು ಸಿನಿಮಾ ನಿರ್ಮಾಣದಲ್ಲೂ ರಕ್ಷಿತ್​ ಶೆಟ್ಟಿ ತೊಡಗಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಗಬಹುದಾ?

ಮಧ್ಯರಾತ್ರಿ 12 ಗಂಟೆಗೆ ಹೊಸ ನ್ಯೂಸ್​ ಕೊಡ್ತಾರೆ ರಕ್ಷಿತ್​ ಶೆಟ್ಟಿ! ಅಭಿಮಾನಿಗಳ ನಿರೀಕ್ಷೆ ಏನು?
ರಕ್ಷಿತ್​ ಶೆಟ್ಟಿ
Edited By:

Updated on: Mar 11, 2021 | 5:35 PM

ನಟ ರಕ್ಷಿತ್​ ಶೆಟ್ಟಿ ಸದ್ಯ ‘777 ಚಾರ್ಲಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿದೆ. ಅದರ ಜೊತೆಗೆ ಮತ್ತೊಂದು ಹೊಸ ಸುದ್ದಿ ನೀಡಲು ರಕ್ಷಿತ್​ ಶೆಟ್ಟಿ ಸಜ್ಜಾಗಿದ್ದಾರೆ. ಅವರು ಕೊಡಲಿರುವ ಸುದ್ದಿ ಏನು ಅಂತ ತಿಳಿದುಕೊಳ್ಳಲು ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ.

‘ಈ ಶಿವರಾತ್ರಿ ಸಂದರ್ಭದಲ್ಲಿ ನಾವು ನಮ್ಮ ದಿಗಂತವನ್ನು ವಿಸ್ತರಿಸುತ್ತಿದ್ದೇವೆ. ಏನೋ ವಿಶೇಷವಾದದ್ದು ಕಾಯುತ್ತಿದೆ. ನಿರೀಕ್ಷಿಸಿ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ಅದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. ರಕ್ಷಿತ್​ ಶೆಟ್ಟಿ ಒಡೆತನದ ‘ಪರಂವಾ ಸ್ಟುಡಿಯೋಸ್​’ ಮೂಲಕ ರಾತ್ರಿ 12 ಗಂಟೆಗೆ ಹೊಸ ಸುದ್ದಿ ಹೊರಬೀಳಲಿದೆ.

ನಟನೆ ಮಾತ್ರವಲ್ಲದೆ, ನಿರ್ದೇಶನ ಮತ್ತು ಸಿನಿಮಾ ನಿರ್ಮಾಣದಲ್ಲೂ ರಕ್ಷಿತ್​ ಶೆಟ್ಟಿ ತೊಡಗಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಗಬಹುದಾ? ರಕ್ಷಿತ್​ ಅವರ ಹೊಸ ಚಿತ್ರ ಘೋಷಣೆ ಆಗಬಹುದಾ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ರಕ್ಷಿತ್​ ಮಾಡಿರುವ ಪೋಸ್ಟ್​ಗೆ ಕಾಮೆಂಟ್​ ಮಾಡುತ್ತಿರುವ ನೆಟ್ಟಿಗರು ಹಲವು ಬಗೆಯಲ್ಲಿ ಊಹೆ ಮಾಡುತ್ತಿದ್ದಾರೆ. ರಕ್ಷಿತ್​ ಅವರು ವೆಬ್​ ಸಿರೀಸ್​ ಶುರು ಮಾಡಬಹುದು, ‘777 ಚಾರ್ಲಿ’ ಸಿನಿಮಾ ಪ್ಯಾನ್​ ಇಂಡಿಯಾ ರಿಲೀಸ್​ ಆಗಬಹುದು ಎಂದೆಲ್ಲ ಜನರು ಕಾಮೆಂಟ್​ ಮಾಡುತ್ತಿದ್ದಾರೆ.

‘ಕಿರಿಕ್​ ಪಾರ್ಟಿ 2’ ಸಿನಿಮಾ ಅನೌನ್ಸ್​ ಮಾಡಿ ಎಂದು ಕೆಲವರು ಬೇಡಿಕೆ ಇಡುತ್ತಿದ್ದಾರೆ. ಆ ಚಿತ್ರದ ಬಗ್ಗೆ ಸುದ್ದಿ ಕೇಳಲು ಅಭಿಮಾನಿಗಳಿಗೆ ಕಾತರ ಇದೆ. ’777 ಚಾರ್ಲಿ’ ಚಿತ್ರವನ್ನು ತೆಲುಗಿಗೂ ಡಬ್​ ಮಾಡಿ ಎಂದು ಟಾಲಿವುಡ್​ ಸಿನಿಪ್ರಿಯರಿಂದ ಕೋರಿಕೆ ಬರುತ್ತಿದೆ. ಅಂತಿಮವಾಗಿ ರಕ್ಷಿತ್​ ಕೊಡಲಿರುವ ಬ್ರೇಕಿಂಗ್​ ನ್ಯೂಸ್​ ಏನೆಂಬುದು ರಾತ್ರಿ 12 ಗಂಟೆಗೆ ಗೊತ್ತಾಗಬೇಕಿದೆ.

ಇನ್ನು, ರಕ್ಷಿತ್​ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದಿಂದಲೂ ಶಿವರಾತ್ರಿ ಹಬ್ಬದ ಪ್ರಯುಕ್ತ ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ. ತುಂಬ ಸಿಂಪಲ್​ ಆದ ಗೆಟಪ್​ನಲ್ಲಿ ರಕ್ಷಿತ್​ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ನಾಯಕಿ ರುಕ್ಮಿಣಿ ವಸಂತ್​ ಅವರ ಲುಕ್​ ಬಹಿರಂಗಗೊಳಿಸಲಾಗಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಹೇಮಂತ್ ಎಂ. ರಾವ್ ನಿರ್ದೇಶನ ಮಾಡುತ್ತಿದ್ದಾರೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಂತರ ರಕ್ಷಿತ್​ ಮತ್ತು ಹೇಮಂತ್​ ಒಂದಾಗಿರುವುದು ವಿಶೇಷ.

ಇದನ್ನೂ ಓದಿ: 8 ವರ್ಷಗಳ ಹಿಂದೆ ಶುರುವಾದ ಲವ್​ಸ್ಟೋರಿ ಬಗ್ಗೆ ರಕ್ಷಿತ್​ ಶೆಟ್ಟಿ ಮನದಾಳದ ಮಾತು!

ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್​ ಶೆಟ್ಟಿ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us