‘ರಕ್ತಾಕ್ಷ’ ಮಾಸ್ ಟೀಸರ್ ರಿಲೀಸ್: ಯುವ ಪ್ರತಿಭೆಗಳ ಚೊಚ್ಚಿಲ ಪ್ರಯತ್ನ

|

Updated on: Jul 25, 2023 | 10:47 PM

'ರಕ್ತಾಕ್ಷ' ಮೂಲಕ ಪ್ರೇಕ್ಷಕರ ಆಶೀರ್ವಾದ ಬಯಸಿ ಬರುತ್ತಿದೆ ಮತ್ತೊಂದು ಹೊಸಬರ ತಂಡ. ಸಿನಿಮಾದ ಟೀಸರ್ ಬಿಡುಗಡೆ.

ರಕ್ತಾಕ್ಷ ಮಾಸ್ ಟೀಸರ್ ರಿಲೀಸ್: ಯುವ ಪ್ರತಿಭೆಗಳ ಚೊಚ್ಚಿಲ ಪ್ರಯತ್ನ
ರಕ್ತಾಕ್ಷ
Follow us on

ಹೊಸಬರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru Bekagiddare) ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಮೂಲಕ ಕನ್ನಡದಲ್ಲಿ ಮತ್ತೊಂದು ಹೊಸಬರ ಸಿನಿಮಾಕ್ಕೆ ಯಶಸ್ಸು ಲಭಿಸಿದೆ. ಈ ಕೆಲ ತಿಂಗಳುಗಳಲ್ಲಿ ‘ಕಂಬ್ಳಿ ಹುಳ’, ‘ಡೇರ್ ಡೆವಿಲ್ ಮುಸ್ತಫಾ‘ (Daredevil Mustafa) ಅಂಥಹಾ ಕೆಲವು ಹೊಸಬರ ತಂಡದ ಪ್ರಯತ್ನವನ್ನು ಕನ್ನಡದ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಹಲವು ಹೊಸ ತಂಡಗಳು ತಮ್ಮ ಕತೆಗಳನ್ನು ಹೇಳಲು ಮುಂದೆ ಬಂದಿವೆ. ಇದೀಗ ಅಂಥಹುದೇ ಒಂದು ಹೊಸಬರ ತಂಡ ಸಿನಿಮಾದ ಟೀಸರ್​ ನೊಂದಿಗೆ ಜನರ ಮುಂದೆ ಬಂದಿದೆ.

ಹೊಸಬರ ತಂಡ ಸೇರಿಕೊಂಡು ‘ರಕ್ತಾಕ್ಷ’ ಹೆಸರಿನ ಸಿನಿಮಾ ಮಾಡಿದ್ದು ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆ ಆಗಿದೆ. ಹುರಿಯಾದ ಮೈಕಟ್ಟು ಹೊಂದಿರುವ ರೋಹಿತ್ ಪಂಚ್ ಡೈಲಾಗ್ ಹೊಡೆಯುತ್ತ, ತಮ್ಮ ಹುರಿಗಟ್ಟಿದ ದೇಹ ತೋರಿಸುತ್ತಾ ಭರ್ಜರಿಯಾಗಿಯೇ ಎಂಟ್ರಿ ನೀಡಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಬಾಲಿವುಡ್ ನಾಯಕನಂತೆ ಕಾಣುತ್ತಿರುವ ರೋಹಿತ್, ನಟ ಪ್ರಮೋದ್ ಶೆಟ್ಟಿ ಎದುರು ಅಬ್ಬರಿಸಿದ್ದಾರೆ‌. ಮಾಸ್ ಹೀರೋ ಆಗುವ ಕನಸು ಹೊತ್ತು ಮೊದಲ ಸಿನಿಮಾದಲ್ಲಿಯೇ ಮಾಸ್ ಬಿಲ್ಡಪ್, ಪಂಚ್ ಡೈಲಾಗ್​ಗಳನ್ನು ಹೊಡೆದಿದ್ದಾರೆ. ಟೀಸರ್ ತುಂಬ ಅವರೇ ತುಂಬಿದ್ದಾರೆ.

ಇದನ್ನೂ ಓದಿ:ನಿಮ್ಮೆಲ್ಲರ ಆರ್ಶೀರ್ವಾದ ಶೀಘ್ರದಲ್ಲಿಯೇ ಹೊಸಬರ ಸಿನಿಮಾ ಆಗಲಿದೆ ಬಿಡುಗಡೆ

ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್​ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ವಸಿಷ್ಠ ಸಿಂಹ ಹಾಡಿದ್ದು ಹಾಡು ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಧಕ್ಕಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ