‘ರಾವಣ ತಾಂಡವ’ ಹತ್ತು ವರ್ಷಗಳ ಬಳಿಕ ತೆರೆ ಮೇಲೆ ಯಶ್ ಡ್ಯಾನ್ಸ್

‘ಡ್ರಾಮಾ’, ‘ಕಿರಾತಕ’, ‘ಗೂಗ್ಲಿ’, ‘ಸಂತು ಸ್ಟ್ರೈಟ್ ಫಾರ್ವರ್ಡ್’ ಇನ್ನೂ ಹಲವು ಸಿನಿಮಾಗಳಲ್ಲಿ ಯಶ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ‘ಕೆಜಿಎಫ್’ ಬಳಿಕ ಯಶ್​ ಅವರು ತೆರೆಯ ಮೇಲೆ ಡ್ಯಾನ್ಸ್ ಮಾಡಿದ್ದೇ ಇಲ್ಲ. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಯಶ್ ಮತ್ತೆ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಯಶ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು, ಅದರ ವಿಡಿಯೋ ಇಲ್ಲಿದೆ ನೋಡಿ....

‘ರಾವಣ ತಾಂಡವ’ ಹತ್ತು ವರ್ಷಗಳ ಬಳಿಕ ತೆರೆ ಮೇಲೆ ಯಶ್ ಡ್ಯಾನ್ಸ್
Yash Tandav

Updated on: Oct 21, 2026 | 7:36 AM

ಮುಖ್ಯಾಂಶಗಳು

  • ರಾಮಾಯಣ ಸಿನಿಮಾದ ಹೊಸ ಹಾಡು ರಿಲೀಸ್
  • ಅದ್ಭುತವಾಗಿ ರಾವಣ ತಾಂಡವ ಮಾಡಿರುವ ಯಶ್
  • 10 ವರ್ಷಗಳ ಬಳಿಕ ಡ್ಯಾನ್ಸ್ ಮಾಡಿರುವ ಯಶ್

ಯಶ್ ಅದ್ಭುತ ನಟ ಅದರಲ್ಲಿ ಅನುಮಾನವಿಲ್ಲ. ಅದರ ಜೊತೆಗೆ ಅವರು ಒಳ್ಳೆ ಡ್ಯಾನ್ಸರ್ ಸಹ ಹೌದು. ‘ಕೆಜಿಎಫ್’ ಸಿನಿಮಾಕ್ಕೆ ಮುಂಚೆ ಯಶ್ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಡ್ಯಾನ್ಸ್ ನಂಬರ್ ಇದ್ದೇ ಇರುತ್ತಿತ್ತು. ‘ಡ್ರಾಮಾ’, ‘ಕಿರಾತಕ’, ‘ಗೂಗ್ಲಿ’, ‘ಸಂತು ಸ್ಟ್ರೈಟ್ ಫಾರ್ವರ್ಡ್’ ಇನ್ನೂ ಹಲವು ಸಿನಿಮಾಗಳಲ್ಲಿ ಯಶ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು. ಆದರೆ ‘ಕೆಜಿಎಫ್’ ಬಳಿಕ ಯಶ್​ ಅವರು ತೆರೆಯ ಮೇಲೆ ಡ್ಯಾನ್ಸ್ ಮಾಡಿದ್ದೇ ಇಲ್ಲ. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಯಶ್ ಮತ್ತೆ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ಯಶ್ ‘ರಾವಣ ತಾಂಡವ’ ಮಾಡಿದ್ದಾರೆ. ಶಿವನ ಪರಮ ಭಕ್ತ ರಾವಣನ ಪಾತ್ರದಲ್ಲಿ ನಟನೆ ಮಾಡಿರುವ ಯಶ್, ತಾಂಡವ ನೃತ್ಯ ಮಾಡಿದ್ದು ನೃತ್ಯಕಕೆ ಭರ್ಜರಿ ಎನರ್ಜಿಯನ್ನು ತುಂಬಿದ್ದಾರೆ. ಹಿನ್ನೆಲೆಯಲ್ಲಿ ಶಿವಸ್ತ್ರೋತ್ರಗಳ ಜೊತೆಗೆ ಹಿಂದಿಯ ಜನಪ್ರಿಯ ಕವಿ ಕುಮಾರ್ ವಿಶ್ವಾಸ್ ಬರೆದಿರುವ ಸಾಲುಗಳು, ಎಆರ್ ರೆಹಮಾನ್ ಅವರ ಸಂಗೀತವೂ ಬೆರೆತು ಹಾಡು ಮತ್ತು ಯಶ್ ಅವರ ತಾಂಡವ ನೃತ್ಯ ಅದ್ಭುತವಾಗಿ ಮೂಡಿ ಬಂದಿದೆ.

ಯಶ್ ಅವರ ತಾಂಡವ ನೃತ್ಯದ ಸಣ್ಣ ವಿಡಿಯೋ ತುಣುಕನ್ನು ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ತಾಂಡವ ನೃತ್ಯವು ಅದ್ಭುತವಾಗಿದೆ. ಹಾಕಿರುವ ಸೆಟ್ಟು, ಹಿನ್ನೆಲೆ ಸಂಗೀತ ಎಲ್ಲಕ್ಕಿಂತಲೂ ಮುಖ್ಯವಾಗಿ ಯಶ್ ಅವರ ಎನರ್ಜಿ ಅದ್ಭುತವಾಗಿದೆ. ಟಿ-ಸೀರೀಸ್, ಟಿ ಸೀರೀಸ್ ಭಕ್ತಿ ಸಾಗರ್ ಮತ್ತು ‘ವರ್ಲ್ ಆಫ್ ರಾಮಾಯಣ’ ಯೂಟ್ಯೂಬ್ ಚಾನೆಲ್ಲಿನಲ್ಲಿ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಕೆಲವೇ ಗಂಟೆಗಳಲ್ಲಿ 55 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಣೆ ಮಾಡಿದ್ದಾರೆ.

Ramayana: Ravana Tandav (Song) | Namit M, Nitesh T | Ranbir, Yash | AR Rahman, Vishal D, Kumar V

‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ಹೆಚ್ಚು ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟನೆ ಮಾಡಿದ್ದಾರೆ. ಸನ್ನಿ ಡಿಯೋಲ್, ರವಿ ದುಬೆ, ರಕುಲ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಇನ್ನೂ ಹಲವು ಅದ್ಭುತ ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ. ಸಿನಿಮಾ ಅನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us