AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಪೂಜೆಯಲ್ಲಿ ಐಟಂ ಸಾಂಗು: ನಟಿ ರಮ್ಯಾ ಆಕ್ರೋಶ

‘ಫನ್ ವರ್ಲ್ಡ್​​’ನಲ್ಲಿ ತಡರಾತ್ರಿಯಿಂದ ಮುಂಜಾವಿನ ವರೆಗೂ ಪಟಾಕಿಗಳನ್ನು ಹೊಡೆಯಲಾಗಿದೆ ಜೋರಾಗಿ ಸಂಗೀತ ಸಹ ಹಾಕಲಾಗಿತ್ತು ಎಂದು ನಟಿ ರಮ್ಯಾ ಆರೋಪಿಸಿದ್ದರು. ಆದರೆ ಫನ್ ವರ್ಲ್ಡ್​​ನವರು ಅದು ತಾವು ಮಾಡಿದ್ದಲ್ಲ, ಫನ್ ವರ್ಲ್ಡ್ ಬಳಿಯ ಶಾಲೆಯ ಬಳಿ ದಸರಾ ಆಚರಣೆ ಇತ್ತು ಅಲ್ಲಿನವರು ಮಾಡಿರಬೇಕು ಎಂದಿದ್ದರು. ಇದೀಗ ರಮ್ಯಾ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ದಸರಾ ಸಂಭ್ರಮದ ಹೆಸರಲ್ಲಿ ನಿಯಮ ಮುರಿಯುವವರ ಬಗ್ಗೆ ಸಿಟ್ಟು ಹೊರಹಾಕಿದ್ದಾರೆ.

ದಸರಾ ಪೂಜೆಯಲ್ಲಿ ಐಟಂ ಸಾಂಗು: ನಟಿ ರಮ್ಯಾ ಆಕ್ರೋಶ
Ramya
ಮಂಜುನಾಥ ಸಿ.
|

Updated on:Oct 22, 2026 | 6:42 PM

Share

ಮುಖ್ಯಾಂಶಗಳು

  • ತಡರಾತ್ರಿ ಪಟಾಕಿ, ಧ್ವನಿವರ್ಧಕ ಬಳಕೆ, ರಮ್ಯಾ ಆಕ್ರೋಶ
  • ಫನ್ ವರ್ಲ್ಡ್ ಮೇಲೆ ಆರೋಪ ಮಾಡಿದ್ದ ನಟಿ ರಮ್ಯಾ
  • ಆದರೆ ಈಗ ತಮ್ಮ ಹಿಂದಿನ ಫೊಸ್ಟ್ ಬಗ್ಗೆ ಸ್ಪಷ್ಟನೆ

ಮಧ್ಯ ರಾತ್ರಿ ಪಟಾಕಿ ಸಿಡಿಸುವುದು, ಅಬ್ಬರದ ಸಂಗೀತ ಹಾಕುವುದರ ವಿರುದ್ಧ ನಟಿ ರಮ್ಯಾ ದನಿ ಎತ್ತಿದ್ದಾರೆ. ನಿನ್ನೆ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದ ನಟಿ ರಮ್ಯಾ, ‘ಫನ್ ವರ್ಲ್ಡ್​​’ನಲ್ಲಿ ತಡರಾತ್ರಿಯಿಂದ ಮುಂಜಾವಿನ ವರೆಗೂ ಪಟಾಕಿಗಳನ್ನು ಹೊಡೆಯಲಾಗಿದೆ ಜೋರಾಗಿ ಸಂಗೀತ ಸಹ ಹಾಕಲಾಗಿತ್ತು ಎಂದು ಆರೋಪಿಸಿದ್ದರು. ಆದರೆ ಫನ್ ವರ್ಲ್ಡ್​​ನವರು ಅದು ತಾವು ಮಾಡಿದ್ದಲ್ಲ, ಫನ್ ವರ್ಲ್ಡ್ ಬಳಿಯ ಶಾಲೆಯ ಬಳಿ ದಸರಾ ಆಚರಣೆ ಇತ್ತು ಅಲ್ಲಿನವರು ಮಾಡಿರಬೇಕು ಎಂದಿದ್ದರು. ಇದೀಗ ರಮ್ಯಾ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ದಸರಾ ಸಂಭ್ರಮದ ಹೆಸರಲ್ಲಿ ನಿಯಮ ಮುರಿಯುವವರ ಬಗ್ಗೆ ಸಿಟ್ಟು ಹೊರಹಾಕಿದ್ದಾರೆ.

‘ಬೆಳಗಿನ ಜಾವ 5:45 ನಿಮಿಷದವರೆಗೆ ಪಟಾಕಿ ಹೊಡೆಯುತ್ತಾ, ಜೋರಾಗಿ ಹಾಡುಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡಿದ್ದು ಫನ್ ವರ್ಲ್ಡ್​​ನವರು ಅಲ್ಲ. ಬದಲಿಗೆ ಜೆಸಿ ನಗರದ ರಾಧಾಕೃಷ್ಣ ಚಿತ್ರಮಂದಿರದ ಬಳಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಯಾರೋ ಆ ಕೃತ್ಯ ಮಾಡಿದ್ದಾರೆ. ಯಾರಿಗೇ ಆಗಲಿ ನಿಯಮ ಒಂದೇ. ಯಾರೂ ಕೂಡ ಕಾನೂನಿಗಿಂತ ಮೇಲಾದವರು ಇಲ್ಲ. ಯಾರಿಗಾದರೂ ಬೆಳಗಿನ ಜಾವ ಆರು ಗಂಟೆ ವರೆಗೆ ವಿಶೇಷ ಅನುಮತಿ ಸಿಕ್ಕಿದೆ ಎಂದರೆ ಅದು ಎಲ್ಲರಿಗೂ ಅನ್ವಯ ಆಗಬೇಕು. ಎಲ್ಲ ಹಬ್ಬಗಳಿಗೂ ಅನ್ವಯ ಆಗಬೇಕು, ಹೊಸ ವರ್ಷಕ್ಕೂ ಸಹ’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ:ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾ ಟ್ವೀಟ್​ಗೆ ಫನ್ ವರ್ಲ್ಡ್ ಮ್ಯಾನೇಜರ್ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, ರಾತ್ರಿ 10 ಗಂಟೆಯ ಬಳಿಕ ಪಟಾಕಿ ಹೊಡೆಯುವಂತಿಲ್ಲ ಮತ್ತು ಮಧ್ಯರಾತ್ರಿ ಬಳಿಕ ಧ್ವನಿ ವರ್ದಕ ಬಳಸುವಂತಿಲ್ಲ ಎಂದು. ಅಲ್ಲದೆ, ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿ ದೇವಿಯ ಮುಂದೆ ‘ಊ ಅಂಟಾವ, ಊಹೂಂ ಅಂಟಾವ’, ‘ಮಸ್ತ್ ಮಸ್ತ್ ಹುಡ್ಗಿ ಬಂದ್ಳು’ ಹಾಡು ಹಾಕುವುದು ಭಕ್ತಿಯಲ್ಲ’ ಎಂದಿದ್ದಾರೆ ನಟಿ ರಮ್ಯಾ.

ಈ ಮೊದಲು ರಮ್ಯಾ ಮಾಡಿದ್ದ ಪೋಸ್ಟ್​​ನಲ್ಲಿ ಫನ್​ ವರ್ಲ್ಡ್​​ನಲ್ಲಿ ಪಟಾಕಿ ಹೊಡೆದು ಅಬ್ಬರದ ಸಂಗೀತ ಹಾಕಲಾಗಿದೆ ಎಂದು ಆರೋಪಿಸಿದ್ದರು. ಪಟಾಕಿ ಹೊಡೆಯುತ್ತಿರುವ ಹಾಗೂ ಹಾಡುಗಳನ್ನು ಹಾಕಿರುವ ವಿಡಿಯೋಗಳನ್ನು ಸಹ ರಮ್ಯಾ ಹಂಚಿಕೊಂಡಿದ್ದರು. ನಿಯಮ ಮುರಿದಿರುವ ಫನ್ ವರ್ಲ್ಡ್ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಹ ಅವರು ಆಗ್ರಹಿಸಿದ್ದರು. ಆದರೆ ಮಧ್ಯಾಹ್ನದ ವೇಳೆ ಫನ್ ವರ್ಲ್ಡ್​​ನ ಸಿಬ್ಬಂದಿ ಈ ಬಗ್ಗೆ ಸ್ಪಷ್ಟನೆ ನೀಡಿ, ನಾವು 10 ಗಂಟೆಗೆ ತಮ್ಮ ಚಟುವಟಿಕೆಯನ್ನು ಬಂದ್ ಮಾಡುತ್ತೇವೆ. ನಾವು ಯಾವುದೇ ಪಟಾಕಿ ಹೊಡೆಯುವುದಾಗಲಿ, ಧ್ವನಿ ವರ್ದಕ ಬಳಸಿದ್ದಾಗಲಿ ಮಾಡಿಲ್ಲ ಎಂದಿದ್ದರು. ಆ ಬಳಿಕ ರಮ್ಯಾ ಇದೀಗ ತಮ್ಮ ಹಿಂದಿನ ಪೋಸ್ಟ್​​ಗೆ ಸ್ಪಷ್ಟನೆಯನ್ನು ನೀಡಿ, ಕೆಲ ಹೊಸ ಪ್ರಶ್ನೆಗಳನ್ನು ಸಹ ಎತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Thu, 22 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ