ಕುಂದಾಪುರಕ್ಕೆ ಬಂದು ರಿಷಬ್ ಬಳಿ ರಾಜ್​ಕುಮಾರ್ ಸಿನಿಮಾ ಡೈಲಾಗ್​ ಕಲಿತ ರಾಣಾ ದಗ್ಗುಬಾಟಿ; ಹೇಗಿತ್ತು ನೋಡಿ ಮೊದಲ ಕ್ಲಾಸ್

|

Updated on: Dec 20, 2024 | 12:51 PM

ರಿಷಬ್ ಶೆಟ್ಟಿ ಅವರು ಟಾಲಿವುಡ್ ನಟ ರಾಣಾ ದಗ್ಗುಬಾಟಿ ಅವರಿಗೆ ಕನ್ನಡ ಕಲಿಸಿದ್ದಾರೆ. ರಾಣಾ ಅವರು ಕುಂದಾಪುರದಲ್ಲಿ ತಮ್ಮ ಶೋ ಚಿತ್ರೀಕರಣ ಮಾಡಿದ್ದಾರೆ. ರಾಜಕುಮಾರ್ ಅವರ ಡೈಲಾಗ್ ಕಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರಿಷಬ್ ಮತ್ತು ರಾಣಾ ಅವರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ.

ಕುಂದಾಪುರಕ್ಕೆ ಬಂದು ರಿಷಬ್ ಬಳಿ ರಾಜ್​ಕುಮಾರ್ ಸಿನಿಮಾ ಡೈಲಾಗ್​ ಕಲಿತ ರಾಣಾ ದಗ್ಗುಬಾಟಿ; ಹೇಗಿತ್ತು ನೋಡಿ ಮೊದಲ ಕ್ಲಾಸ್
ರಾಣಾ
Follow us on

ರಿಷಬ್ ಶೆಟ್ಟಿ ಅವರು ಪರಭಾಷೆಗೆ ತೆರಳಿ ಸಿನಿಮಾ ಮಾಡುತ್ತಿದ್ದಾರೆ ನಿಜ. ಹಾಗಂದ ಮಾತ್ರಕ್ಕೆ ಅವರಿಗೆ ಕನ್ನಡದ ಬಗ್ಗೆ ಇರುವ ಪ್ರೇಮ ಕಡಿಮೆ ಆಗಿಲ್ಲ. ಅವರು ಎಲ್ಲ ಕಡೆಗಳಲ್ಲಿ ಕನ್ನಡದ ಕಂಪನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಈಗ ಟಾಲಿವುಡ್​ನ ಖ್ಯಾತ ನಟ ರಾಣಾ ದಗ್ಗುಬಾಟಿ ಅವರಿಗೆ ರಿಷಬ್ ಶೆಟ್ಟಿ ಅವರು ಕನ್ನಡ ಕಲಿಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಸ್ವತಃ ರಾಣಾ ಅವರೇ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಅಮೇಜಾನ್ ಪ್ರೈಮ್ ವಿಡಿಯೋಗಾಗಿ ರಾಣಾ ದಗ್ಗುಬಾಟಿ ಅವರು ಶೋ ಮಾಡುತ್ತಿದ್ದಾರೆ. ‘ದಿ ರಾಣಾ ದಗ್ಗುಬಾಟಿ ಶೋ’ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ಇಷ್ಟು ದಿನ ಸ್ಟುಡಿಯೋದಲ್ಲಿ ಕುಳಿತು ಈ ಶೋನ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರಾಣಾ ಅವರು ತಮ್ಮ ತಂಡವನ್ನು ಕರೆದುಕೊಂಡು ಕುಂದಾಪುರಕ್ಕೆ ಬಂದಿದ್ದಾರೆ. ಇಲ್ಲಿ ಶೋನ ಶೂಟ್ ಮಾಡಲಾಗಿದೆ. ರಾಣಾ ಜೊತೆ ನೇಹಾ ಶೆಟ್ಟಿ ಕೂಡ ಇದ್ದರು.

‘ಸಿನಿಮಾ ಕೆಲಸ ಮಾಡಬೇಕು ಎಂದರೆ ನಗರಕ್ಕೆ ಬರಬೇಕು. ಆದರೆ, ಇದನ್ನು ಸುಳ್ಳು ಮಾಡಿದವರು ರಿಷಬ್’ ಎಂದಿದ್ದಾರೆ ರಾಣಾ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಸಂಪೂರ್ಣ ಶೂಟಿಂಗ್ ಕುಂದಾಪುರದ ಸುತ್ತಮುತ್ತ ನಡೆಯುತ್ತಿದೆ. ಈ ಕಾರಣದಿಂದಲೇ ರಿಷಬ್ ಅವರು ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಇದು ರಾಣಾಗೆ ಖುಷಿ ನೀಡಿದೆ.

ರಾಣಾ ಅವರು ಅಲ್ಲಿನ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿತಿದ್ದಾರೆ. ರಾಜ್​ಕುಮಾರ್ ಹೇಳಿದ್ದ ‘ಹೇಳು ಪಾರ್ಥ..’ ಡೈಲಾಗ್​ನ ರಿಷಬ್ ಅವರು ರಾಣಾಗೆ ಹೇಳಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಿಷಬ್ ಶೆಟ್ಟಿಯ ಭೇಟಿ ಮಾಡಲು ಕರ್ನಾಟಕಕ್ಕೆ ಬಂದ ರಾಣಾ ದಗ್ಗುಬಾಟಿ

ರಾಣಾ ಅವರು ಎಲ್ಲಾ ಭಾಷೆಗಳನ್ನು ಗೌರವಿಸುತ್ತಾರೆ. ಭಾಷಾ ಇತಿಮಿತಿ ಇರಬಾರದು ಎಂದು ನಂಬಿದವರು ಅವರು. ಈ ಕಾರಣದಿಂದಲೇ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಈಗ ಅವರು ಕನ್ನಡ ಕಲಿಯುವ ಪ್ರಯತ್ನ ಮಾಡುವ ಮೂಲಕ, ಕನ್ನಡದ ಡೈಲಾಗ್ ಹೇಳುವ ಮೂಲಕ ಈ ಭಾಷೆಯ ಮೇಲೆ ಇರುವ ಗೌರವ ಹಾಗೂ ಪ್ರೀತಿಯನ್ನು ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:50 pm, Fri, 20 December 24