Rashmika Mandanna: ತನ್ನದೇ ಮ್ಯಾನೇಜರ್​ನಿಂದ ಮೋಸಕ್ಕೊಳಗಾದ ರಶ್ಮಿಕಾ ಮಂದಣ್ಣ? 80 ಲಕ್ಷ ರೂಪಾಯಿ ನಷ್ಟ

ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳಲು ಮ್ಯಾನೇಜರ್ ಒಬ್ಬರಿದ್ದರು. ಆರಂಭದ ದಿನಗಳಿಂದಲೂ ಆ ವ್ಯಕ್ತಿ ರಶ್ಮಿಕಾ ಜೊತೆಗೇ ಇದ್ದರು. ಆ ವ್ಯಕ್ತಿ ರಶ್ಮಿಕಾಗೆ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರಂತೆ.

Rashmika Mandanna: ತನ್ನದೇ ಮ್ಯಾನೇಜರ್​ನಿಂದ ಮೋಸಕ್ಕೊಳಗಾದ ರಶ್ಮಿಕಾ ಮಂದಣ್ಣ? 80 ಲಕ್ಷ ರೂಪಾಯಿ ನಷ್ಟ
ರಶ್ಮಿಕಾ

Updated on: Jun 19, 2023 | 10:51 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕಡಿಮೆ ಸಮಯದಲ್ಲಿ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ರಶ್ಮಿಕಾ ಮಂದಣ್ಣ ಅವರು ಇಷ್ಟು ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವುದರಿಂದ ಸಾಕಷ್ಟು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಈಗ ರಶ್ಮಿಕಾ ಮಂದಣ್ಣ ಬಗ್ಗೆ ಹೊಸದೊಂದು ಸುದ್ದಿ ಹರಿದಾಡಿದೆ. ತನ್ನದೇ ಮ್ಯಾನೇಜರ್​ನಿಂದ ರಶ್ಮಿಕಾ ಮೋಸಕ್ಕೆ ಒಳಗಾಗಿದ್ದಾರೆ ಎಂದು ಪಿಂಕ್​ವಿಲ್ಲಾ ವೆಬ್ ಸೈಟ್ ವರದಿ ಮಾಡಿದೆ. ಆದರೆ, ನಟಿಯ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ವಿಚಾರದಲ್ಲಿ ರಶ್ಮಿಕಾ ಸ್ಪಷ್ಟನೆ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳಲು ಮ್ಯಾನೇಜರ್ ಒಬ್ಬರಿದ್ದರು. ಆರಂಭದ ದಿನಗಳಿಂದಲೂ ಆ ವ್ಯಕ್ತಿ ರಶ್ಮಿಕಾ ಜೊತೆಗೇ ಇದ್ದರು. ಆ ವ್ಯಕ್ತಿ ರಶ್ಮಿಕಾಗೆ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾರಂತೆ. ಇದನ್ನು ದೊಡ್ಡ ರಂಪಾಟ ಮಾಡುವ ಗೋಜಿಗೆ ರಶ್ಮಿಕಾ ಮಂದಣ್ಣ ಹೋಗಿಲ್ಲ. ಬದಲಿಗೆ ಅವರು ಮ್ಯಾನೇಜರ್​ನ ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಇವೆಲ್ಲ ಅಂತೆ ಕಂತೆ. ಆ ಮ್ಯಾನೇಜರ್ ಯಾರು? ಅವರ ಹೆಸರು ಏನು ಎಂಬಿತ್ಯಾದಿ ವಿಚಾರಗಳು ಇನ್ನಷ್ಟೇ ಹೊರಬೀಳಬೇಕಿದೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳು ಇವೆ. ‘ಪುಷ್ಪ 2’ ಚಿತ್ರದ ಶೂಟಿಂಗ್​ನಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಸದ್ಯ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈ ವರ್ಷವೇ ಸಿನಿಮಾ ರಿಲೀಸ್ ಆಗುತ್ತದೆಯೇ ಅಥವಾ ವಿಳಂಬ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ನಂಬಿದವರಿಂದಲೇ ಮೋಸ, ಲಕ್ಷಾಂತರ ಹಣ ಕಳೆದುಕೊಂಡ ನಟಿ

ಇಷ್ಟೇ ಅಲ್ಲದೆ, ‘ರೇನ್​ಬೋ’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ವಿಕ್ಕಿ ಕೌಶಲ್ ಹಾಗೂ ಶಾಹಿದ್ ಕಪೂರ್ ಜೊತೆ ತಲಾ ಒಂದು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ ಎಂದು ಕೂಡ ವರದಿ ಆಗಿದೆ. ನಿತಿನ್ ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಈ ಚಿತ್ರಕ್ಕೆ ಶೀರ್ಷಿಕೆ ಫೈನಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ