Rashmika Mandanna: ರಕ್ಷಿತ್​ ಶೆಟ್ಟಿ ಬರ್ತ್​ಡೇ ವಿಶ್​​ಗೆ ಪ್ರೀತಿಯಿಂದ ಉತ್ತರಿಸಿದ ರಶ್ಮಿಕಾ ಮಂದಣ್ಣ!

ಚಿತ್ರದ ಕೆಲವು ಡೈಲಾಗ್​ಗಳನ್ನು ಹೇಳುವಂತೆ ರಶ್ಮಿಕಾಗೆ ಸೂಚಿಸಲಾಗಿತ್ತು. ಈ ವಿಡಿಯೋವನ್ನು ರಕ್ಷಿತ್​ ಹಂಚಿಕೊಂಡು ಬರ್ತ್​ ಡೇ ವಿಶ್​ ತಿಳಿಸಿದ್ದರು.

Rashmika Mandanna: ರಕ್ಷಿತ್​ ಶೆಟ್ಟಿ ಬರ್ತ್​ಡೇ ವಿಶ್​​ಗೆ ಪ್ರೀತಿಯಿಂದ ಉತ್ತರಿಸಿದ ರಶ್ಮಿಕಾ ಮಂದಣ್ಣ!
ರಕ್ಷಿತ್​-ರಶ್ಮಿಕಾ

Updated on: Apr 05, 2021 | 6:25 PM

ನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಇದ್ದ ಪ್ರೀತಿ ಸೇತುವೆ ಮುರಿದು ಬಿದ್ದಿತ್ತು. ಈ ಎಲ್ಲಾ ಕಹಿ ಘಟನೆಗಳನ್ನು ರಕ್ಷಿತ್ ಮರೆತಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷಗಳಿಂದ ರಶ್ಮಿಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಇಂದು ರಶ್ಮಿಕಾ ಜನ್ಮದಿನ. ಇದಲ್ಲದೆ ವಿಶೇಷ ಟ್ವೀಟ್​ ಮೂಲಕ ಶುಭ ಹಾರೈಸಿದ್ದರು. ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಬಣ್ಣದ ಲೋಕದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. 2016ರಲ್ಲಿ ಬಂದ ಆ ಚಿತ್ರವನ್ನು ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿದ್ದರು. ರಶ್ಮಿಕಾಗೆ ಕಿರಿಕ್​ ಪಾರ್ಟಿಯಲ್ಲಿ ರಕ್ಷಿತ್​ ಅವಕಾಶ ನೀಡಿದ್ದರು. ರಶ್ಮಿಕಾ ಬದುಕು ಬದಲಾಗಲು ಇದು ಪ್ರಮುಖ ಕಾರಣವಾಗಿತ್ತು. ಕಿರಿಕ್​ ಪಾರ್ಟಿ ಚಿತ್ರದ ಹೀರೋಯಿನ್​ ಪಾತ್ರಕ್ಕಾಗಿ ಹಲವಾರು ಹುಡುಗಿಯರ ಆಡಿಷನ್ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗವಹಿಸಿದ್ದರು. ಚಿತ್ರದ ಕೆಲವು ಡೈಲಾಗ್​ಗಳನ್ನು ಹೇಳುವಂತೆ ರಶ್ಮಿಕಾಗೆ ಸೂಚಿಸಲಾಗಿತ್ತು. ಈ ವಿಡಿಯೋವನ್ನು ರಕ್ಷಿತ್​ ಹಂಚಿಕೊಂಡು ಬರ್ತ್​ ಡೇ ವಿಶ್​ ತಿಳಿಸಿದ್ದರು.

‘ಕಿರಿಕ್​ ಪಾರ್ಟಿ ಸಿನಿಮಾದ ಆಡಿಷನ್​ನಿಂದ ಈ ಸುಂದರ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಅಲ್ಲಿಂದ ನೀನು ತುಂಬ ದೂರ ಪ್ರಯಾಣ ಮಾಡಿದ್ದೀಯ. ನಿಜವಾದ ವಾರಿಯರ್​ ರೀತಿಯಲ್ಲಿ ನಿನ್ನ ಕನಸುಗಳ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ ಹುಡುಗಿ. ಜನ್ಮದಿನದ ಶುಭಾಶಯಗಳು. ನಿನಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದರು.

ಇದಕ್ಕೆ ಈಗ ರಶ್ಮಿಕಾ ಉತ್ತರಿಸಿದ್ದಾರೆ. ನನಗೆ ಇದು ಇನ್ನೂ ಸ್ಪಷ್ಟವಾಗಿ ನೆನಪಿದೆ. ಧನ್ಯವಾದಗಳು ರಕ್ಷಿತ್​ ಶೆಟ್ಟಿ. ಮೀನ್ಸ್​ ಅ ಲಾಟ್​ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us