ದಕ್ಷಿಣ ಭಾರತ-ಬಾಲಿವುಡ್ ಎಂದು ಬೇರೆ ಮಾಡುವವರಿಗೆ ರಶ್ಮಿಕಾ ಮಂದಣ್ಣ ಕೊಟ್ಟರು ಉತ್ತರ

|

Updated on: Mar 06, 2024 | 7:02 AM

ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರಿಗೆ ಹಿಂದಿ ಚಿತ್ರರಂಗದಿಂದ ಆಫರ್ ಬಂತು. ಅಲ್ಲಿ ನಟಿಸಿ ಭೇಷ್ ಎನಿಸಿಕೊಂಡರು. ಇತ್ತೀಚೆಗೆ ‘ಅನಿಮಲ್’ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದಾರೆ.

ದಕ್ಷಿಣ ಭಾರತ-ಬಾಲಿವುಡ್ ಎಂದು ಬೇರೆ ಮಾಡುವವರಿಗೆ ರಶ್ಮಿಕಾ ಮಂದಣ್ಣ ಕೊಟ್ಟರು ಉತ್ತರ
ರಶ್ಮಿಕಾ
Follow us on

ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ (Bollywood)​ ಚರ್ಚೆ ಇಂದು ನಿನ್ನೆಯದಲ್ಲ. ಎರಡನ್ನೂ ಸೇರಿ ಭಾರತ ಚಿತ್ರರಂಗ ಎಂದು ಕೆಲವರು ಪರಿಗಣಿಸಿದರೆ ಇನ್ನೂ ಕೆಲವರು ಇದನ್ನು ಬೇರೆ ಬೇರೆ ಆಗಿಯೇ ನೋಡುತ್ತಾರೆ. ಚಿತ್ರರಂಗದ ಅನೇಕರಿಗೆ ಈ ಬಗ್ಗೆ ಬೇರೆ ಬೇರೆ ರೀತಿಯ ಅಭಿಪ್ರಾಯ ಇದೆ. ಈಗ ನಟಿ ರಶ್ಮಿಕಾ ಮಂದಣ್ಣ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಿನ ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇದನ್ನು ಅವರು ‘ಭಾರತೀಯ ಚಿತ್ರರಂಗ’ ಎಂದು ಕರೆದಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರಿಗೆ ಹಿಂದಿ ಚಿತ್ರರಂಗದಿಂದ ಆಫರ್ ಬಂತು. ಅಲ್ಲಿ ನಟಿಸಿ ಭೇಷ್ ಎನಿಸಿಕೊಂಡರು. ಇತ್ತೀಚೆಗೆ ‘ಅನಿಮಲ್’ ಸಿನಿಮಾ ಮೂಲಕ ಅವರು ಗೆದ್ದು ಬೀಗಿದ್ದಾರೆ. ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗ ಎಂದು ಬೇರ್ಪಡಿಸುವವರಿಗೆ ಅವರು ಉತ್ತರ ನೀಡಿದ್ದಾರೆ.

‘ನಾವೆಲ್ಲರೂ ಮನರಂಜನಾ ಉದ್ಯಮದಲ್ಲಿದ್ದೇವೆ. ನಾವೆಲ್ಲರೂ ಒಂದೇ ದೇಶದವಾಗಿರುವುದರಿಂದ ನಾವು ಉದ್ಯಮವನ್ನು ಭಾರತೀಯ ಸಿನಿಮಾ ರಂಗ ಎಂದು ಕರೆಯಲು ಪ್ರಾರಂಭಿಸುವ ಸಮಯ ಬಂದಿದೆ. ನಮ್ಮ ದೇಶದಲ್ಲಿ ಇರುವ ಎಲ್ಲಾ ಚಿತ್ರೋದ್ಯಮ ಒಂದೇ ಆಗಿವೆ ಎಂದು ನಾವು ಒಪ್ಪಿಕೊಳ್ಳಬೇಕಿದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

‘ನಾವು ಒಂದೊಳ್ಳೆ ಸಿನಿಮಾ ಮಾಡಲು ಇಲ್ಲಿದ್ದೇವೆ. ಅಡೆತಡೆಗಳು ಕಡಿಮೆಯಾಗುತ್ತಿವೆ ಮತ್ತು ಜನರು ಎಲ್ಲಿಗೆ ಸೇರಿದವರಾಗಿದ್ದರೂ ಬೇರೆ ಬೇರೆ ಭಾಷೆಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ನಾನು ಪ್ರೀತಿಸುತ್ತೇನೆ. ನಾನು ಬದಲಾವಣೆಯ ಭಾಗವಾಗಿದ್ದೇನೆ ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ: ಯಶ್ To ರಶ್ಮಿಕಾ ಮಂದಣ್ಣ; ದಕ್ಷಿಣದ ಕಲಾವಿದರಿಗೆ ಇದೆ ವಿವಿಧ ಕ್ರೇಜ್

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಜಪಾನ್​ಗೆ ತೆರಳಿದ್ದರು. ಅಲ್ಲಿ ಎನಿಮೇ ಅವಾರ್ಡ್​ ಕಾರ್ಯಕ್ರಮದಲ್ಲಿ ಜ್ಯೂರಿ ಆಗಿ ಭಾಗಿ ಆಗಿದ್ದರು. ಈ ಸಂದರ್ಭದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರು ‘ಪುಷ್ಪ 2’, ‘ರೇನ್​ಬೋ’ ಸೇರಿ ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ