Rashmika Mandanna: ‘ಅಭಿವೃದ್ಧಿಗೆ ಮತ ಹಾಕಿ’ ಎಂದ ರಶ್ಮಿಕಾ; ರೀಟ್ವೀಟ್ ಮಾಡಿದ ಪಿಎಂ ಮೋದಿ

|

Updated on: May 17, 2024 | 10:04 AM

ರಶ್ಮಿಕಾ ಮಂದಣ್ಣ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಫೇಮಸ್ ಆಗಿದ್ದಾರೆ. ಈಗ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಟ್ವೀಟ್​ನ ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗುತ್ತಿದೆ. ರಶ್ಮಿಕಾ ಫ್ಯಾನ್ಸ್ ಇದನ್ನು ರೀಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ.

Rashmika Mandanna: ‘ಅಭಿವೃದ್ಧಿಗೆ ಮತ ಹಾಕಿ’ ಎಂದ ರಶ್ಮಿಕಾ; ರೀಟ್ವೀಟ್ ಮಾಡಿದ ಪಿಎಂ ಮೋದಿ
ರಶ್ಮಿಕಾ-ಮೋದಿ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು. ಸಾಲು ಸಾಲು ಸಿನಿಮಾಗಳು ಹಿಟ್ ಆಗಿದ್ದರಿಂದ ಅವರ ಖ್ಯಾತಿ ಹೆಚ್ಚಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ. ಈಗ ಅವರು ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಟ್ವೀಟ್​ನ ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ.

ಭಾರತದ ಅತ್ಯಂತ ಉದ್ದನೆಯ ಸಮುದ್ರ ಸೇತುವೆ ಎನ್ನುವ ಖ್ಯಾತಿ ಅಟಲ್ ಸೇತು​ಗೆ ಇದೆ. ಮುಂಬೈ ಹಾಗೂ ನವಿ ಮುಂಬೈನ ಇದು ಕನೆಕ್ಟ್ ಮಾಡುತ್ತದೆ. ಈ ಬಗ್ಗೆ ರಶ್ಮಿಕಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಶ್ಮಿಕಾ, ‘ಭಾರತದ ಅತಿ ಉದ್ದನೆಯ ಸಮುದ್ರ ಬ್ರಿಜ್. 22 ಕಿಲೋಮೀಟರ್ ಉದ್ದ ಇದೆ. ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ನಂಬಲೂ ಅಸಾಧ್ಯ. ಕೆಲ ವರ್ಷಗಳ ಹಿಂದೆ ಯಾರೂ ಇದನ್ನು ಊಹಿಸಿಯೂ ಇರಲಿಲ್ಲ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ: ಭಾರತ ವೇಗವಾಗಿ ಬೆಳೆಯುತ್ತಿದೆ, ಈ ಪ್ರಗತಿ ನಿಲ್ಲಬಾರದು: ರಶ್ಮಿಕಾ ಮಂದಣ್ಣ

‘ಭಾರತ ದೊಡ್ಡದಾಗಿ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಏಳೇ ವರ್ಷಗಳಲ್ಲಿ ಈ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಅಟಲ್ ಸೇತು ಇದು ಕೇವಲ ಸೇತುವೆ ಅಲ್ಲ, ಯುವ ಭಾರತಕ್ಕೆ ಇದು ಗ್ಯಾರಂಟಿ. ಈ ರೀತಿಯ ನೂರು ಅಟಲ್ ಸೇತುವೆ ಸ್ಥಾಪಿಸಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ’ ಎಂದು ರಶ್ಮಿಕಾ ಹೇಳಿದ್ದಾರೆ.

ಈ ವಿಡಿಯೋಗೆ ‘ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ, ಪೂರ್ವ ಭಾರತದಿಂದ ಪಶ್ಚಿಮ ಭಾರತದವರೆಗೆ ಜನರನ್ನು ಹಾಗೂ ಹೃದಯಗಳನ್ನು ಕನೆಕ್ಟ್ ಮಾಡುತ್ತಿದ್ದೇವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದನ್ನು ರೀಟ್ವೀಟ್ ಮಾಡಿಕೊಂಡಿರೋ ಮೋದಿ, ‘ಜನರನ್ನು ಸಂಪರ್ಕಿಸುವುದು ಮತ್ತು ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದುದ್ದು ಬೇರೆನೂ ಇಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 10:03 am, Fri, 17 May 24