AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮತ್ತೆ ಸೂಪರ್​ ಹಿಟ್​ ಆಗಲಿದೆ A ಸಿನಿಮಾ’: ನಟಿ ಚಾಂದಿನಿ ಭರವಸೆಯ ಮಾತು

‘ಎ’ ಸಿನಿಮಾದ ಮೂಲಕ ಮನೆಮಾತಾದ ನಟಿ ಚಾಂದಿನಿ ಅವರು ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಈಗ ‘ಎ’ ಸಿನಿಮಾ ಮರುಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಆ ದಿನಗಳನ್ನು ಚಾಂದಿನಿ ಅವರು ನೆನಪಿಸಿಕೊಂಡಿದ್ದಾರೆ. ಉಪೇಂದ್ರ ಮತ್ತು ಚಾಂದಿನಿ ಅವರನ್ನು ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ಜೋಡಿಯಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.

‘ಮತ್ತೆ ಸೂಪರ್​ ಹಿಟ್​ ಆಗಲಿದೆ A ಸಿನಿಮಾ’: ನಟಿ ಚಾಂದಿನಿ ಭರವಸೆಯ ಮಾತು
ಚಾಂದಿನಿ
ಮದನ್​ ಕುಮಾರ್​
|

Updated on: May 16, 2024 | 6:38 PM

Share

ಉಪೇಂದ್ರ ಅವರ ಅಭಿಮಾನಿಗಳಿಗೆ ಈ ವಾರ ಸ್ಪೆಷಲ್​ ಆಗಿರಲಿದೆ. ಅದೇ ರೀತಿ, ನಟಿ ಚಾಂದಿನಿ (Chandini) ಅವರ ಅಭಿಮಾನಿಗಳಿಗೆ ಕೂಡ ಇದು ವಿಶೇಷ ವಾರ. ಯಾಕೆಂದರೆ, ಉಪೇಂದ್ರ (Upendra) ಮತ್ತು ಚಾಂದಿನಿ ಜೋಡಿಯಾಗಿ ನಟಿಸಿದ ‘ಎ’ ಸಿನಿಮಾ ಮೇ 17ರಂದು ಮರುಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಹಳೇ ಸಿನಿಮಾಗಳನ್ನು ರೀ-ರಿಲೀಸ್​ ಮಾಡುವ ಟ್ರೆಂಡ್​ ಚಾಲ್ತಿಯಲ್ಲಿದೆ. ಈಗ ‘ಎ’ ಸಿನಿಮಾ (A Kannada Movie) ಹಿಟ್​ ಆಗಲಿದೆ ಎಂದು ಚಾಂದಿನಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್​ನ ಸಾರ್ವಕಾಲಿಕ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಎ’ ಸಿನಿಮಾ ಕೂಡ ಇದೆ. 1998ರಲ್ಲಿ ತೆರೆಕಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಹೊಸತನ ಮತ್ತು ಹೊಸಬರಿಂದ ಕೂಡಿದ್ದ ಈ ಚಿತ್ರಕ್ಕೆ ಜನರು ಮೆಚ್ಚುಗೆ ನೀಡಿದ್ದರು. ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸಿದ್ದ ಚಾಂದಿನಿ ಅವರು ಈ ಸಿನಿಮಾದಿಂದ ಮನೆ ಮಾತಾದರು. ಈಗ ರೀ-ರಿಲೀಸ್​ ಆಗುತ್ತಿರುವ ಸಂದರ್ಭದಲ್ಲಿ ಚಾಂದಿನಿ ಅವರು ‘ಎ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಚಾಂದಿನಿ ಪಾಲಿಗೆ ‘ಎ’ ಒಂದು ಮೈಲುಗಲ್ಲಿನ ಸಿನಿಮಾ. ಅದೇ ರೀತಿ ಚಿತ್ರರಂಗದ ಪಾಲಿಗೂ ಇದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿದ್ದ ಸಿನಿಮಾ. ಹೀಗೂ ಸಿನಿಮಾ ಮಾಡಬಹುದಾ ಅಂತ ತೋರಿಸಿದ ಚಿತ್ರ ‘ಎ’. ಅಷ್ಟರಮಟ್ಟಿಗೆ ಕ್ರಿಯೇಟಿವ್​ ಆಗಿತ್ತು ಉಪೇಂದ್ರ ಅವರ ನಿರ್ದೇಶನ. ‘ಎ’ ಸಿನಿಮಾ ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಚಾಂದಿನಿ ಹೇಳಿದ್ದಾರೆ.

‘ನನ್ನ ಬದುಕನ್ನೇ ಬದಲಾಯಿಸಿದ ಸಿನಿಮಾ ಅದು. ಆ ಸಿನಿಮಾದ ಕಾರಣದಿಂದ ನನಗೆ ಜನರ ಪ್ರೀತಿ ಮತ್ತು ಜನಪ್ರಿಯತೆ ಸಿಕ್ಕಿತು. ಸಿನಿಮಾದಲ್ಲಿ ಗಾಡ್​ ಈಸ್​ ಗ್ರೇಟ್​ ಎಂಬ ಡೈಲಾಗ್​ನ ರೀತಿ ದೇವರು ಮತ್ತು ಜನರ ಆಶೀರ್ವಾದದಿಂದ ನಾನು ಇಂದಿಗೂ ‘ಎ’ ಸಿನಿಮಾದ ಚಾಂದಿನಿ ರೀತಿಯೇ ಇದ್ದೇನೆ. ಎಲ್ಲ ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮಕಥೆಯೇ ಎ ಸಿನಿಮಾ’ ಎಂದಿದ್ದಾರೆ ಚಾಂದಿನಿ.

ಇದನ್ನೂ ಓದಿ: ‘ಚಿತ್ರಮಂದಿರಕ್ಕೆ ಬರಲ್ಲ ಅಂತ ಜನರನ್ನು ದೂಷಿಸಬಾರದು’: ಉಪೇಂದ್ರ

‘ಉಪೇಂದ್ರ ಅವರ ಡೈರೆಕ್ಷನ್​ ಬಗ್ಗೆ ವರ್ಣಿಸಲು ಪದಗಳೇ ಸಾಕಾಗಲ್ಲ. ಈಗಲೂ ಅವರೇ ನನ್ನ ನೆಚ್ಚಿನ ನಿರ್ದೇಶಕರು. ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಾಡುಗಳು ಈಗಲೂ ಟ್ರೆಂಡ್​ನಲ್ಲಿವೆ. ಕನ್ನಡ ಸಿನಿಪ್ರಿಯರು ಎ ಸಿನಿಮಾದಿಂದ ಇಂದಿನ ತನಕ ನನಗೆ ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಇಂಥ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಧನ್ಯವಾದ’ ಎಂದು ಚಾಂದಿನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್