ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬೇಡಿಕೆಯ ನಟಿಯರಲ್ಲಿ ಒಬ್ಬರು. ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಈ ತಿಂಗಳು ಅವರ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಬಗ್ಗೆ ಅವರ ಫ್ಯಾನ್ಸ್ಗೆ ಖುಷಿ ಇದೆ. ಈಗಾಗಲೇ ‘ವಾರಿಸು’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ‘ಮಿಷನ್ ಮಜ್ನು’ ಸಿನಿಮಾ (Mission Majnu Movie) ರಿಲೀಸ್ಗೆ ರೆಡಿ ಇದೆ. ಈ ಮಧ್ಯೆ ರಶ್ಮಿಕಾ ಮಂದಣ್ಣ ಅವರು ರಕ್ಷಿತ್, ರಿಷಬ್ ಶೆಟ್ಟಿ ಹಾಗೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಧನ್ಯವಾದ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಪ್ರೇಮಾ ದಿ ಜರ್ನಲಿಸ್ಟ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರಿಗೆ ಮೊದಲ ಎರಡು ಸಿನಿಮಾಗಳ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ರಶ್ಮಿಕಾ ಯಾವುದೇ ಹಿಂಜರಿಕೆ ಇಲ್ಲದೆ ಉತ್ತರಿಸಿದ್ದಾರೆ.
ರಶ್ಮಿಕಾ ಮಂದಣ್ಣ ನಟಿಸಿದ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’. ಈ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿದರೆ, ರಕ್ಷಿತ್ ನಿರ್ಮಾಣ ಮಾಡಿ ನಟಿಸಿದ್ದರು. ಎರಡನೇ ಸಿನಿಮಾ ‘ಅಂಜನಿಪುತ್ರ’ದಲ್ಲಿ ಪುನೀತ್ ರಾಜ್ಕುಮಾರ್ ಜತೆ ರಶ್ಮಿಕಾ ನಟಿಸಿದ್ದರು. ಈ ಸಿನಿಮಾಗಳ ಬಗ್ಗೆ ಪ್ರೇಮಾ ಪ್ರಶ್ನೆ ಮಾಡಿದರು. ಇದಕ್ಕೆ ರಶ್ಮಿಕಾ ಉತ್ತರ ನೀಡಿದ್ದಾರೆ.
‘ರಕ್ಷಿತ್ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ಜತೆ ನಟಿಸಿದೆ. ಅವರು ವಿಶಾಲವಾಗಿ ಆಲೋಚಿಸುವುದನ್ನು ಹೇಳಿಕೊಟ್ಟರು. ನಾನು ನಾಲ್ಕು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನೇ ಅಚ್ಚರಿಗೊಳ್ಳುತ್ತೇನೆ. ನನ್ನ ಕಡೆಯಿಂದ ಧನ್ಯವಾದ’ ಎಂದಿದ್ದಾರೆ ರಶ್ಮಿಕಾ.
ಇದನ್ನೂ ಓದಿ: Rashmika Mandanna: ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟಿ ರಶ್ಮಿಕಾ ಮಂದಣ್ಣ; ಅಂಥದ್ದೇನಾಯ್ತು?
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ಇದಕ್ಕೆ ಸಾಕಷ್ಟು ಟೀಕೆ ಬಂದಿತ್ತು. ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂದಿತ್ತು. ಈಗ ಅವರ ಹೊಸ ಹೇಳಿಕೆಯಿಂದ ಟ್ರೋಲ್ ಕಡಿಮೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ