AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್

ರೆಬೆಲ್ ಸ್ಟಾರ್ ಅಂಬರೀಷ್ ಅವರ ವ್ಯಕ್ತಿತ್ವ ಭಿನ್ನವಾಗಿತ್ತು. ಅವರು ಬೈದರೂ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಿದ್ದರು. ಪ್ರೀತಿಯ ಮಾತುಗಳ ಬದಲು, ಅವರ "ಕಠಿಣ" ನುಡಿಗಳೇ ಕಾಳಜಿ ಮತ್ತು ವಾತ್ಸಲ್ಯದ ಸಂಕೇತವಾಗಿದ್ದವು. ಮಂಡ್ಯದ ಜನರನ್ನು ಉದಾಹರಣೆಯಾಗಿ ನೀಡಿ, ತಾವು ಬೈದರೂ ಜನರು ಅದನ್ನು ಆಶೀರ್ವಾದವಾಗಿ ಸ್ವೀಕರಿಸುತ್ತಿದ್ದರು ಎಂದು ಅಂಬರೀಷ್ ಅವರೇ ವಿವರಿಸಿದ್ದರು.

ಅಂಬರೀಷ್ ಬೈದರೂ ಜನರಿಗೆ ಏಕೆ ಇಷ್ಟ ಆಗುತ್ತಿತ್ತು? ವಿವರಿಸಿದ್ದ ರೆಬೆಲ್ ಸ್ಟಾರ್
ಅಂಬರೀಷ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Apr 18, 2026 | 7:38 AM

Share

ನಟ ಅಂಬರೀಷ್ ಅವರು ಇಂದು ನಮ್ಮ ಜೊತೆ ಇಲ್ಲ ಎಂಬುದು ದುಃಖದ ವಿಷಯ. ಅವರು ನಟನಾಗಿ, ರಾಜಕಾರಣಿ ಆಗಿ ಇಷ್ಟ ಆಗಿದ್ದರು. ಅವರು ನಮ್ಮನ್ನು ಅಗಲಿ ಹಲವು ವರ್ಷಗಳೇ ಕಳೆದಿವೆ. ಅಂಬರೀಷ್ ಅವರುದ್ದು ಭಿನ್ನ ವ್ಯಕ್ತಿತ್ವ ಆಗಿತ್ತು. ಅವರು ಬೈದರೂ ಜನರಿಗೆ ಇಷ್ಟ ಆಗುತ್ತಿತ್ತು. ಅದು ಹೇಗೆ ಮತ್ತು ಏಕೆ ಎಂಬುದನ್ನು ಸ್ವತಃ ಅಂಬರೀಷ್ ಅವರೇ ವಿವರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಎಲ್ಲ ಹೀರೋಗಳು ಪ್ರೀತಿ ತೋರಿಸುತ್ತಾ ಇದ್ದಿದ್ದು ತಮ್ಮ ಪ್ರೀತಿಯ ಮಾತುಗಳಿಂದ. ಆದರೆ, ಅಂಬರೀಷ್ ಅವರು ಯಾವಾಗಲೂ ಪ್ರೀತಿಯಿಂದ ಮಾತನಾಡುತ್ತಿರಲಿಲ್ಲ. ಹಾಗಂತ ಅಭಿಮಾನಿಗಳ ಮೇಲೆ ಅವರಿಗೆ ಪ್ರೀತಿ ಇಲ್ಲ ಎಂದಲ್ಲ. ಅವರು ಬೈದರು ಎಂದರೆ ಅವರು ಸಾಕಷ್ಟು ಕೇರ್ ಮಾಡುತ್ತಾರೆ ಹಾಗೂ ಪ್ರೀತಿ ಮಾಡುತ್ತಾರೆ ಎಂಬ ಅರ್ಥವನ್ನು ನೀಡುತ್ತಿತ್ತು. ಅಂಬರೀಷ್ ಅತ್ಯಾಪ್ತರು ಎನಿಸಿಕೊಂಡವರು ಇದನ್ನು ಬಲ್ಲವರಾಗಿದ್ದರು ಮತ್ತು ಅಂಬರೀಷ್ ಅವರಿಂದ ಆ ರೀತಿಯ ಮಾತುಗಳನ್ನೇ ನಿರೀಕ್ಷೆ ಮಾಡುತ್ತಿದ್ದರು.

ಅತ್ಯಾಪ್ತರಿಗೆ ಅಂಬರೀಷ್ ಬಯ್ಯುತ್ತಿರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿದ್ದನ್ನು ನೀವು ನೋಡಿರಬಹುದು. ಆದರೆ, ಯಾರೊಬ್ಬರೂ ಅವರು ಬೈದರು ಎಂದು ಬೇಸರ ಮಾಡಿಕೊಳ್ಳುತ್ತಾ ಇರಲಿಲ್ಲ. ಆಪ್ತ ವರ್ಗದಲ್ಲಿ, ಮಾಧ್ಯಮದ ಜೊತೆ ಎಲ್ಲರ ಬಳಿಕಯೂ ಅಂಬರೀಷ್ ನಡೆದುಕೊಳ್ಳುತ್ತಿದ್ದುದೇ ಹಾಗೆ. ಈ ಅಂಬರೀಷ್ ಅವರ ಈ ಡೈಲಾಗ್ ಈಗಲೂ ಮೀಮ್​ಗಳಲ್ಲಿ ಸಾಕಷ್ಟು ಬಳಕೆ ಆಗುತ್ತದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುವ ಕೆಲಸವನ್ನು ಮಾಡುತ್ತಾರೆ.

ಇದನ್ನೂ ಓದಿ: ಕನ್ನಡದಲ್ಲಿ ಅಂಬರೀಷ್, ತೆಲುಗಿನಲ್ಲಿ ಪ್ರಭಾಸ್; ಇಬ್ಬರೂ ರೆಬೆಲ್ ಸ್ಟಾರ್ ಮಧ್ಯೆ ಇದೆ ಸಾಮ್ಯತೆ

ಈ ಬಗ್ಗೆ ಅಂಬರೀಷ್ ಅವರು ಈ ಮೊದಲು ಮಾತನಾಡಿದ್ದರು. ‘ಏನೇ ಮಾಡಿದರೂ ಜನರು ನನ್ನನ್ನು ಇಷ್ಟಪಡುತ್ತಾರೆ. ಮಂಡ್ಯ ಜನರಿಗೆ ಬೇರೆ ಯಾರೇ ಬೈದರೂ ಹೋಗಯ್ಯೋ ಅಂತಾರೆ. ಅದು ನಾನು ಬೈದರೆ ಅಣ್ಣ ಬೈದ, ಆಶೀರ್ವಾದ ಸಿಕ್ಕಿತು ಎನ್ನುತ್ತಾರೆ’ ಎಂದು ಅಂಬರೀಷ್ ಅವರು ಈ ಮೊದಲು ಹೇಳಿದ್ದನ್ನು ನೀವು ಕಾಣಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Sat, 18 April 26

Follow Us