‘ಹೊಡೆದರು, ಸುಟ್ಟರು, ಕೊನೆಗೆ ‘ಶೂಟ್ ಮಾಡ್ಕೊಂಡು ಸಾಯ್ತೀನಿ’ ಎಂದ ದರ್ಶನ್’

Darshan Thoogudeepa: ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ಪ್ರದೋಶ್, ತಾವು ಪ್ರಕರಣದ ಪೂರ್ಣ ಮಾಹಿತಿಯನ್ನು ನ್ಯಾಯಾಲಯದ ಎದುರು ಹಂಚಿಕೊಳ್ಳುವುದಾಗಿ ಹೇಳಿದ್ದು, ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಶ್ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಕುತೂಹಲಕಾರಿ ವಿಷಯಗಳು ಹೊರಬಂದಿವೆ. ದರ್ಶನ್ ತಮಗೆ ಬೆದರಿಕೆ ಹಾಕಿದ್ದಾಗಿಯೂ ಪ್ರದೋಶ್ ಹೇಳಿಕೊಂಡಿದ್ದಾರೆ.

‘ಹೊಡೆದರು, ಸುಟ್ಟರು, ಕೊನೆಗೆ ‘ಶೂಟ್ ಮಾಡ್ಕೊಂಡು ಸಾಯ್ತೀನಿ’ ಎಂದ ದರ್ಶನ್’
Darshan Renuka

Updated on: Aug 09, 2026 | 12:34 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ದರ್ಶನ್ ಆಪ್ತನಾಗಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಸಹ ಆಗಿರುವ ಪ್ರದೋಷ್ ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ಪ್ರದೋಶ್, ತಾವು ಪ್ರಕರಣದ ಪೂರ್ಣ ಮಾಹಿತಿಯನ್ನು ನ್ಯಾಯಾಲಯದ ಎದುರು ಹಂಚಿಕೊಳ್ಳುವುದಾಗಿ ಹೇಳಿದ್ದು, ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಶ್ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಕುತೂಹಲಕಾರಿ ವಿಷಯಗಳು ಹೊರಬಂದಿವೆ.

ಪ್ರದೋಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಚಾಲ್ತಿಯಲ್ಲಿದ್ದು, ನಾಳೆಯೂ (ಆಗಸ್ಟ್ 10) ವಿಚಾರಣೆ ನಡೆಯಲಿದೆ. ಪ್ರದೋಶ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಪ್ರಕರಣ ನಡೆದ ಬಳಿಕ, ನಟ ದರ್ಶನ್, ತಾವು ಗನ್​ ಇಂದ ಶೂಟ್ ಮಾಡಿಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

‘ಪ್ರಕರಣದಲ್ಲಿ ತಮಗೆ ಸಹಕರಿಸದೇ ಇದ್ದರೆ ಗನ್​ ಇಂದ ಶೂಟ್ ಮಾಡಿಕೊಂಡು ಸಾಯುವುದಾಗಿ ದರ್ಶನ್ ಬೆದರಿಕೆ ಹಾಕಿದ್ದರು, ಹಾಗಾಗಿ ತಾವು ದರ್ಶನ್​​ಗೆ ಸಹಾಯ ಮಾಡಿದ್ದಾಗಿ ಪ್ರದೋಶ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದಾಗ ಸ್ಥಳದಲ್ಲಿ ನಾನು ಹಾಜರಿದ್ದೆ‌. ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ತಡೆಯಲು ಬಹಳ ಪ್ರಯತ್ನ ಪಟ್ಟೆ. ಅಮಾನುಷವಾಗಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಯ್ತು, ಸಿಗರೇಟಿನಿಂದ ಸುಟ್ಟರು, ಖುದ್ದು ದರ್ಶನ್ ಸಹ ತೀವ್ರವಾಗಿ ಹಲ್ಲೆ ಮಾಡಿದರು. ದರ್ಶನ್ ತನಗೆ ಬೆದರಿಕೆ ಹಾಕಿದ್ದರಿಂದ ತಾನು ಅಸಹಾಯಕನಾದೆ ಎಂದಿದ್ದಾರೆ. ಅಲ್ಲದೆ, ಪ್ರಕರಣ ನಡೆದಿದ್ದು ಹೇಗೆ? ಪ್ರಕರಣದಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಲ್ಲ ವಿಷಯಗಳು ತಮಗೆ ತಿಳಿದಿದ್ದು, ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದರೆ ಎಲ್ಲ ವಿಷಯವನ್ನು ನ್ಯಾಯಾಲಯದ ಮುಂದೆ ಹೇಳುವುದಾಗಿ ಅವರು ಪ್ರದೋಶ್ ಹೇಳಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲ ಬದಲು

ಪ್ರದೋಶ್, ದರ್ಶನ್​​ ಅವರ ಆಪ್ತರಾಗಿದ್ದು, ಆರ್​​ಆರ್​ ನಗರದಲ್ಲಿರುವ ಸ್ಟೋನಿ ಬ್ರೂಕ್ ಬಾರ್ ಆಂಡ್ ರೆಸ್ಟೊರೆಂಟ್​​ನ ಮಾಲೀಕರಾಗಿದ್ದಾರೆ. ಘಟನೆ ನಡೆದ ದಿನ ಇದೇ ಸ್ಟೋನಿ ಬ್ರೂಕ್​ನಲ್ಲಿ ದರ್ಶನ್ ಹಾಗೂ ಇತರರು ಇದ್ದರು ಎನ್ನಲಾಗಿದ್ದು, ಇಲ್ಲಿ ಪಾರ್ಟಿ ಮುಗಿಸಿಕೊಂಡು ಪಟ್ಟಣಗೆರೆ ಶೆಡ್​​ಗೆ ಹೋಗಿದ್ದರು. ದರ್ಶನ್ ಜೊತೆಗೆ ಪ್ರದೋಶ್ ಸಹ ಹೋಗಿದ್ದರು. ಘಟನೆ ನಡೆದ ಬಳಿಕ ನಡೆದ ಬೆಳವಣಿಗೆಗಳಲ್ಲಿ ಪ್ರದೋಶ್ ನೇರವಾಗಿ ಭಾಗಿದಾರರಾಗಿದ್ದರು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Sun, 9 August 26

Loading...
Unable to load recommendations.
Follow Us