ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲರ ವಾದ ಏನಾಗಿತ್ತು?

|

Updated on: Jun 20, 2024 | 7:43 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಇಂದು (ಜೂನ್ 20) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಂದು ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ಸಲ್ಲಿಸಿದ ವಾದ ಏನಾಗಿತ್ತು? ಇಲ್ಲಿದೆ ಮಾಹಿತಿ.

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲರ ವಾದ ಏನಾಗಿತ್ತು?
ದರ್ಶನ್-ವಕೀಲ
Follow us on

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan Thoogudeepa) ಬಂಧನವಾಗಿ 10 ದಿನವಾಗಿದೆ. ಅಂದಿನಿಂದಲೂ ಪೊಲೀಸ್ ಕಸ್ಟಡಿಯಲ್ಲೇ ಇರುವ ಆರೋಪಿ ದರ್ಶನ್​ ಇನ್ನೂ ಎರಡು ದಿನಗಳ ಕಾಲ ಕಸ್ಟಡಿ ಮುಂದುವರೆಯಲಿದೆ. ಇಂದು (ಜೂನ್ 20) ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸರು ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಇದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಲಯದಲ್ಲಿ ಅವರ ವಾದ ಏನಾಗಿತ್ತು ಎಂಬುದರ ವಿವರ ಇಲ್ಲಿದೆ.

ಪೊಲೀಸರು ರಿಮ್ಯಾಂಡ್ ಅರ್ಜಿಯನ್ನು ವಕೀಲರಿಗೆ ನೀಡಿಲ್ಲವೆಂಬುದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಂಧನಕ್ಕೆ ಕಾರಣ ನೀಡುವುದು ಅತ್ಯಂತ ಮಹತ್ವದ್ದು, ಹಾಗಾಗಿ ಅದನ್ನು ಪೊಲೀಸರು ಪಾಲಿಸದೇ ಇರುವ ಬಗ್ಗೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪ್ರಭಿರ್ ಪುರ್ಕಸ್ಥ vs ಸ್ಟೇಟ್ ಆಫ್ ದೆಹಲಿ ಪ್ರಕರಣವನ್ನು ಉಲ್ಲೇಖಿಸಿ, ಬಂಧನಕ್ಕೆ ಕಾರಣ ನೀಡದೇ ಇರುವುದು ಅಕ್ರಮ ಬಂಧನವಾಗುತ್ತದೆ ಎಂದು ವಾದಿಸಿದರು. ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಅದನ್ನು ತಮ್ಮ ಆದೇಶದಲ್ಲಿ ನಮೂದಿಸಿದರು.

ಪೊಲೀಸರ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ್ಯ ಸಾಕ್ಷ್ಯವಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಆದರೆ ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಇಷ್ಟು ದಿನ ಈ ಬಗ್ಗೆ ಪೊಲೀಸರು ಮಾಹಿತಿಯನ್ನು ನೀಡಿರಲಿಲ್ಲ. ಇಷ್ಟು ದಿನ ಸಾಂಧರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದರು, ಈಗ ಒಮ್ಮೆಲೆ ಪ್ರತ್ಯಕ್ಷ್ಯ ಸಾಕ್ಷ್ಯ ಎಲ್ಲಿಂದ ತಂದಿದ್ದಾರೆಯೋ ಗೊತ್ತಿಲ್ಲ. ಈ ಪ್ರತ್ಯಕ್ಷ್ಯ ಸಾಕ್ಷಿ ಹೆಣೆದಿರುವ ಸಾಕ್ಷಿ (ಫ್ಯಾಬ್ರಿಕೇಟೆಡ್ ಎವಿಡೆನ್ಸ್) ಎಂಬ ಅನುಮಾನವಿದೆ ಎಂದು ಸಹ ದರ್ಶನ್ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ದರ್ಶನ್​ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಕಾರಣವೇನು?

ರಿಮ್ಯಾಂಡ್ ಅರ್ಜಿಯನ್ನು ನೀಡದೇ ಇರುವ ಕ್ರಮವನ್ನು ನಾವು ಹೈಕೋರ್ಟ್​ನಲ್ಲಿ ರಿಟ್ ಹಾಕಿ ಪ್ರಶ್ನೆ ಮಾಡಲಿದ್ದೇವೆ. ಪ್ರಭಿರ್ ಪುರ್ಕಸ್ಥ vs ಸ್ಟೇಟ್ ಆಫ್ ದೆಹಲಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನ ಆದೇಶವೇ ಇದೆ. ಕಾರಣ ನೀಡದೇ ಇದ್ದರೆ ಬಂಧನ ಅಕ್ರಮ ಆಗುತ್ತದೆಯೆಂದು, ಹಾಗಾಗಿ ನಾವು ಅದೇ ಗ್ರೌಂಡ್ಸ್​ನಲ್ಲಿ ರಿಟ್ ಸಲ್ಲಿಸಲಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ.

ಮುಂದುವರೆದು, ಇನ್ನೆರಡು ದಿನಗಳಲ್ಲಿ ದರ್ಶನ್​ರ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತದೆ. ಅದಾದ ಬಳಿಕ ಅಂತಿಮ ರಿಮ್ಯಾಂಡ್ ಅಪ್ಲಿಕೇಶನ್ ಅನ್ನು ಪಡೆದುಕೊಂಡು ಪರಿಶೀಲನೆ ಮಾಡಿ ಅದಾದ ಬಳಿಕ ನಾವು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ