ರೇಣುಕಾ ಸ್ವಾಮಿ ಕೇಸ್: ದರ್ಶನ್​ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಕಾರಣವೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಹತ್ತು ದಿನ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ತೂಗುದೀಪ ಇನ್ನೂ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲೇ ಇರಬೇಕಾಗಿದೆ. ದರ್ಶನ್ ಅನ್ನು ಮತ್ತೆ ವಶಕ್ಕೆ ನೀಡಲು ಪೊಲೀಸರು ನ್ಯಾಯಾಲಯಕ್ಕೆ ನೀಡಿದ ಕಾರಣವೇನು?

ರೇಣುಕಾ ಸ್ವಾಮಿ ಕೇಸ್: ದರ್ಶನ್​ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಕಾರಣವೇನು?
ದರ್ಶನ್
Follow us
ಮಂಜುನಾಥ ಸಿ.
|

Updated on: Jun 20, 2024 | 6:46 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ್​ರ (Darshan) ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನೆರಡು ದಿನಗಳ ಕಾಲ ವಿಸ್ತರಿಸಲಾಗಿದೆ. ಕಳೆದ ಹತ್ತು ದಿನಗಳಿಂದಲೂ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಮತ್ತೆ ನಾಲ್ಕು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು, ಆದರೆ ನ್ಯಾಯಾಲಯವು ಎರಡು ದಿನಗಳ ಕಾಲ ಕಸ್ಟಡಿ ವಿಸ್ತರಣೆ ಮಾಡಿದೆ. ದರ್ಶನ್ ಮಾತ್ರವೇ ಅಲ್ಲದೆ ಪ್ರಕರಣದ ಇತರೆ ಮೂವರು ಅಂದರೆ ಒಟ್ಟು ನಾಲ್ಕು ಮಂದಿಯ ಪೊಲೀಸ್ ಕಸ್ಟಡಿ ಅವಧಿಯನ್ನು ಎರಡು ದಿನಗಳ ಕಾಲ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ A2 ದರ್ಶನ್‌, A9 ಧನರಾಜ್, A10 ವಿನಯ್ ಹಾಗೂ A14 ಪ್ರದೋಶ್‌ ಅವರುಗಳ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ನೀಡಿದೆ. ಜೂನ್ 22ರಂದು ಸಂಜೆ ಐದು ಗಂಟೆಯ ಒಳಗಾಗಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಹೇಳಿದೆ.

ದರ್ಶನ್ ಹಾಗೂ ಇತರರನ್ನು ಮತ್ತೆ ಕಸ್ಟಡಿಗೆ ನೀಡಲು ಕೆಲವು ಕಾರಣಗಳನ್ನು ಪೊಲೀಸರು ನೀಡಿದ್ದರು. ಪ್ರಕರಣದಲ್ಲಿ ಪ್ರತ್ಯಕ್ಷ್ಯ ಸಾಕ್ಷಿ ಇದ್ದಾರೆ ಎಂಬುದು ಪ್ರಮುಖ ಕಾರಣವಾಗಿತ್ತು. ಪ್ರತ್ಯಕ್ಷ್ಯ ಸಾಕ್ಷಿ ನೀಡಿರುವ ಹೇಳಿಕೆಗಳ ಆಧಾರದಲ್ಲಿ ದರ್ಶನ್​ರ ವಿಚಾರಣೆ ಮಾಡಬೇಕೆಂಬುದು ಪೊಲೀಸರ ವಾದ. ಇದರ ಜೊತೆಗೆ ಕೆಲವು ಟೆಕ್ನಿಕಲ್ ಸಾಕ್ಷ್ಯಗಳು, ಉದಾಹರಣೆಗೆ ಮೊಬೈಲ್ ನೆಟ್​ವರ್ಕಿಂಗ್, ಎಫ್​ಎಸ್​ಎಲ್ ವರದಿಗಳು ಇವುಗಳ ವರದಿಗಳ ಆಧಾರದಲ್ಲಿ ವಿಚಾರಣೆ ಮಾಡಬೇಕೆನ್ನುವ ಕಾರಣವನ್ನು ಪೊಲೀಸರು ನೀಡಿದರು. ಇದರ ಜೊತೆಗೆ ಶವ ಎಸೆಯಲು ನೀಡಲಾಗಿದ್ದ 37 ಲಕ್ಷ ರೂಪಾಯಿ ಹಣದ ಮೂಲವನ್ನು ಸಹ ಪತ್ತೆ ಮಾಡಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ:Breaking: ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಜೈಲು ಪಾಲು

ಇನ್ನು ಆರೋಪಿ ಧನರಾಜ್, ರೇಣುಕಾ ಸ್ವಾಮಿಯ ಮೊಬೈಲ್ ಹುಡುಕಾಟದಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. ಧನರಾಜ್, ರೇಣುಕಾ ಸ್ವಾಮಿಗೆ ಶಾಕ್ ನೀಡಿದ್ದವ. ಅಲ್ಲದೆ ಹಣ ಪಡೆದು ರೇಣುಕಾ ಸ್ವಾಮಿಯ ಶವ ಸಹ ಸಾಗಿಸಿದ್ದ ಎನ್ನಲಾಗಿದೆ. ರೇಣುಕಾ ಸ್ವಾಮಿಯ ಮೊಬೈಲ್ ಅನ್ನು ಈತನೇ ಮೋರಿಗೆ ಎಸೆದಿದ್ದ ಎನ್ನಲಾಗುತ್ತಿದೆ. ಆದರೆ ಈಗ ರೇಣುಕಾ ಸ್ವಾಮಿಯ ಮೊಬೈಲ್ ಹುಡುಕಾಟದಲ್ಲಿ ಈತ ಸಹಕಾರ ನೀಡುತ್ತಿಲ್ಲ ಎನ್ನಲಾಗುತ್ತಿದೆ.

ದೀಪಕ್ ಹಾಗೂ ವಿನಯ್ ಅವರುಗಳು ತನಿಖೆಗೆ ಸರಿಯಾಗಿ ಸಹಕಾರ ನೀಡಿಲ್ಲವೆಂದು, ಅಲ್ಲದೆ 37 ಲಕ್ಷ ರೂಪಾಯಿ ಹಣದ ಮೂಲ ಪತ್ತೆ ಹಚ್ಚಲು ಸಹ ಅವರ ವಿಚಾರಣೆಯ ಅಗತ್ಯವಿದೆ ಎಂದು ಕಾರಣ ನೀಡಿ ಪೊಲೀಸರು ಈ ಇಬ್ಬರನ್ನು ಸಹ ವಶಕ್ಕೆ ಕೇಳಿದ್ದರು. ಪೊಲೀಸರು ಒಟ್ಟು ನಾಲ್ಕು ಆರೋಪಿಗಳನ್ನು ವಶಕ್ಕೆ ಕೇಳಿದ್ದರು ಆದರೆ ದರ್ಶನ್ ಪರ ವಕೀಲರು ತಕರಾರು ಸಲ್ಲಿಸಿದ ಕಾರಣ ಕೇವಲ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್