ರೇಣುಕಾ ಸ್ವಾಮಿ ಕೊಲೆ ಆರೋಪಿ ಪ್ರದೋಶ್ ಅಜ್ಜಿ ಸಾವು

|

Updated on: Jul 28, 2024 | 12:50 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗದೀಪ ಜೊತೆಗೆ ಜೈಲು ಸೇರಿರುವ ಆಪ್ತ ಪ್ರದೋಶ್​ರ ಅಜ್ಜಿ ಇಂದು ನಿಧನರಾಗಿದ್ದಾರೆ. ಪ್ರಕರಣದಲ್ಲಿ ಪ್ರದೋಶ್ 17ನೇ ಆರೋಪಿ ಆಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಆರೋಪಿ ಪ್ರದೋಶ್ ಅಜ್ಜಿ ಸಾವು
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ದರ್ಶನ್​ರ ಆಪ್ತ ಗೆಳೆಯ ಪ್ರದೋಶ್​ರ ಅಜ್ಜಿ ತೀರಿಕೊಂಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಿವಾಸದಲ್ಲಿ ಪ್ರದೋಶ್​ರ ಅಜ್ಜಿ ನಿಧನರಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ 14ನೇ ಆರೋಪಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವವರ ಹತ್ತಿರದ ಸಂಬಂಧಿಗಳ ಇದು ಮೂರನೇ ಸಾವು. ಈ ಮೊದಲು ಆರೋಪಿಗಳಾದ ಅನು ಅವರ ತಂದೆ, ರಾಘು ಅವರ ತಾಯಿ ನಿಧನ ಹೊಂದಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್​ ಸ್ಟೂನಿ ಬ್ರೂಕ್​ನ ಮಾಲೀಕರೂ ಸಹ ಆಗಿದ್ದಾರೆ. ಅವರ ಅಜ್ಜಿ ಇಂದು (ಜುಲೈ 28) ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅಜ್ಜಿಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಪ್ರದೋಶ್​ಗೆ ಅವಕಾಶ ಸಿಗುತ್ತದೆಯೇ ಕಾದು ನೋಡಬೇಕಿದೆ.

ರೇಣುಕಾ ಸ್ವಾಮಿ ಕೊಲೆ ನಡೆದ ದಿನ ಪ್ರದೋಶ್​ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್​ನಲ್ಲಿ ಹಾಜರಿದ್ದರು ಎನ್ನಲಾಗಿದ್ದು, ಕೊಲೆ ನಡೆದ ಬಳಿಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು ಎಂಬ ಆರೋಪವಿದೆ. ದರ್ಶನ್ ಇಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅದನ್ನು ಶವ ವಿಲೇವಾರಿ ಮಾಡಿದ ಹಾಗೂ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಆರೋಪಿಗಳಿಗೆ ನೀಡಿದವರಲ್ಲಿ ಪ್ರದೋಶ್ ಸಹ ಒಬ್ಬರು.

ಇದನ್ನೂ ಓದಿ:ವಿಡಿಯೋ: ರೇಣುಕಾ ಸ್ವಾಮಿ ಕುಟುಂಬದ ಭೇಟಿ ಬಳಿಕ ಭಾವುಕರಾದ ವಿನೋದ್ ರಾಜ್

ಘಟನೆ ನಡೆದ ದಿನ ಸ್ಟೂನಿ ಬ್ರೂಕ್ ಮಾಲೀಕ ವಿನಯ್, ದರ್ಶನ್ ಅವರು ಪಟ್ಟಣಗೆರೆ ಶೆಡ್​ಗೆ ಹೋಗುವ ಸಂದರ್ಭದಲ್ಲಿ ಪ್ರದೋಶ್ ಕೊನೆಯಲ್ಲಿ ಹೋಗಿ ಕಾರು ಹತ್ತಿದ ಎನ್ನಲಾಗುತ್ತಿದೆ. ಅಸಲಿಗೆ ದರ್ಶನ್, ಪ್ರದೋಶ್​ನನ್ನು ಬರುವುದು ಬೇಡ ಎಂದೇ ಹೇಳಿದರಂತೆ ಆದರೂ ಸಹ ಬರ್ತೀನಿ ಬಾಸ್ ಎನ್ನುತ್ತಾ ಪ್ರದೋಶ್, ದರ್ಶನ್ ಹಾಗೂ ವಿನಯ್ ಜೊತೆ ಹೋದನಂತೆ. ಅದರಿಂದ ಈಗ ಕೊಲೆ ಪ್ರಕರಣದ ಆರೋಪಿ ಆಗಿದ್ದಾನೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಹದಿನೇಳು ಆರೋಪಿಗಳಿದ್ದಾರೆ. ಅವರಲ್ಲಿ ಆರೋಪಿ ಅನು ತಂದೆ ಸಾವನ್ನಪ್ಪಿದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸುವುದಕ್ಕೆ ಮುನ್ನವೇ ಅನು ತಂದೆ ಮಗನ ಸುದ್ದಿ ಕೇಳಿ ಆಘಾತದಿಂದ ಕೊನೆ ಉಸಿರೆಳೆದರು. ಅದಾದ ಬಳಿಕ ಪ್ರಕರಣದ ನಾಲ್ಕನೇ ಆರೋಪಿ ರಾಘು ತಾಯಿ ನಿಧನ ಹೊಂದಿದರು. ರಾಘು, ತಾಯಿಯ ಅಂತಿಮ ದರ್ಶನಕ್ಕೂ ಸಹ ಹೋಗಲಿಲ್ಲ. ಇದೀಗ ಪ್ರದೋಶ್​ರ ಅಜ್ಜಿ ನಿಧನರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ