2022ರಲ್ಲಿ ರಿಷಬ್ ಶೆಟ್ಟಿ (Rishab Shetty) ಬರ್ತ್ಡೇ ಆಚರಿಸಿಕೊಳ್ಳುವಾಗ ‘ಕಾಂತಾರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈ ಸಿನಿಮಾನ ಕನ್ನಡದಲ್ಲಿ ರಿಲೀಸ್ ಮಾಡಲು ಅವರು ಪ್ಲ್ಯಾನ್ ರೂಪಿಸಿದ್ದರು. ಆದರೆ, ಈ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಕಾಣುತ್ತದೆ ಎಂದು ಅವರು ಊಹಿಸಿರಲಿಲ್ಲ. ‘ಕಾಂತಾರ’ ಸಿನಿಮಾ (Kantara Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಕಾರಣಕ್ಕೆ ರಿಷಬ್ ಶೆಟ್ಟಿ ಅವರಿಗೆ ಈ ವರ್ಷದ ಬರ್ತ್ಡೇ ಸಖತ್ ಸ್ಪೆಷಲ್. ಇಂದು (ಜುಲೈ 7) ಅವರು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದು, ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.
ರಿಷಬ್ ಶೆಟ್ಟಿ ಅವರು ‘ತುಘ್ಲಕ್’ ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ನಟಿಸಿದರು. ನಂತರ ‘ಲೂಸಿಯಾ’, ‘ಉಳಿದವರು ಕಂಡಂತೆ’ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಆಗಲೇ ಅವರಿಗೆ ನಿರ್ದೇಶನದ ಕಡೆ ಆಸಕ್ತಿ ಬೆಳೆದಿತ್ತು. 2016ರಲ್ಲಿ ಅವರು ‘ರಿಕ್ಕಿ’ ಸಿನಿಮಾ ನಿರ್ದೇಶನ ಮಾಡಿದರು. ಅದೇ ವರ್ಷ ರಿಲೀಸ್ ಆದ ರಿಷಬ್ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು.
2018ರಲ್ಲಿ ರಿಲೀಸ್ ಆದ ‘ಸಹಿಪ್ರಾ ಶಾಲೆ ಕಾಸರಗೋಡು’ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತು. ಮಕ್ಕಳನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ್ದ ಈ ಸಿನಿಮಾ ಕನ್ನಡ ಶಾಲೆಗಳ ಉಳಿಸುವ ಅಗತ್ಯತೆಯ ಸಂದೇಶವನ್ನೂ ನೀಡಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ರಿಷಬ್. ಕಳೆದ ವರ್ಷ ರಿಲೀಸ್ ಆದ ‘ಕಾಂತಾರ’ ಚಿತ್ರ ಅವರ ಬಣ್ಣದ ಬದುಕನ್ನೇ ಬದಲಿಸಿತು.
ಸದ್ಯ, ರಿಷಬ್ ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯಸಿ ಇದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರ ಈ ಸಿನಿಮಾ ಕುರಿತು ಇಂದು (ಜುಲೈ 7) ಏನಾದರೂ ಮಾಹಿತಿ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಚಿತ್ರತಂಡ ಈ ಕುರಿತು ಏನಾದರೂ ಅಪ್ಡೇಟ್ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಕೊನೇಪಕ್ಷ ಸಿನಿಮಾ ಸೆಟ್ಟೇರುವ ದಿನಾಂಕವನ್ನಾದರೂ ಕೊಡಲಿ ಅನ್ನೋದು ಫ್ಯಾನ್ಸ್ ಬಯಕೆ.
ಇದನ್ನೂ ಓದಿ: ‘ಕಾಂತಾರ 2’ ಶೂಟ್ಗೆ ದಿನಾಂಕ ನಿಗದಿ? ಇಲ್ಲಿದೆ ರಿಷಬ್ ಶೆಟ್ಟಿ ಸಿನಿಮಾ ಕುರಿತ ಮಾಹಿತಿ
ಇನ್ನು, ಬರ್ತ್ಡೇ ಪ್ರಯುಕ್ತ ರಿಷಬ್ ಶೆಟ್ಟಿ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ನಂದಿ ಲಿಂಕ್ ಗ್ರೌಂಡ್ನಲ್ಲಿ ಅವರು ಫ್ಯಾನ್ಸ್ನ ಭೇಟಿ ಆಗುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಭಿಮಾನಿಗಳಿಗೆ ಬರುವಂತೆ ಅವರು ಆಹ್ವಾನ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ