Rishab Shetty: ರಶ್ಮಿಕಾ ಮಂದಣ್ಣ ಧಿಮಾಕಿಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ; ಇಲ್ಲಿದೆ ವೈರಲ್ ವಿಡಿಯೋ

Rashmika Mandanna: ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು. ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್​ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ.

Rishab Shetty: ರಶ್ಮಿಕಾ ಮಂದಣ್ಣ ಧಿಮಾಕಿಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ; ಇಲ್ಲಿದೆ ವೈರಲ್ ವಿಡಿಯೋ
ರಿಷಬ್-ರಶ್ಮಿಕಾ
Follow us
| Updated By: Digi Tech Desk

Updated on:Nov 23, 2022 | 9:06 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದೇಶ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ಕಾಲಿವುಡ್​, ಬಾಲಿವುಡ್​, ಟಾಲಿವುಡ್​ನಲ್ಲಿ ನಟಿಸುತ್ತಿದ್ದಾರೆ. ಹಲವು ಸ್ಟಾರ್​ಗಳ ಜತೆ ತೆರೆ ಹಂಚಿಕೊಂಡಿದ್ದಾರೆ. ರಶ್ಮಿಕಾ ಖ್ಯಾತಿ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ರಶ್ಮಿಕಾ ಮಂದಣ್ಣ ಅವರಿಗೆ ಇಷ್ಟೊಂದು ಖ್ಯಾತಿ ಸಿಗಲು ಕಾರಣ ಆಗಿದ್ದು ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರ. ರಶ್ಮಿಕಾ ಇಷ್ಟು ಎತ್ತರಕ್ಕೆ ಬೆಳೆಯಲು ಈ ಚಿತ್ರ ಪ್ರಮುಖ ಪಾತ್ರವಹಿಸಿದೆ. ‘ಕಿರಿಕ್ ಪಾರ್ಟಿ’ ಬಳಿಕ ಹಲವು ಆಫರ್​ಗಳು ಅವರನ್ನು ಹುಡುಕಿ ಬಂದವು. ಇದು ರಶ್ಮಿಕಾಗೂ ತಿಳಿದಿದೆ. ಆದರೆ, ರಶ್ಮಿಕಾ ಕೆಲವೊಮ್ಮೆ ಇದನ್ನು ಮರೆತು ಬಿಡುತ್ತಾರೆ! ಈಗಲೂ ಅದೇ ರೀತಿ ಮಾಡಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ (Rishab Shetty) ತಿರುಗೇಟು ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು. ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್​ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಅವರು ಹೇಳಿಕೊಂಡಿದ್ದಾರೆ. ಆ ಬಳಿಕ ಮೊದಲ ಸಿನಿಮಾ ಆಫರ್ ಬಂತು ಎನ್ನುವಾಗ ಅವರು ನಿರ್ಮಾಣ ಸಂಸ್ಥೆಯ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಬದಲಿಗೆ ಕೈಗಳಿಂದ ಕೋಟ್ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದ್ದಾರೆ. ಈ ವಿಡಿಯೋಗೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ರೀತಿ ನಡೆದುಕೊಂಡಿದ್ದು ಅನೇಕರಿಗೆ ಇಷ್ಟವಾಗಿಲ್ಲ.

ಇದನ್ನೂ ಓದಿ
Image
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Image
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Image
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Image
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ಈ ವಿಡಿಯೋನ ರಿಷಬ್ ಶೆಟ್ಟಿ ಕೂಡ ಗಮನಿಸಿದಂತಿದೆ. ಮತ್ತೊಂದು ಸಂದರ್ಶನದಲ್ಲಿ ರಿಷಬ್ ಇದಕ್ಕೆ ತಿರುಗೇಟು ನೀಡಿದ್ದಾರೆ. ‘ರಶ್ಮಿಕಾ, ಸಮಂತಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಇವರೆಲ್ಲರೂ ಒಳ್ಳೆಯ ಕಲಾವಿದರು. ಇವರಲ್ಲಿ ಯಾರ ಜತೆ ಕೆಲಸ ಮಾಡಲು ಇಷ್ಟಪಡುತ್ತೀರಿ’ ಎಂದು ಸಂದರ್ಶಕರು ರಿಷಬ್​ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ಒಟ್ಟೊಟ್ಟಿಗೆ ಇನ್​​ಸ್ಟಾಗ್ರಾಮ್​ಗೆ ಮರಳಿದ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ

‘ನಾನು ಕಥೆ ಹಾಗೂ ಸ್ಕ್ರಿಪ್ಟ್ ಮುಗಿದ ಬಳಿಕ ಯಾವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಯೋಚಿಸುತ್ತೇನೆ. ಹೊಸಬರ ಜತೆ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ. ನೀವು ನೀಡಿದ ಲಿಸ್ಟ್​ನಲ್ಲಿ ಈ ರೀತಿ ಸ್ಟೈಲ್​ನ​ (ಕೋಟ್ ರೀತಿಯಲ್ಲಿ ಸನ್ನೆ ಮಾಡುವ) ನಟಿಯರು ನನಗೆ ಇಷ್ಟವಾಗುವುದಿಲ್ಲ. ಸಾಯಿ ಪಲ್ಲವಿ, ಸಮಂತಾ ನನಗೆ ಇಷ್ಟ’ ಎಂದಿದ್ದಾರೆ ರಿಷಬ್. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

Published On - 7:49 am, Wed, 23 November 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ