ಪವರ್​ಹೌಸ್ ಫೋಟೋ; ವೈರಲ್ ಚಿತ್ರದಿಂದ ಅಭಿಮಾನಿಗಳಿಗೆ ಮೂಡಿದೆ ಕುತೂಹಲ

|

Updated on: Mar 02, 2024 | 6:39 AM

ಮಾರ್ಚ್​ 1ರಂದು ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜೂನಿಯರ್​ ಎನ್​ಟಿಆರ್ ಅವರು ತೆರೆಳಿದ್ದರು. ಎನ್​ಟಿಆರ್ ಜೊತೆ ಅವರ ಪತ್ನಿ, ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಈ ಫೋಟೋಗೆ ಲೈಕ್ ಒತ್ತುತ್ತಿದ್ದಾರೆ.

ಪವರ್​ಹೌಸ್ ಫೋಟೋ; ವೈರಲ್ ಚಿತ್ರದಿಂದ ಅಭಿಮಾನಿಗಳಿಗೆ ಮೂಡಿದೆ ಕುತೂಹಲ
ರಿಷಬ್-ಜೂನಿಯರ್ ಎನ್​ಟಿಆರ್-ಪ್ರಶಾಂತ್ ನೀಲ್
Follow us on

ನಟ ಪ್ರಶಾಂತ್ ನೀಲ್ (Prashanth Neel) ಅವರಿಗೆ ವಿಶ್ವಾದ್ಯಂತ ಜನಪ್ರಿಯತೆ ಇದೆ. ಅವರು ‘ಕೆಜಿಎಫ್’, ‘ಕೆಜಿಎಫ್ 2’, ‘ಸಲಾರ್’ ಅಂಥ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಮೂಲಕ ಖ್ಯಾತಿ ಪಡೆದಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ಹಲವು ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಈ ಮೂವರೂ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳ ಪಾಲಿಗೆ ಹಬ್ಬವೇ. ಇಂಥ ಪವರ್​ಹೌಸ್​ ಫೋಟೋ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಮಾರ್ಚ್​ 1ರಂದು ಪ್ರಶಾಂತ್ ನೀಲ್ ಮನೆಯಲ್ಲಿ ಕಾರ್ಯಕ್ರಮ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಜೂನಿಯರ್​ ಎನ್​ಟಿಆರ್ ಅವರು ತೆರೆಳಿದ್ದರು. ಎನ್​ಟಿಆರ್ ಜೊತೆ ಅವರ ಪತ್ನಿ, ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಈ ಫೋಟೋಗೆ ಲೈಕ್ ಒತ್ತುತ್ತಿದ್ದಾರೆ.

ಜೂನಿಯರ್​ ಎನ್​ಟಿಆರ್ ಅವರ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಈ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭ ಆಗಬೇಕಿದೆ. ‘ಕಾಂತಾರ’ ಹಾಗೂ ‘ಕೆಜಿಎಫ್’ ಸರಣಿಯನ್ನು ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲ್ಮ್ಸ್. ಹೀಗಾಗಿ, ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈಗ ಈ ಮೂವರನ್ನು ಒಟ್ಟಾಗಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಈ ರೀತಿ ಸ್ಟಾರ್​ಗಳು ಒಂದೆಡೆ ಸೇರಿದಾಗ ಸಿನಿಮಾ ಬಗ್ಗೆ ಕುತೂಹಲ ಮೂಡೋದು ಸಹಜ. ಈಗಲೂ ಹಾಗೆಯೇ ಆಗಿದೆ. ಜೂನಿಯರ್​ ಎನ್​ಟಿಆರ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಈ ಪ್ರಶ್ನೆಗೆ ಪ್ರಶಾಂತ್ ನೀಲ್ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ

ಜೂನಿಯರ್ ಎನ್​ಟಿಆರ್ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದಾದ ಬಳಿಕ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ನೀಲ್ ಅವರು ಸದ್ಯ ಬ್ರೇಕ್​ನಲ್ಲಿ ಇದ್ದಾರೆ. ಜೂನಿಯರ್ ಎನ್​ಟಿಆರ್ ‘ವಾರ್ 2’ ಕೆಲಸ ಪೂರ್ಣಗೊಳಿಸಿದ ಬಳಿಕ ಇವರ ಸಿನಿಮಾ ಕೆಲಸಗಳು ಆರಂಭ ಆಗಲಿವೆ. ರಿಷಬ್ ಶೆಟ್ಟಿ ಅವರು ‘ಕಾಂತಾರ: ಅಧ್ಯಾಯ 1’ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ