ಜಪಾನ್ನಲ್ಲಿ ಇದ್ದಾರೆ ರಶ್ಮಿಕಾ ಮಂದಣ್ಣ; ‘ಪುಷ್ಪ 2’ ಸಿನಿಮಾ ಶೂಟಿಂಗ್ ಬಗ್ಗೆ ಮೂಡಿದೆ ಅನುಮಾನ
ರಶ್ಮಿಕಾ ಮಂದಣ್ಣಗೆ ಅನಿಮೆ ಸಿನಿಮಾಗಳ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಈಗ ಜಪಾನ್ನಲ್ಲಿ ನಡೆಯುತ್ತಿರುವ ‘ಅನಿಮೆ ಅವಾರ್ಡ್’ ಕಾರ್ಯಕ್ರಮ ಒಂದಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ನಟರು ಹಾಗೂ ಗಾಯಕರು ಆಗಮಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಈ ಅವಾರ್ಡ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು ಅನ್ನೋದು ವಿಶೇಷ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ಹಲವು ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಅವರು ಸದ್ಯ ಜಪಾನ್ನಲ್ಲಿ ಇದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಹೊಸದೊಂದು ಅನುಮಾನ ಹುಟ್ಟಿಕೊಂಡಿದೆ. ‘ಪುಷ್ಪ 2’ ಚಿತ್ರದ ಕಥೆ ಜಪಾನ್ನಲ್ಲಿ ನಡೆಯಲಿದೆ ಎಂದು ಈ ಮೊದಲು ವರದಿ ಆಗಿತ್ತು. ಹೀಗಾಗಿ ರಶ್ಮಿಕಾ ಮೊದಲೇ ಜಪಾನ್ಗೆ ತೆರಳಿ ಹಾಜರಿ ಹಾಕಿರಬಹುದು ಎನ್ನುವ ಅನುಮಾನ ಅಭಿಮಾನಿಗಳಿಗೆ ಮೂಡಿತ್ತು. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ ಎಂದು ಹೇಳಲಾಗುತ್ತಿದೆ.
‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಿರ್ದೇಶಕ ಸುಕುಮಾರ್ ಅವರು ಎರಡನೇ ಪಾರ್ಟ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಮೂರನೇ ಭಾಗ ಕೂಡ ಬರಲಿದೆ ಎಂದು ನಟ ಅಲ್ಲು ಅರ್ಜುನ್ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ. ಕೆಲವು ಮೂಲಗಳ ಪ್ರಕಾರ ಸಿನಿಮಾದಲ್ಲಿ ಬರೋ ಜಪಾನ್ ಕಥೆ ಮೂರನೇ ಭಾಗದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ರಶ್ಮಿಕಾ ‘ಪುಷ್ಪ 2’ ಚಿತ್ರದ ಶೂಟಿಂಗ್ಗಾಗಿ ಜಪಾನ್ಗೆ ತೆರಳಿದ್ದಾರೆ ಎಂಬ ವಿಚಾರದಲ್ಲಿ ಯಾವುದೇ ಹುರುಳಿಲ್ಲ.
ರಶ್ಮಿಕಾ ಮಂದಣ್ಣಗೆ ಅನಿಮೆ ಸಿನಿಮಾಗಳ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಈಗ ಜಪಾನ್ನಲ್ಲಿ ನಡೆಯುತ್ತಿರುವ ‘ಅನಿಮೆ ಅವಾರ್ಡ್’ ಕಾರ್ಯಕ್ರಮ ಒಂದಕ್ಕಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ನಟರು ಹಾಗೂ ಗಾಯಕರು ಆಗಮಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಈ ಅವಾರ್ಡ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು ಅನ್ನೋದು ವಿಶೇಷ.
ಕೆಲವು ವರದಿಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಹೊಸ ಪಿಆರ್ ಏಜೆನ್ಸಿಯನ್ನು ನೇಮಕ ಮಾಡಿಕೊಂಡಿದ್ದಾರೆ. ಈ ತಂಡ ಮುಂಬೈ ಮೂಲದ್ದು. ಪಿಆರ್ ಏಜಿನ್ಸಿ ಅವರೇ ರಶ್ಮಿಕಾ ಮಂದಣ್ಣ ಅವರಿಗೆ ಈ ಅವಕಾಶ ಬರುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಳ್ಳಲು 25 ಕೆಜಿ ಹೆಚ್ಚಿಸಿಕೊಳ್ಳಲಿದ್ದಾರೆ ಈ ಸ್ಟಾರ್ ಹೀರೋ
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಜೊತೆಗೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ರೇನ್ಬೋ’, ಧನುಷ್ ನಟನೆಯ ಹೊಸ ಸಿನಿಮಾ ಸೇರಿ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಕೂಡ ದೊಡ್ಡದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




