‘ಅವರಿವರ ಕೈಕಾಲು ಹಿಡಿದಿದ್ದಕ್ಕೆ ಒಂದು ಶೋ ಸಿಕ್ತು’; ಯಶಸ್ಸಿನ ಬೆನ್ನಲ್ಲೇ ರಿಷಬ್ ಹಳೆಯ ಟ್ವೀಟ್ ವೈರಲ್

ರಿಷಬ್ ಶೆಟ್ಟಿ ಅವರು ಮೊದಲು ನಿರ್ದೇಶನ ಮಾಡಿದ ಚಿತ್ರ ‘ರಿಕ್ಕಿ’. ಈ ಸಿನಿಮಾ ತೆರೆಗೆ ಬಂದಿದ್ದು 2016ರಲ್ಲಿ. ನಕ್ಸಲೈಟ್ಸ್ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರ ಮಾಡುವಾಗ ಅವರಿಗೆ ದೊಡ್ಡ ಗುರುತು ಸಿಕ್ಕಿರಲಿಲ್ಲ. ಒಂದು ಶೋ ಪಡೆಯಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕಿತ್ತು. ಇದಕ್ಕೆ ಅವರು ಮಾಡಿರುವ ಟ್ವೀಟ್ ಸಾಕ್ಷಿ.

‘ಅವರಿವರ ಕೈಕಾಲು ಹಿಡಿದಿದ್ದಕ್ಕೆ ಒಂದು ಶೋ ಸಿಕ್ತು’; ಯಶಸ್ಸಿನ ಬೆನ್ನಲ್ಲೇ ರಿಷಬ್ ಹಳೆಯ ಟ್ವೀಟ್ ವೈರಲ್
ರಿಷಬ್

Updated on: Oct 03, 2025 | 3:00 PM

ರಿಷಬ್ ಶೆಟ್ಟಿ ಅವರು ‘ಕಾಂತರ: ಚಾಪ್ಟರ್ 1’ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ನಮ್ಮ ರಾಜ್ಯ ಮಾತ್ರವಲ್ಲ, ಪರ ರಾಜ್ಯಗಳಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ಅವರ ಭಾಷೆಯ ಸಿನಿಮಾಗಳನ್ನು ತೆಗೆದು ಈ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ. ಇದು ರಿಷಬ್ ಚಿತ್ರದ ಹೆಚ್ಚುಗಾರಿಕೆ. ಹೀಗಿರುವಾಗಲೇ ರಿಷಬ್ ಶೆಟ್ಟಿ ಈ ಮೊದಲು ಮಾಡಿದ್ದ ಟ್ವೀಟ್ ಒಂದು ವೈರಲ್ ಆಗಿದೆ. ಈ ಟ್ವೀಟ್ ನೋಡಿದ ಫ್ಯಾನ್ಸ್, ‘ಬೆಳವಣಿಗೆ ಅಂದರೆ ಇದು’ ಎಂದಿದ್ದಾರೆ.

ರಿಷಬ್ ಶೆಟ್ಟಿ ಅವರು ಮೊದಲು ನಿರ್ದೇಶನ ಮಾಡಿದ ಚಿತ್ರ ‘ರಿಕ್ಕಿ’. ಈ ಸಿನಿಮಾ ತೆರೆಗೆ ಬಂದಿದ್ದು 2016ರಲ್ಲಿ. ನಕ್ಸಲೈಟ್ಸ್ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರ ಮಾಡುವಾಗ ಅವರಿಗೆ ದೊಡ್ಡ ಗುರುತು ಸಿಕ್ಕಿರಲಿಲ್ಲ. ಒಂದು ಶೋ ಪಡೆಯಬೇಕು ಎಂದರೆ ಸಾಕಷ್ಟು ಕಷ್ಟಪಡಬೇಕಿತ್ತು. ಇದಕ್ಕೆ ಅವರು ಮಾಡಿರುವ ಟ್ವೀಟ್ ಸಾಕ್ಷಿ.

ಇದನ್ನೂ ಓದಿ
ರಚಿತಾ ರಾಮ್​ಗೆ ಡಿ ಬಾಸ್ ದರ್ಶನ್ ಮೇಲೆ ಯಾಕೆ ಅಷ್ಟು ವಿಶೇಷ ಗೌರವ ಗೊತ್ತಾ?
ಕಾಕ್ರೋಚ್ ಸುಧಿ ಕಾರಣಕ್ಕೆ ಹೊತ್ತಿ ಉರಿಯಿತು ಬಿಗ್ ಬಾಸ್ ಮನೆ
‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ರಿಕ್ಕಿ’ ಸಿನಿಮಾ 2016ರ ಜನವರಿ 22ರಂದು ರಿಲೀಸ್ ಆಯಿತು. ಫೆಬ್ರವರಿ 6ರಂದು ಅವರು ಟ್ವೀಟ್ ಒಂದನ್ನು ಮಾಡಿದ್ದರು. ಈ ಟ್ವೀಟ್​ನಲ್ಲಿ, ‘ಅಂತು ಇಂತು ಅವರಿವರ ಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾಸ್​ನಲ್ಲಿ ನಾಳೆಯಿಂದ ಸಂಜೆ 7 ಗಂಟೆ ಶೋ ಸಿಕ್ಕಿದೆ. ನೋಡಲು ಇಚ್ಚಿಸುವವರು..’ ಎಂದು ಬುಕಿಂಗ್ ಲಿಂಕ್ ನೀಡಿದ್ದರು.

ಅಂದು ರಿಷಬ್ ಶೆಟ್ಟಿ ಅವರು ಒಂದು ಶೋಗಾಗಿ ಅಂಗಲಾಚಿದ್ದರು. ಆದರೆ, ಈಗ ರಿಷಬ್ ಚಾರ್ಮ್ ಬದಲಾಗಿದೆ. ಅವರು ಜನಪ್ರಿಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಐದು ಸಾವಿರಕ್ಕೂ ಅಧಿಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಂಡಿವೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್; ‘ಪಠಾಣ್’ ದಾಖಲೆಯೇ ಉಡೀಸ್

ರಿಷಬ್​ ಶೆಟ್ಟಿಗೆ ನಿರ್ದೇಶಕನಾಗಿ ಗೆಲುವು ತಂದುಕೊಟ್ಟಿದ್ದರು. ‘ಕಿರಿಕ್ ಪಾರ್ಟಿ’ ಸಿನಿಮಾ. ಈ ಚಿತ್ರ ಕೂಡ 2016ರಲ್ಲೇ ರಿಲೀಸ್ ಆಯಿತು. ‘ಸಹಿಪ್ರಾ ಶಾಲೆ’ (2018) ಸಿನಿಮಾ ಕೂಡ ಗಮನ ಸೆಳೆಯಿತು. 2022ರ ‘ಕಾಂತಾರ’ ಚಿತ್ರ ಸೂಪರ್ ಹಿಟ್ ಆಯಿತು. ಈಗ ಅವರು ‘ಕಾಂತಾರ: ಚಾಪ್ಟರ್ 1’ ಮಾಡಿ ಯಶಸ್ಸಿನ ಉತ್ತುಂಗ ತಲುಪಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:00 pm, Fri, 3 October 25